ರಾಜಾ ಸಾಬ್ ಸಿನಿಮಾದ ನಾಚೆ ನಾಚೆ ಸಾಂಗ್ ರಿಲೀಸ್ – ಮೂವರು ನಾಯಕಿಯರ ಜೊತೆ ಪ್ರಭಾಸ್ ರೋಮ್ಯಾನ್ಸ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಿನಿಮಾ ಅಂದರೆ ಫ್ಯಾನ್ಸ್ ಗೆ ಹಬ್ಬ. ಇದೇ ವಾರ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ದಿ ರಾಜಾ ಸಾಬ್ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಚಿತ್ರತಂಡ ಮೂವರು ನಾಯಕಿಯರ ಜೊತೆ ಪ್ರಭಾಸ್ ರೋಮ್ಯಾನ್ಸ್ ಮಾಡುವ ಸಾಂಗ್ ರಿಲೀಸ್ ಆಗಿದೆ.
ಇದನ್ನೂ ಓದಿ:ಗಿಲ್ಲಿಗೆ ಧ್ರುವಂತ್ ಚಾಲೆಂಜ್! – ಫಿನಾಲೆ ಟಾಸ್ಕ್‌ನಿಂದ ಮಾತಿನ ಮಲ್ಲ ಔಟ್?
ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಬಹುನಿರೀಕ್ಷಿತ ಚಿತ್ರ ದಿ ರಾಜಾ ಸಾಬ್ ಬಗ್ಗೆ ಈಗಾಗಲೇ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಗರಿಗೆದರಿವೆ. ಈ ಚಿತ್ರದ ಪೋಸ್ಟರ್‌ಗಳು ಮತ್ತು ಟ್ರೇಲರ್ ಕೂಡಾ ಸಖತ್ ಸೌಂಡ್ ಮಾಡಿದೆ. ಇದೀಗ ಈ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ನಾಚೆ ನಾಚೆ ಸಾಂಗ್ ರಿಲೀಸ್ ಆಗಿದ್ದು, ಇದರಲ್ಲಿ ಹೀರೋ ಪ್ರಭಾಸ್, ಮೂವರು ನಾಯಕಿಯರ ಜೊತೆ ಹೆಜ್ಜೆ ಹಾಕಿದ್ದಾರೆ.
ಈ ಎನರ್ಜಿಟಿಕ್ ಹಾಡು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಾಸಾಬ್ ಚಿತ್ರದಲ್ಲಿ, ದೆವ್ವಗಳು ಹೆದರಿಸುವುದಲ್ಲದೆ, ಸುಂದರ ಮಹಿಳೆಯರೊಂದಿಗಿನ ತೆರೆಯ ಮೇಲಿನ ಪ್ರಣಯವೂ ರೋಮಾಂಚನಕಾರಿಯಾಗಿದೆ. ಈ ಹಾಡಿನಲ್ಲಿ, ಪ್ರಭಾಸ್ ಮೂವರು ನಾಯಕಿಯರಾದ ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಮತ್ತು ನಿಧಿ ಅಗರ್ವಾಲ್ ಅವರ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಜನವರಿ 9 ರಂದು ಈ ಸಿನಿಮಾ ರಿಲೀಸ್ ಆಗಲಿದೆ.

ನೋಡಿರಿ

