ಅಶ್ವಿನಿ ಮುಖ, ಕಿವಿಗೆ ನೀರು ಎರಚಿದ ರಾಶಿಕಾ! – ಟಾಸ್ಕ್ ವೇಳೆ ರಾಶಿಕಾ ಮಾನವೀಯತೆ ಮರೆತ್ರಾ?

ಬಿಗ್‌ಬಾಸ್ ಕನ್ನಡ ಸೀಸನ್ 12 ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆಯುತ್ತಿದೆ. ಇದೀಗ ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ. ಇದೀಗ ಅಶ್ವಿನಿ ಗೌಡ ಹಾಗೂ ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಷ್ಟೇ ಅಲ್ಲ ಟಾಸ್ಕ್ ವೇಳೆ ರಾಶಿಕಾ ಅಶ್ವಿನಿಗೆ ಸರಿಯಾಗೇ ಕಾಟಕೊಟ್ಟಿದ್ದಾರೆ. ರಾಶಿಕಾ ವರ್ತನೆಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ದಳಪತಿ ವಿಜಯ್ ಗೆ ಬಿಗ್‌ಶಾಕ್! – ಅರಬ್ ರಾಷ್ಟ್ರಗಳಲ್ಲಿ ದಳಪತಿಯ ಜನನಾಯಗನ್ ಬ್ಯಾನ್?
ಬಿಗ್‌ಬಾಸ್ ಮನೆಯಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆಯುತ್ತಿದೆ. ಇದೀಗ ರಾಶಿಕಾ ಟಾಸ್ಕ್ ವೇಳೆ ಮಾನವೀಯತೆ, ಹಿರಿಯರಿಗೆ ಕೊಡುವ ಗೌರವ ಹಾಗೂ ನಟನೆಗೆ ಗೌರವ ಕೊಡುವುದನ್ನೇ ಮರೆತು ಬಿಟ್ಟಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಬಿಗ್‌ಬಾಸ್ ನೀಡಿದ ಟಾಸ್ಕ್‌ನಲ್ಲಿ ಮ್ಯೂಟೆಂಟ್ ರಘು ಮತ್ತು ರಾಶಿಕಾ ಒಟ್ಟಾಗಿ ಆಟವಾಡಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ನಟಿ ಅಶ್ವಿನಿ ಮತ್ತು ಧ್ರುವಂತ್ ಆಟವಾಡುತ್ತಿದ್ದಾರೆ. ಈ ಟಾಸ್ಕ್‌ನಲ್ಲಿ ಒಂದು ಕಂಬವನ್ನು ಕೊಟ್ಟು ಗಟ್ಟಿಯಾಗಿ ಹಿಡಿದುಕೊಂಡಿರುವ ಸ್ಪರ್ಧಿಗಳಿಗೆ ನೀರನ್ನು ಮುಖಕ್ಕೆ ಎರಚುತ್ತಾ ಹಾಗೂ ಅವರನ್ನು ಚುಚ್ಚು ಮಾತುಗಳಿಂದ ಪ್ರವೋಕ್ ಮಾಡುತ್ತಾ ಕೈಲಿ ಹಿಡಿದಿರುವ ಕಂಬವನ್ನು ಬಿಡುವಂತೆ ಮಾಡಬೇಕು.
ಇದೀಗ ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರು ಕಂಬವನ್ನು ಹಿಡಿದುಕೊಂಡು ನಿಂತುಕೊಂಡಿದ್ದಾರೆ. ಇವರ ಮುಖಕ್ಕೆ ನೀರು ಹಾಕುತ್ತಾ ಮಾತಿನ ಮೂಲಕ ಪ್ರವೋಕ್ ಮಾಡುವ ಕೆಲಸವನ್ನು ರಾಶಿಕಾ ಮತ್ತು ರಘು ಅವರು ಮಾಡುತ್ತಿದ್ದಾರೆ.
ರಘು ಅವರು ಧ್ರುವಂತ್ ಮುಖಕ್ಕೆ ಶಕ್ತಿ ಮೀರಿ ಬಕೆಟ್‌ನಿಂದ ನೀರನ್ನು ಎರಚುತ್ತಾ ತಬ್ಬಿಬ್ಬು ಮಾಡುತ್ತಿದ್ದಾರೆ. ಇದನ್ನು ತಡೆದುಕೊಂಡು ಧ್ರುವಂತ್ ಆಟವಾಡುತ್ತಿದ್ದಾನೆ. ಆದರೆ, ಮತ್ತೊಂದೆಡೆ ರಾಶಿಕಾ ನೀರೆರಚುವ ಭರಾಟೆಗೆ ಅಶ್ವಿನಿ ಅವರು ಥರಗುಟ್ಟಿ ಹೋಗುತ್ತಿದ್ದಾರೆ. ಆದರೂ, ಜಗಜಟ್ಟಿಯಂತೆ ಕಂಬವನ್ನು ಕೈಬಿಡದೇ ಗಟ್ಟಿಯಾಗಿ ಹಿಡಿದುಕೊಂಡು ಟಾಸ್ಕ್ ಮುಂದುವರೆಸಿದ್ದಾರೆ. ಆಟದಲ್ಲಿ ಸುಲಭವಾಗಿ ಸೋಲೊಪ್ಪಿಕೊಳ್ಳದ ಅಶ್ವಿನಿ ಯಾವುದೇ ಮಾತಿನ ಬಾಣಗಳು ತನ್ನತ್ತ ಬಂದರೆ ಮಾತ್ರ ಸಹಿಸಿಕೊಳ್ಳುವುದಿಲ್ಲ.
ಟಾಸ್ಕ್‌ನ ಜೊತೆಗೆ ರಾಶಿಕಾ ಅವರು ಅಶ್ವಿನಿ ಗೌಡ ಅವರನ್ನು ಪ್ರವೋಕ್ ಮಾಡುವುದಕ್ಕೆ ಕೆಲವೊಂದು ಮಾತನ್ನು ಹೇಳುತ್ತಾರೆ. ನಾವು ಒಳ್ಳೆಯವರಂತೂ ಆಗೊಲ್ಲ, ಒಳ್ಳೆಯವರಾಗಿ ಪೋಸ್ ಕೊಡುವ ಇಂಟೆನ್‌ಷನ್ ಕೂಡ ನಮಗಿಲ್ಲ ಎನ್ನುತ್ತಾ ಜೋರಾಗಿ ನೀರೆರಚುತ್ತಾರೆ. ಇದಕ್ಕೆ ಕೋಪಗೊಂಡ ಅಶ್ವಿನಿ, ಬಂದು ತಲೆ ಮೇಲೆ ನೀರು ಹಾಕು. ನನ್ನ ಕಣ್ಣು ಉರಿಯುತ್ತಿದೆ ಎಂದು ಜೋರಾಗಿ ಕೂಗುತ್ತಾರೆ.
ಇದಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ ಮಾತನಾಡಿದ ರಾಶಿಕಾ ಇವೆಲ್ಲಾ ನಾಟಕಕಗಳು, 20 ವರ್ಷ ಆಕ್ಟಿಂಗ್ ಫೀಲ್ಡು ಅಲ್ವಾ, ಅದಕ್ಕೆ ಇಲ್ಲೂ ಬಂದು ನಾಟಕ ಮಾಡ್ತಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ತಿರುಗೇಟು ಕೊಟ್ಟ ಅಶ್ವಿನಿ ಗೌಡ ಅವರು 100 ಸಿನಿಮಾ ನಿನ್ನತರಹ ಒಂದು ಸಿನಿಮಾ ಅಲ್ಲ ಎಂದು ಹೇಳುತ್ತಾರೆ.
ಮಾತು ಮುಂದುವರೆಸಿದ ರಾಶಿಕಾ ಅಯ್ಯೋ..! ಅದಕ್ಕೆ ನೀನು ಯಾರು ಅಂತಾ ಎಷ್ಟೋ ಜನಕ್ಕೆ ಗೊತ್ತಿಲ್ಲ. ಇದಕ್ಕೆ ನಿನ್ನ ತರಹ ಜನರಿಗೆ ಗೊತ್ತಾಗೋದು ಬೇಡ ನಾವು ಎಂದು ಅಶ್ವಿನಿ ತಿರುಗೇಟು ಕೊಡುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ರಾಶಿಕಾ ನಿಮ್ಮ ತರಹನೂ ಜನರಿಗೆ ಗೊತ್ತಾಗೋದು ಬೇಡ. ಅಪಾರ್ಥ ಮಾಡಿಕೊಂಡು, ಜನರನ್ನ ಮ್ಯಾನುಪುಲೆಟ್ ಮಾಡಿಕೊಂಡು ನಿಮ್ಮಂತೆ ಮಾನ ಮರ್ಯಾದೆ ತೆಕ್ಕೊಂಡು ನಾನು ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ ರಾಶಿಕಾ ವರ್ತನೆಗೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಿರಿ

