ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮಗುವಿನ ನಾಮಕರಣ – ಮಗನ ಹೆಸರು ವಿಹಾನ್ ಕೌಶಲ್

ಕತ್ರಿನಾ ಕೈಫ್  ಮತ್ತು  ವಿಕ್ಕಿ ಕೌಶಲ್ ಮಗುವಿನ ನಾಮಕರಣ – ಮಗನ ಹೆಸರು ವಿಹಾನ್ ಕೌಶಲ್

ಬಾಲಿವುಡ್ ಸ್ಟಾರ್ ದಂಪತಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರು ಮಗುವಿಗೆ ನಾಮಕರಣ ಮಾಡಿರುವ ಸಂಭ್ರಮದಲ್ಲಿದ್ದಾರೆ. ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರು ಇಡುವ ಮೂಲಕ ದಂಪತಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ರಾಜಾ ಸಾಬ್ ಸಿನಿಮಾದ ನಾಚೆ ನಾಚೆ ಸಾಂಗ್ ರಿಲೀಸ್ – ಮೂವರು ನಾಯಕಿಯರ ಜೊತೆ ಪ್ರಭಾಸ್ ರೋಮ್ಯಾನ್ಸ್

ಬಾಲಿವುಡ್​​ನ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್  ತಮ್ಮ ಪುತ್ರನ ನಾಮಕರಣ ಮಾಡಿದ್ದು ಸಿಂಪಲ್ಲಾಗಿಯೇ ಮುದ್ದು ಮಗನಿಗೆ ಹೆಸರಿಟ್ಟಿದ್ದಾರೆ. 2025ರ ನವೆಂಬರ್ 7ರಂದು ಕತ್ರಿನಾ ಕೈಫ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ವಿಹಾನ್ ಕೌಶಲ್ ಎಂದು ನಾಮಕರಣ ಮಾಡಿದ್ದಾರೆ. ವಿಶೇಷವಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ , ಅಭಿಮಾನಿಗಳಿಗೆ ಸಿಹಿಸುದ್ದಿ ತಿಳಿಸಿದ್ದಾರೆ. ಮುದ್ದು ಕಂದನ ಕೈಯನ್ನು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಅಂಗೈಯಲ್ಲಿ ಇರಿಸಿಕೊಂಡಿದ್ದಾರೆ. ಈ ಫೋಟೋದ ಜೊತೆ ‘ನಮ್ಮ ಬೆಳಕಿನ ಕಿರಣ. ವಿಹಾನ್ ಕೌಶಲ್’ ಎಂದು ಕ್ಯಾಪ್ಷನ್ ನೀಡುವ ಮೂಲಕ ಮಗುವಿನ ಹೆಸರು ಏನು ಎಂಬುದನ್ನು ಈ ದಂಪತಿ ತಿಳಿಸಿದ್ದಾರೆ.

ಪ್ರಾರ್ಥನೆಗಳು ಫಲಿಸಿವೆ. ಬದುಕು ಸುಂದರವಾಗಿದೆ. ನಮ್ಮ ಬದುಕು ಬದಲಾಗಿದೆ. ಪದಗಳನ್ನು ಮೀರಿದ ಕೃತಜ್ಞತೆಗಳು ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಖುಷಿ ಹಂಚಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಪರಸ್ಪರ ಪ್ರೀತಿಸಿ ಮದುವೆ ಆದರು. 2021ರಲ್ಲಿ ಅವರ ವಿವಾಹ ನೆರವೇರಿತ್ತು. ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ವಿಕ್ಕಿ ಕೌಶಲ್ ಅವರಿಗಿಂತ ಕತ್ರಿನಾ ಕೈಫ್ 5 ವರ್ಷ ದೊಡ್ಡವರು. ಈಗ ವಿಕ್ಕಿ ಕೌಶಲ್ ಅವರಿಗೆ 37 ವರ್ಷ ವಯಸ್ಸು. ಕತ್ರಿನಾ ಕೈಫ್ ಅವರಿಗೆ 42 ವರ್ಷ ವಯಸ್ಸು.

Sulekha