ಪೂಜೆ ವಿಚಾರಕ್ಕೆ ಅಶ್ವಿನಿ ಮೇಲೆ ಸಿಟ್ಟಾದ ಧ್ರುವಂತ್‌! – ಇಬ್ಬರ ಜಗಳ.. ಗಿಲ್ಲಿಗೆ ಮಜಾವೋ ಮಜಾ!

ಪೂಜೆ ವಿಚಾರಕ್ಕೆ ಅಶ್ವಿನಿ ಮೇಲೆ ಸಿಟ್ಟಾದ ಧ್ರುವಂತ್‌! – ಇಬ್ಬರ ಜಗಳ.. ಗಿಲ್ಲಿಗೆ ಮಜಾವೋ ಮಜಾ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರೋಚಕ ಘಟ್ಟ ತಲುಪಿದೆ. ಕೆಲವೇ ದಿನಗಳಲ್ಲಿ ಈ ಸೀಸನ್‌ನ ಫಿನಾಲೆ ನಡೆಯಲಿದೆ. ಫಿನಾಲೆ ಹತ್ತಿರವಾಗ್ತಿದ್ದಂತೆ ಸ್ಪರ್ಧಿಗಳು ಆಟದ ವರಸೆ ಬದಲಾಯಿಸಿದ್ದಾರೆ. ಇದೀಗ ಅಶ್ವಿನಿ ಹಾಗೂ ಧ್ರುವಂತ್‌ ಮಧ್ಯೆ ಜಗಳ ನಡೆದಿದ್ದು, ಗಿಲ್ಲಿ ಮಜಾ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:40ನೇ ವಸಂತಕ್ಕೆ ಕಾಲಿಟ್ಟ ರಾಕಿಬಾಯ್‌! – ಅಭಿಮಾನಿಗಳಿಗೆ ಪ್ರೀತಿಯ ಪತ್ರ ರಾಕಿಂಗ್‌‌ ಸ್ಟಾರ್‌ ಯಶ್

ಬಿಗ್‌ಬಾಸ್ ಮನೆಯಲ್ಲಿ ಅಲ್ಲಲ್ಲಿ ಗ್ರೂಪ್‌ಗಳು ಆಗಿವೆ. ಧ್ರುವಂತ್‌-ಅಶ್ವಿನಿ ಒಂದು ಟೀಂ ಆದ್ರೆ ಉಳಿದವರು ಇನ್ನೊಂದು ಟೀಂ ಆಗಿದೆ. ಇದೀಗ ಧ್ರುವಂತ್‌ ಹಾಗೂ ಅಶ್ವಿನಿ ಮಧ್ಯೆ ಪೂಜೆ ವಿಚಾರಕ್ಕೆ ಜಗಳ ನಡೆದಿದೆ. ಕ್ಯಾಮೆರಾ ಮುಂದೆ ಧ್ರುವಂತ್‌, ಅಶ್ವಿನಿ ಬಗ್ಗೆ ಹೊಗಳಿದ್ದಾರೆ. ಅಷ್ಟೆ ಅಲ್ಲ ನನ್ನ ತಾಯಿ ಅವರು, ಭುಜ ಕೊಡುವೆ ಅಂತ ಹೇಳಿಕೊಂಡಿದ್ದಾರೆ. ಇದರ ಪ್ರೋಮೋ ರಿಲೀಸ್‌ ಆಗಿದೆ. ಅದರಲ್ಲಿ ಧ್ರುವಂತ್‌ ಹಾಗೂ ಅಶ್ವಿನಿ ಕಿತ್ತಾಡಿಕೊಂಡಿದ್ದಾರೆ.

ಪ್ರೋಮೋದಲ್ಲಿ ಧ್ರುವಂತ್‌ ಕ್ಯಾಮೆರಾ ಮುಂದೆ ಮಾತನಾಡಿ, ಎಲ್ಲರೂ ಸೇರಿಕೊಂಡು ಅವರನ್ನ ಯಾವ ರೀತಿ ಆಟ ಆಡಿಸಬಹುದು ಅಂತ ನೀವೆಲ್ಲ ನೋಡಿಬರಹುದು. ಅವರು ಏನೇ ಮಾಡಿರಲಿ ಅವರು ನನಗೆ ತಾಯಿ ಸ್ಥಾನದಲ್ಲಿ ಇರೋರು ಮನೆಯಲ್ಲಿ. ನಾನು ಅವರಿಗೆ ಭುಜ ಕೊಟ್ಟಿದ್ದೇನೆ. ಸಪೋರ್ಟ್‌ ನಿಂತಿದ್ದೇನೆ. ಒಂದೊಂದು ಸಲ ಬೇಜಾರಾಗತ್ತೆ. ರೂಮ್‌ ಒಳಗೆ ಬಂದು ಕಂಪ್ಲೇಂಟ್‌ ಮಾಡ್ತಾರೆ. ಹೊರಗಡೆ ಹೋಗಿ ಕಂದ ಅಂತ ಪಾಲಿಶ್ಡ್‌ ಆಗಿಯೋ ಮಾತಾಡ್ತಾರೆ. ಎಲ್ಲೋ ಒಂದು ಕಡೆ ನಾನು ಹಾಗೂ ಮಾಡಬಾರದು ಅನ್ಸುತ್ತೆ. ಅವರಲ್ಲಿ ಎರಡು ಮುಖ ಇದೆ ಅನ್ಸೋದು ಸಹಜ. ಆದ್ರೂ ತಾಯಿ ತಾಯಿನೇ. ಆ ಕಾರಣಕ್ಕೋಸ್ಕರ ಅವರ ಜೊತೆ ಇದ್ದು ಸಪೋರ್ಟ್‌ ಮಾಡ್ತೀನಿ. ಹಾಗಂತ ಅವರ ಗುಂಪಲ್ಲಿ ಇಲ್ಲ. ಅವರ ಆಟ ಅವರು ಆಡ್ತಾ ಇದ್ದಾರೆ. ನನ್ನ ಆಟ ನಾನು ಆಡ್ತಾ ಇದ್ದೀನಿ ಎಂದಿದ್ದಾರೆ. ಧ್ರುವಂತ್‌ ಅಶ್ವಿನಿ ಮೇಲೆ ಗರಂ ಆಗಿದ್ದನ್ನ ನೋಡಿ ಗಿಲ್ಲಿ ಮಜಾ ತೆಗೆದುಕೊಂಡಿದ್ದಾರೆ. ಧ್ರುವಂತ್‌ ಹತ್ತಿರ ಬರ್ತಿದ್ದಂತೆ,  ಏನು ಮ್ಯಾಟರ್‌ಗೆ ಜಗಳ ಆಗಿದ್ದು? ನೋಡಿ ಸಖತ್‌ ಬೇಜಾರ್‌ ಆಯ್ತು ಎಂದಿದ್ದಾರೆ ಗಿಲ್ಲಿ. ಅದಕ್ಕೆ ಧ್ರುವಂತ್‌, ಕಣ್ಣು ಮುಂದೆ ಆಗ್ತಾ ಇರೋದು ನೋಡಿಕೊಂಡು ಸುಮ್ಮನೆ ಇರೋಕೆ ಆಗ್ತಿಲ್ಲ ಎಂದಿದ್ದಾರೆ.

ಇದಕ್ಕೆ ಕುಮ್ಮಕ್ಕು ಕೊಟ್ಟ ಗಿಲ್ಲಿ, ಹೌದಣ್ಣ ಎಂದಿದ್ದಾರೆ. ರಘು ಕೂಡ ಗಿಲ್ಲಿ ಮತ್ತು ಧನುಷ್‌ ಜೊತೆ, ಅಶ್ವಿನಿ ಒಬ್ಬರೇ ಇದ್ದಾಗ, ಇವರೇ ಸಪೋರ್ಟ್‌ ಮಾಡಿದ್ದು ಎಂದಿದ್ದಾರೆ. ಇನ್ನು ಸಹವಾಸ ಬೇಡ ಅಂತ ಸೈಲೆಂಟ್‌ ಆಗ್ತೀರಾ ಅಂತ ಗಿಲ್ಲಿ ಮತ್ತಷ್ಟು ಧ್ರುವಂತ್‌ಗೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್‌, ಆಗಿರೋದು, ಆಗುತ್ತ ಇರೋದು ಎಲ್ಲದೂ ಒಳ್ಳೆಯದಕ್ಕೆ ಎಂದಿದ್ದಾರೆ ಧ್ರುವಂತ್‌. ಅಶ್ವಿನಿ ಹಾಗೂ ಧ್ರುವಂತ್‌ ಜಗಳ ಮನೆಮಂದಿ ಒಳಗೊಳಗೆ ನಕ್ಕು ಮಜಾ ತೆಗೆದುಕೊಂಡಿದ್ದಾರೆ.

Shwetha M