ದೊಡ್ಮನೆಯಲ್ಲಿ ಅಶ್ವಿನಿ 2.O ವರ್ಷನ್! – ಮುಖವಾಡ ಬದಲಾಗುತ್ತದೆ ಎಂದ ರಕ್ಷಿತಾ!

ಬಿಗ್‌ಬಾಸ್ ಮನೆಯಲ್ಲಿ ಟಿಕೆಟ್ ಟಿ ಫಿನಾಲೆ ಟಾಸ್ಕ್ ನಡೆಯುತ್ತಿದೆ. ಇದೀಗ ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಶುರುವಾಗಿದೆ. ಇವೆಲ್ಲದ್ರ ಮಧ್ಯೆ ಅಶ್ವಿನಿ ಗೌಡ ಸೈಲೆಂಟ್ ಗೇಮ್ ಶುರುವಾಗಿದ್ದು, ರಕ್ಷಿತಾ ಅಶ್ವಿನಿಗೆ ಸರಿಯಾಗೇ ಕೌಂಟರ್ ನೀಡಿದ್ದಾರೆ.
ಇದನ್ನೂ ಓದಿ: ದಾಸನಿಗೆ ಜೈಲಿನಲ್ಲಿ ಸಾಲು ಸಾಲು ಸಂಕಷ್ಟ! – ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಮನೆಯ ಬ್ಲಾಂಕೆಟ್ ಸಿಗಲ್ಲ!
ಈ ವಾರ ಬಿಗ್‌ಬಾಸ್ ಕೊಟ್ಟ ಟಾಸ್ಕ್ನಲ್ಲಿ ಗೆಲ್ಲುವವರು ಫಿನಾಲೆ ಓಟಕ್ಕೆ ಆಯ್ಕೆ ಆಗುತ್ತಾರೆ. ಧ್ರುವಂತ್ ಮತ್ತು ಗಿಲ್ಲಿ ನಟ ನಡುವೆ ಪೈಪೋಟಿ ಬೆಳೆಯಿತು. ಮೊದಲ ಹಂತದಲ್ಲೇ ಧ್ರುವಂತ್ ಅವರು ಗಿಲ್ಲಿಯನ್ನು ಸೋಲಿಸಿದರು. ಗಿಲ್ಲಿ ಸದ್ಯ ಅವರು ಟಿಕೆಟ್ ಟು ಟಾಪ್ 6 ಆಟದಿಂದ ಹೊರಗೆ ಉಳಿಯುವಂತಾಗಿದೆ. ಇದ್ರ ಬೆನ್ನಲ್ಲೇ ಎರಡು ತಂಡಗಳನ್ನು ರಚಿಸಿ ಆಡಿ ಎಂದು ಬಿಗ್ ಬಾಸ್ ಆದೇಶಿಸಿದ್ದರು. ಅದರಂತೆ ರಾಶಿಕಾ, ರಕ್ಷಿತಾ, ರಘು ಒಂದು ಟೀಂ ಆದ್ರೆ, ಅಶ್ವಿನಿ, ಧ್ರುವಂತ್, ಕಾವ್ಯ ಮತ್ತೊಂದು ಟೀಂನಲ್ಲಿ ಆಡಿದರು. ಬಳಿಕ ಧ್ರುವಂತ್ ಟೀಂ ವಿನ್ ಆಯ್ತು. ಈಗ ಮತ್ತೊಂದು ಟಾಸ್ಕ್ ಬಿಗ್ ಬಾಸ್ ನೀಡಿದ್ದಾರೆ. ಇದ್ರಲ್ಲಿ ರಕ್ಷಿತಾ ಅಶ್ವಿನಿಯನ್ನ ಟ್ರಿಗರ್ ಮಾಡಿದ್ದಾರೆ.
ಟಾಸ್ಕ್ ವೇಳೆ ಏಕಾಗ್ರತೆ ಕೆಡಿಸಿ ಇಬ್ಬರು ಸದಸ್ಯರು ಹಿಡಿದಿರುವ ಕಂಬವನ್ನು ಬಿಡುವಂತೆ ಮಾಡಬೇಕು. ರಾಶಿಕಾ ಆಟವನ್ನು, ಏಕಾಗ್ರತೆಯನ್ನ ಹಾಳು ಮಾಡಲು ಅಶ್ವಿನಿ ಹರಸಾಹಸ ಪಟ್ಟರು. ಗಿಲ್ಲಿಕೂಡ ಅಶ್ವಿನಿಗೆ ಕೌಂಟರ್ ಕೊಡ್ತಾ ಇದ್ದರು. ಆಡುವ ಭರದಲ್ಲಿ ಯಾವುದೇ ವ್ಯಕ್ತಿತ್ವವನ್ನು ಕೆಳಗೆ ಇಡಬಾರದು ಎಂದು ಗಿಲ್ಲಿಗೆ ಟಾಂಗ್ ಕೊಟ್ಟಿದ್ದಾರೆ ಅಶ್ವಿನಿ. ರಕ್ಷಿತಾ ಕೂಡ ಅಶ್ವಿನಿಗೆ ಕೌಂಟರ್ ಕೊಟ್ಟಿದ್ದಾರೆ. ಫಸ್ಟ್ ವೀಕ್ ಇಂದ ಜನ ತೊಂದರೆ ಕೊಡ್ತಾನೇ ಇದ್ದಾರೆ. ಮುಖವಾಡ ಬೇಗ ಬದಲಾಗುತ್ತದೆ ಎಂದು ಕೌಂಟರ್ ಕೊಟ್ಟಿದ್ದಾರೆ.

ನೋಡಿರಿ

