ಕೋರ್ಟ್‌ ಆದೇಶವಿದ್ರೂ ಪವಿತ್ರಾ ಗೌಡಗೆ ಮನೆ ಊಟ ಇಲ್ಲ! – ಇನ್ಮುಂದೆ ಜೈಲೂಟವೇ ಗತಿ!

ಕೋರ್ಟ್‌ ಆದೇಶವಿದ್ರೂ ಪವಿತ್ರಾ ಗೌಡಗೆ ಮನೆ ಊಟ ಇಲ್ಲ! – ಇನ್ಮುಂದೆ ಜೈಲೂಟವೇ ಗತಿ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರಲ್ಲಿರುವ ಪವಿತ್ರಾಗೆ ಮನೆ ಊಟ ನೀಡಲು ಕೋರ್ಟ್‌ ಆದೇಶಿಸಿತ್ತು. ಆದ್ರೀಗ ಜೈಲಾಧಿಕಾರಿಗಳು ಪವಿತ್ರಗೌಡಗೆ ಮನೆ ಊಟಕ್ಕೆ ಅನುಮತಿ ನೀಡದೇ ಇರಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಹೊರಗಡೆ ಬಾ.. ನಿನಗೆ ನಾನು ಒಬ್ಬನೇ ಸಾಕು! – ಧ್ರುವಂತ್‌ಗೆ ವಾರ್ನ್‌ ಮಾಡಿದ ರಘು!

ಪರಪ್ಪನ ಅಗ್ರಹಾರದಲ್ಲಿರುವ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಜೈಲಿನ ಊಟ ಹಿಡಿಸುತ್ತಿಲ್ಲ.  ಇದರಿಂದಲೇ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಮನೆಯೂಟಬೇಕೆಂದು ಆರೋಪಿ ಪವಿತ್ರ ಗೌಡ ಮನವಿ ಮಾಡಿದ್ದರು. ಜೊತೆಗೆ ನಾಗರಾಜು, ಲಕ್ಷ್ಮಣ್ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿತ್ತು. ಕೋರ್ಟ್‌ ಆದೇಶ ನೀಡಿದ್ರೂ ಜೈಲಾಧಿಕಾರಿಗಳು ಮನೆಯೂಟ ನೀಡದೇ ಇರಲು ತೀರ್ಮಾನಿಸಿದ್ದಾರೆ. ಜೈಲಿನಲ್ಲಿ  ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ ಮನೆ ಊಟ ನೀಡದೇ ಇರಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.

ಇನ್ನು ಮನೆ ಊಟ ಬಂದರೆ ಪರಿಶೀಲನೆ ಮಾಡಿದ ಬಳಿಕ ಜೈಲಿನ ಒಳಗೆ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ತಂಡ ಬೇಕಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಇರುವ 3 ಸಾವಿರ ಆರೋಪಿಗಳು ಇದೇ ಆದೇಶದ ಮೇಲೆ ಅರ್ಜಿ ಹಾಕಿದ್ದರೆ ಕಷ್ಟ ಆಗುತ್ತದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕಾರಾಗೃಹ ಇಲಾಖೆ ನಿರ್ಧಾರ ಮಾಡಿದೆ.

Shwetha M