40ನೇ ವಸಂತಕ್ಕೆ ಕಾಲಿಟ್ಟ ರಾಕಿಬಾಯ್! – ಅಭಿಮಾನಿಗಳಿಗೆ ಪ್ರೀತಿಯ ಪತ್ರ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಸದ್ಯ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ. ಇಂದು ಸ್ಯಾಂಡಲ್‌ವುಡ್ ನ ರಾಮಾಚಾರಿಗೆ ಹುಟ್ಟುಹಬ್ಬದ ಸಂಭ್ರಮ. ರಾಕಿಂಗ್ ಸ್ಟಾರ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೀಗ ತಮ್ಮ ನೆಚ್ಚಿನ ಫ್ಯಾನ್ಸ್‌ಗೆ ಮಹತ್ವದ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಬಿಗ್‌ಶಾಕ್! – ಇನ್ಮುಂದೆ ರೈಲ್ವೇ ಟಿಕೆಟ್ ಬುಕಿಂಗ್‌ಗೆ ಆಧಾರ್ ಲಿಂಕ್ ಕಡ್ಡಾಯ!
ಕನ್ನಡ ಸಿನಿ ರಂಗದ ಕೀರ್ತಿ ಪತಾಕೆಯನ್ನ ವಿಶ್ವಮಟ್ಟದಲ್ಲಿ ಹಾರಿಸಿದ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೀಗ ರಾಕಿಂಗ್ ಸ್ಟಾರ್‌ಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದೀಗ ಯಶ್ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದಾರೆ. ಈ ಸಲವೂ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ.. ಬದಲಾಗಿ ಟಾಕ್ಸಿಕ್ ಸಿನಿಮಾದ ದೊಡ್ಡ ಸಂಭ್ರಮವನ್ನು ಮಾರ್ಚ್ 19 ರಂದು ಜೊತೆಯಾಗಿ ಆಚರಿಸೋಣವೆಂದು ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಯಶ್ ಬರೆದ ಪತ್ರದಲ್ಲೇನಿದೆ?
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ…
ನೀವು ಕೊಟ್ಟ ಪ್ರೀತಿ, ತೋರಿದ ಅಭಿಮಾನದಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಿಮ್ಮ ಮುಗಿಲೆತ್ತರದ ನಿರೀಕ್ಷೆಯನ್ನ ನಿಜವಾಗಿಸುವ ಕೆಲಸದಲ್ಲಿ ನಾನಿದ್ದೇನೆ.
ನೀವು ಈಗಾಗಲೇ ಸಂಭ್ರಮಿಸುತ್ತಿರುವುದು ಬಿಡುವಿಲ್ಲದ ಕೆಲಸದ ನಡುವೆ ಜನ್ಮದಿನವನ್ನು ನೆನಪಿಸಿದೆ. ಸಿನಿಮಾದ ಕೆಲಸ ಕೊನೆ ಹಂತದಲ್ಲಿರುವ ಕಾರಣ ನಿಮ್ಮೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ.
ನಿಮ್ಮ ನಿಷ್ಕಲ್ಮಶ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ. ಜನ್ಮದಿನದ ಸಂಭ್ರಮದಲ್ಲಿ ನನ್ನ ಮನಸ್ಸಿಗೆ ಸಂಕಟ ತರುವ ಕೆಲಸ ಅಭಿಮಾನಿಗಳಿಂದಾಗುವುದಿಲ್ಲ ಎಂಬ ನಂಬಿಕೆ ನನ್ನದು.
ಮಾರ್ಚ್ 19 ಎಲ್ಲರೂ ಸೇರಿ ಸಂಭ್ರಮಿಸೋಣ.
ನಿಮಗೆ ಒಳ್ಳೆಯದಾಗಲಿ.
ಯಶ್ ಹುಟ್ಟುಹಬ್ಬ ಆಚರಿಸುತ್ತಿಲ್ಲ ಯಾಕೆ?
2024ರಂದು ಗದಗ ಜಿಲ್ಲೆಯ ಸುರನಗಿ ಗ್ರಾಮದಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಅಭಿಮಾನಿಗಳ ಜೊತೆ ಯಶ್ ತಮ್ಮ ಹುಟ್ಟುಹಬ್ಬ ಆಚರಿಕೊಳ್ಳದಿರಲು ನಿರ್ಧರಿಸಿದ್ದು, ಕಳೆದ ವರ್ಷ ಕೂಡ ಯಶ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಈ ಬಾರಿ ನನ್ನ ಟಾಕ್ಸಿಕ್ ಸಿನಿಮಾದ ಟೀಸರ್ ಅನ್ನು ಸಂಭ್ರಮಿಸೋಣ ಎಂದಿದ್ದಾರೆ.
ಇನ್ನೂ ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಬಹು ನಿರೀಕ್ಷೆಯ ಟಾಕ್ಸಿಕ್ ಚಿತ್ರ ಇದೇ ಮಾರ್ಚ್ನಲ್ಲಿ ಬಿಡುಗಡೆ ಆಗಲಿದ್ದು, ಈಗಾಗಲೇ ಈ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಗಳ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡುತ್ತಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು ಮಾಡುತ್ತಿದೆ. ಮತ್ತೊಂದು ಕಡೆ ನಾಲ್ಕು ವರ್ಷಗಳ ನಂತರ ಯಶ್ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ.

ನೋಡಿರಿ

