ತಣ್ಣೀರು ಸ್ನಾನ ಮಾಡೋದು ಡೇಂಜರ್? – BP, ಶುಗರ್ ಇದ್ರೆ ಈ ತಪ್ಪು ಮಾಡ್ಲೇಬೇಡಿ!

ತಣ್ಣೀರು ಸ್ನಾನ ಮಾಡೋದು ಡೇಂಜರ್? – BP, ಶುಗರ್ ಇದ್ರೆ ಈ ತಪ್ಪು ಮಾಡ್ಲೇಬೇಡಿ!

ನಿಮಗೆ ಬಿಪಿ ಶುಗರ್‌ ಇದ್ಯಾ? ಚಳಿ ಇದ್ದಾಗಲೂ ನೀವು ತಣ್ಣೀರಲ್ಲೇ ಸ್ನಾನ ಮಾಡ್ತೀರಾ? ಹಾಗಾದ್ರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಮುಖ್ಯ. ಇಲ್ಲ ಅಂದ್ರೆ ನಿಮ್ಮ ಆರೋಗ್ಯ ಹಾಳಾಗೋದು ಫಿಕ್ಸ್.‌

ಇದನ್ನೂ ಓದಿ: ತುಂಬಾ ಚಳಿ ಇದೆ.. ಚಳಿ ಕಾಯಿಸ್ಕೋ..  – ಅಬ್ಬಬ್ಬಾ.. ಹಾವಿನ ಜೊತೆ ಕುಳಿತು ಟೈಂ‌ ಪಾಸ್ ಮಾಡಿದ ವ್ಯಕ್ತಿ!

ಈಗೀಗ ಸಿಕ್ಕಾಪಟ್ಟೆ ಚಳಿ. ಈ ಚಳಿಯಲ್ಲಿ ಸ್ನಾನ ಮಾಡೋದು ಹೇಗಪ್ಪಾ ಅನ್ನೋ ಚಿಂತೆ ಅನೇಕರಿಗೆ. ಆದ್ರೆ ಇನ್ನು ಕೆಲವರು ಎಷ್ಟೇ ಚಳಿ ಇದ್ರೂ ತಣ್ಣೀರಲ್ಲೇ ಸ್ನಾನ ಮಾಡ್ತಾರೆ. ಆದ್ರೆ ನಿಮಗೆ ಬಿಪಿ, ಶುಗರ್‌ ಇದ್ರೆ ತಣ್ಣೀರು ಸ್ನಾನ ಮಾಡೋದು ಡೇಂಜರ್‌ ಎಂದು ತಜ್ಷರು ಎಚ್ಚರಿಕೆ ನೀಡಿದ್ದಾರೆ.

ಕೆಲವರು ಮೈ ಕೊರೆಯುವ ಚಳಿಯಲ್ಲೂ ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಆದ್ರೆ ಚಳಿಗಾಲದಲ್ಲಿ ಬಿಪಿ, ಶುಗರ್‌ ಇರುವವರು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನ ಆದಷ್ಟು ಕಡಿಮೆ ಮಾಡಬೇಕು. ಯಾಕಂದ್ರೆ ಬಿಪಿ ಪೇಷೆಂಟ್‌ಗಳಲ್ಲಿ ರಕ್ತನಾಳಗಳು ಈಗಾಗಲೇ ಸೂಕ್ಷ್ಮವಾಗಿರುತ್ತವೆ. ತಣ್ಣೀರು ದೇಹದ ಮೇಲೆ ಬಿದ್ದಾಗ ನಮ್ಮ ರಕ್ತನಾಳಗಳು ಇದ್ದಕ್ಕಿದ್ದಂತೆ ಸಂಕುಚಿತಗೊಳ್ಳುತ್ತೆ. ಇದನ್ನ Vasoconstriction ಎಂದು ಕರೆಯಲಾಗುತ್ತದೆ. ಇದು ಬಿಪಿ ಹೆಚ್ಚಳಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದ್ರಿಂದ ಹಾರ್ಟ್‌ಬಿಟ್‌ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ ಹೃದಯಾಘಾತ ಅಥವಾ ಪಾರ್ಶ್ವವಾಯು ತುತ್ತಾಗೋ ಸಾಧ್ಯತೆ ಇರುತ್ತೆ.

ಇನ್ನು ಶುಗರ್‌ ಪೇಷೆಂಟ್‌ಗಳು ಕೂಡ ತಣ್ಣೀರು ಸ್ನಾನ ಮಾಡೋದು ಡೇಂಜರ್.‌  ಯಾಕಂದ್ರೆ ತಣ್ಣೀರು ಮೈಮೇಲೆ ಬೀಳುತ್ತಿದ್ದಂತೆ ದೇಹದಲ್ಲಿ ಒತ್ತಡದ ಹಾರ್ಮೋನು  ಬಿಡುಗಡೆಯಾಗುತ್ತೆ, ಇದ್ರಿಂದಾಗಿ ಶುಗರ್‌ ಲೆವೆಲ್‌ ವೇರಿಯೇಷನ್‌ ಆಗೋ ಸಾಧ್ಯತೆ ಇದೆ. ಹೀಗಾಗಿ ಬಿಪಿ ಶುಗರ್‌ ಪೇಷೆಂಟ್‌ಗಳು ಆದಷ್ಟು ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ತಣ್ಣನೆಯ ಅಥವಾ ಬಿಸಿ ನೀರನ್ನ ನೇರವಾಗಿ ನಿಮ್ಮ ತಲೆಯ ಮೇಲೆ ಸುರ್ಕೊಬೇಡಿ. ಮೊದಲು ನಿಮ್ಮ ಪಾದಗಳಿಗೆ ನೀರನ್ನ ಸುರಿಯಿರಿ, ನಂತರ ನಿಮ್ಮ ತೋಳುಗಳು ಮತ್ತು ಭುಜಗಳು ನೀರನ್ನ ಹಾಕಿಕೊಳ್ಳಿ. ಇದರಿಂದ ನಿಮ್ಮ ದೇಹವು ಕ್ರಮೇಣ ತಾಪಮಾನಕ್ಕೆ ಹೊಂದಿಕೊಳ್ಳುತ್ತದೆ. ಹೀಗೆ ಮಾಡಿದ್ರೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀಳಲ್ಲ.

Shwetha M