ದಳಪತಿ ವಿಜಯ್ ಗೆ ಬಿಗ್‌ಶಾಕ್! – ಅರಬ್ ರಾಷ್ಟ್ರಗಳಲ್ಲಿ ದಳಪತಿಯ ಜನನಾಯಗನ್ ಬ್ಯಾನ್?

ತಮಿಳು ಸಿನಿ ಪ್ರೇಮಿಗಳ ಆರಾಧ್ಯ ದೈವ ದಳಪತಿ ವಿಜಯ್ ಚಿತ್ರರಂಗ ವಿದಾಯ ಹೇಳಿದ ಬೆನ್ನಲ್ಲೇ ಅವರ ಕೊನೆಯ ಚಿತ್ರ ಎನ್ನಲಾದ ಜನನಾಯಗನ್ ಚಿತ್ರದ ಮೇಲೆ ನಿರೀಕ್ಷೆ ಜೋರಾಗಿದೆ. ಇದೀಗ ಈ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಆದ್ರೀಗ ದಳಪತಿಗೆ ಶಾಕ್ ಎದುರಾಗಿದೆ. ಈ ದೇಶದಲ್ಲಿ ಜನನಾಯಗನ್ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಇದು ಮನುಷ್ಯರ ರಕ್ತ ಅಲ್ಲ.. ಕುರಿ ರಕ್ತ! – ಪ್ರಾಣಿಗಳ ರಕ್ತ ತೆಗೆದು ಸೇಲ್ ಮಾಡ್ತಿದ್ದ ಖದೀಮರು ಅರೆಸ್ಟ್!
ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರ ಜನ ನಾಯಗನ್ ಚಿತ್ರ ಜನವರಿ 9ರಂದು ರಿಲೀಸ್ ಆಗಲಿದೆ. ದೇಶ ವಿದೇಶಗಳಲ್ಲೂ ದಳಪತಿ ಫ್ಯಾನ್ಸ್ ಈ ಚಿತ್ರವನ್ನ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮಲೇಷಿಯಾ, ಸಿಂಗಪೂರ್, ಯುಎಸ್‌ಎ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಚಿತ್ರ ರಿಲೀಸ್ ರೆಡಿಯಿದೆ. ಇದೀಗ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಅರಬ್ ರಾಷ್ಟ್ರಗಳಲ್ಲಿ ಜನ ನಾಯಗನ್ ಚಿತ್ರಕ್ಕೆ ಬ್ಯಾನ್ ಭೀತಿ ಎದುರಾಗಿದೆ.
ಹೌದು. ಜನನಾಯನ್ ಸಿನಿಮಾಗೆ ಯುಎಇ, ಸೌದಿ ಅರೇಬಿಯಾ ನಿಷೇಧ ಹೇರಿರುವುದಾಗಿ ವರದಿಗಳು ತಿಳಿಸಿವೆ. ಟ್ರೇಲರ್ ನೋಡಿಯೇ ಈ ನಿರ್ಧಾರಕ್ಕೆ ಅಲ್ಲಿನ ಸರ್ಕಾರಗಳು ಬಂದಿವೆಯಂತೆ. ಇದಕ್ಕೆ ಕಾರಣ ಏನಂದ್ರೆ, ಚಿತ್ರದ ವಿಲನ್ ಪಾತ್ರಧಾರಿ ಪಾಕಿಸ್ತಾನದಿಂದ ಬಂದವನಾಗಿದ್ದು ಆತ ದೇಶದಲ್ಲಿ ಅಕ್ರಮ ಚಟುವಟಿಯಲ್ಲಿ ಭಾಗಿಯಾಗಿರುತ್ತಾನೆ. ಅವನಿಗೆ ಬುದ್ಧಿ ಕಲಿಸುವ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಇದರಿಂದಾಗಿ ಮುಸ್ಲಿಂ ಜನಸಂಖ್ಯೆಯುಳ್ಳ ರಾಷ್ಟ್ರಗಳಲ್ಲಿ ಈ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ ಎನ್ನಲಾಗುತ್ತಿದೆ.

ನೋಡಿರಿ

