ಅರ್ಜುನ್ ತೆಂಡೂಲ್ಕರ್ ಮದುವೆ ಡೇಟ್ ಫಿಕ್ಸ್ – ಯಾವಾಗ? ಎಲ್ಲಿ ಗೊತ್ತಾ?

ಅರ್ಜುನ್ ತೆಂಡೂಲ್ಕರ್ ಮದುವೆ ಡೇಟ್ ಫಿಕ್ಸ್ – ಯಾವಾಗ? ಎಲ್ಲಿ ಗೊತ್ತಾ?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ತಮ್ಮ ಬಾಲ್ಯದ ಗೆಳತಿ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕ ಅಂತಿಮಗೊಳಿಸಲಾಗಿದೆ ಎಂದು ವರದಿ ದೃಢಪಡಿಸಿದೆ. ಅರ್ಜುನ್ ತೆಂಡೂಲ್ಕರ್ ಮಾರ್ಚ್‌ 5 ರಂದು ಸಾನಿಯಾ ಅವರನ್ನು ಮದುವೆಯಾಗಲಿದ್ದಾರೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ಅರ್ಜುನ್ ವರ್ಗಾವಣೆಗೊಂಡಿದ್ದು, ವೈಯಕ್ತಿಕ ಜೀವನದಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ನಾಯಕನಾಗಿ ವೈಭವ್ ಸೂರ್ಯವಂಶಿ ಅಬ್ಬರ – U19 ODIನಲ್ಲಿ ಭರ್ಜರಿ ಶತಕ

ಕಳೆದ ಆಗಸ್ಟ್​ನಲ್ಲಿ ಅರ್ಜುನ್ ಹಾಗೂ ಸಾನಿಯಾ ಅವರ ನಿಶ್ಚಿತಾರ್ಥ ಬಹಳ ಖಾಸಗಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಹಾಜರಿದ್ದರು. ಅದಾದ ಕೆಲವು ದಿನಗಳ ಬಳಿಕ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಮಗನ ನಿಶ್ಚಿತಾರ್ಥದ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರು. ಇದೀಗ 2026 ರಲ್ಲಿ ಅರ್ಜುನ್ ಹಾಗೂ ಸಾನಿಯಾ ಹಸೆಮಣೆ ಏರಲಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಐಪಿಎಲ್ 2026 ಕ್ಕೂ ಮುಂಚಿತವಾಗಿ ವಿವಾಹದ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕವನ್ನು ಮಾರ್ಚ್ 5, 2026 ಕ್ಕೆ ನಿಗದಿಪಡಿಸಲಾಗಿದೆ. ಮಾರ್ಚ್ 3 ರಂದು ವಿವಾಹಪೂರ್ವ ಸಮಾರಂಭಗಳು ಪ್ರಾರಂಭವಾಗಲಿವೆ. ಸಾನಿಯಾ ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದು, ತೆಂಡೂಲ್ಕರ್ ಕುಟುಂಬಕ್ಕೆ ಬಹಳ ಹಿಂದಿನಿಂದಲೂ ಹತ್ತಿರವಾಗಿದ್ದಾರೆ. ವಿವಾಹ ಆಚರಣೆಗಳು ಮುಂಬೈನಲ್ಲಿ ನಡೆಯಲಿದ್ದು, ಕುಟುಂಬ, ಆಪ್ತ ಸ್ನೇಹಿತರು ಮತ್ತು ಕ್ರಿಕೆಟ್ ಜಗತ್ತಿನ ಆಯ್ದ ಕೆಲವರು ಮಾತ್ರ ಭಾಗವಹಿಸುವ ಖಾಸಗಿ ಕಾರ್ಯಕ್ರಮವಾಗಿರಲಿದೆ ಎಂದು ವರದಿಯಾಗಿದೆ.

Kishor KV