ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ತಾಳಿ ಕಿತ್ತೆಸೆದ ಯುವತಿ! – ಪಾಗಲ್‌ ಪ್ರೇಮಿ ಮಾಡಿದ್ದೇನು ಗೊತ್ತಾ?

ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ತಾಳಿ ಕಿತ್ತೆಸೆದ ಯುವತಿ! – ಪಾಗಲ್‌ ಪ್ರೇಮಿ ಮಾಡಿದ್ದೇನು ಗೊತ್ತಾ?

ಈಗಿನ ಕಾಲದಲ್ಲಿ ಪ್ರೀತಿಗೆ ಬೆಲೆ ಇಲ್ಲ.. ಪ್ರೀತಿ ಅನ್ನೋ ಹೆಸರು ಹೇಳಿಕೊಂಡು ಮೋಸ ಮಾಡುವವರೇ ಹೆಚ್ಚು. ಇದೀಗ ಇಲ್ಲೊಂದು ಕಡೆ ಪ್ರೀತಿಸಿ ಮದುವೆಯಾದ ಜೋಡಿ ಎರಡೇ ದಿನಕ್ಕೆ ದೂರವಾಗಿದ್ದಾರೆ. ಗಂಡನ ಅಸಲಿ ಮುಖ ಗೊತ್ತಾಗ್ತಿದ್ದಂತೆ ಯುವತಿ ತಾಳಿಕಿತ್ತೆಸೆದು ತವರು ಮನೆ ಸೇರಿದ್ದಾಳೆ.

ಇದನ್ನೂ ಓದಿ: ಗಿಲ್ಲಿಗೆ ಧ್ರುವಂತ್‌ ಚಾಲೆಂಜ್‌! – ಫಿನಾಲೆ ಟಾಸ್ಕ್‌ನಿಂದ ಮಾತಿನ ಮಲ್ಲ ಔಟ್?‌  

ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದಲ್ಲಿ. ಸಂದೀಪ್‌ ಎಂಬಾತ ಚಿಕ್ಕಾಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದನು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಪ್ರಾಪ್ತೆಯೊಂದಿಗೆ ಓಡಿಹೋಗಿದ್ದ ಸಂದೀಪ್, ಚಿಕ್ಕಬಳ್ಳಾಪುರದ ಚಿಂತಾಮಣಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದನು. ಮದುವೆ ಬಳಿಕ ಅಪ್ರಾಪ್ತೆ ಜೊತೆ ಸಂದೀಪ್ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದದ್ದನು. ಶಿಡ್ಲಘಟ್ಟ ನಗರಕ್ಕೆ ಬರುತ್ತಿದ್ದಂತೆ ಕಾರ್ ಅಡ್ಡಗಟ್ಟಿದ ಅಪ್ರಾಪ್ತೆ ಪೋಷಕರು ಇಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಸಂದೀಪ್‌ ಅಸಲಿ ಬಣ್ಣ ಬಯಲಾಗಿದೆ.

ಬಾಲಕಿ ಪೋಷಕರು ಇಬ್ಬರನ್ನ ಪೊಲೀಸ್‌ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆತನ ಪ್ರೇಮ ಪ್ರಕರಣಗಳು ಬಯಲಾಗಿದೆ. ಈ ಹಿಂದೆ ಸಂದೀಪ್‌ನಿಂದ ಮೋಸಕ್ಕೊಳಗಾಗಿದ್ದ ಅಪ್ರಾಪ್ತೆ ಪೊಲೀಸ್ ಠಾಣೆಗೆ ಬಂದು ಸಾಕ್ಷಿ ಹೇಳಿದ್ದಾಳೆ. ಪ್ರಶಾಂತ್ ನಗರದಲ್ಲಿಯೂ ಮಹಿಳೆಯೊಬ್ಬರಿಗೆ ಸಂದೀಪ್ ಮೋಸ ಮಾಡಿದ್ದನು. ಈ ಸಂಬಂಧ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸಂದೀಪ್‌ ಪ್ರೇಮ ಪ್ರಕರಣ ಗೊತ್ತಾಗುತ್ತಿದ್ದಂತೆ  ಅಪ್ರಾಪ್ತೆ ಶಾಕ್‌ ಆಗಿದ್ದಾಳೆ. ಬಳಿಕ ಪೊಲೀಸರ ಮುಂದೆಯೇ ತಾಳಿ ಕಿತ್ತು ಎಸೆದಿದ್ದಾಳೆ. ಬಳಿಕ ಆಕೆ ಪೋಷಕರೊಂದಿಗೆ ಮನೆಗೆ ತೆರಳಿದ್ದಾಳೆ.

Shwetha M