ಗಂಭೀರ್ ಬದಲಾಗದಿದ್ರೆ ಕೋಚ್ ಚೇಂಜ್ – 5 ತಪ್ಪು.. 2026ರಲ್ಲಿ ಡು ಆರ್ ಡೈ!
ದ್ರಾವಿಡ್ ರಂತೆ ರೋಲ್ ಕ್ಲಾರಿಟಿ ಸಿಗುತ್ತಾ?

ಗಂಭೀರ್ ಬದಲಾಗದಿದ್ರೆ ಕೋಚ್ ಚೇಂಜ್ – 5 ತಪ್ಪು.. 2026ರಲ್ಲಿ ಡು ಆರ್ ಡೈ!ದ್ರಾವಿಡ್ ರಂತೆ ರೋಲ್ ಕ್ಲಾರಿಟಿ ಸಿಗುತ್ತಾ?

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಮೂಲಕ ಟೀಂ ಇಂಡಿಯಾ ಈ ವರ್ಷದ ಜರ್ನಿ ಸ್ಟಾರ್ಟ್ ಮಾಡುತ್ತೆ. ಆಲ್ರೆಡಿ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಟೀಂ ಕೂಡ ಅನೌನ್ಸ್ ಆಗಿದೆ. ಜನವರಿ 11 ರಂದು ವಡೋದರಾದಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಸರಣಿ ಗೆಲುವಿನೊಂದಿಗೆ ಭಾರತ ಶುಭಾರಂಭ ಮಾಡ್ಬೇಕಿದೆ. ಹಾಗೇ ಈ ವರ್ಷ ಟೀಂ ಇಂಡಿಯಾ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋದ್ರ ಜೊತೆಗೆ ಗೌತಮ್ ಗಂಭೀರ್​​ ಕೋಚಿಂಗ್​ನಲ್ಲಿ ಒಂದಷ್ಟು ಚೇಂಜಸ್ ಆಗ್ಬೇಕಿದೆ. ಇಲ್ಲದೇ ಇದ್ರೆ ಪವರ್​​ ಕಳ್ಕೊಳ್ಳೋದು ಗ್ಯಾರಂಟಿ.

ಇದನ್ನೂ ಓದಿ  :  ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ರವೀಂದ್ರ ಜಡೇಜಾ – ಜಡ್ಡುಗೆ ಪಟ್ಟ ಕಟ್ಟಲು RR ತಯಾರಿ

ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗಿ 18 ತಿಂಗಳುಗಳೇ ಕಳೆದಿವೆ. ಗಂಭೀರ್ ಅವಧಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್​ನ ಟೂರ್ನಿಗಳಲ್ಲಿ ಭಾರತ ಅಜೇಯವಾಗಿ ಫೈನಲ್​ಗೇರಿ ಕಪ್ ಗೆದ್ದಿದೆ. ಆದ್ರೆ ಟೆಸ್ಟ್ ಮಾದರಿಯಲ್ಲಿ ಹೀನಾಯವಾಗಿ ಪರ್ಫಾಮ್ ಮಾಡಿದೆ. ರೆಡ್ ಬಾಲ್ ಫಾರ್ಮೆಟ್ ಫೇಲ್ಯೂರ್​ನಿಂದಾಗಿ ಗಂಭೀರ್ ವಿರುದ್ಧ ಸಾಲು ಸಾಲು ಟೀಕೆಗಳು ಎದುರಾಗಿವೆ. ಆದ್ರೆ ಈ ವರ್ಷ ಎಲ್ಲಾ ಅಡೆಗಡೆತಗಳನ್ನ ದಾಟಿ ನಿಲ್ಲಬೇಕಿದೆ. ಹಾಗೇ ಕೋಚ್ ಆಗಿ ಸರ್ವೈಸ್ ಆಗ್ಬೇಕು ಅಂದ್ರೆ ಒಂದಷ್ಟು ಚೇಂಜಸ್​ ಆಗ್ಬೇಕಿದೆ.

ಗಂಭೀರ್ ಮಾಡಿಕೊಳ್ಳಬೇಕಾದ ಬದಲಾವಣೆ!

ಬ್ಯಾಟಿಂಗ್ ಆರ್ಡರ್ ನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು

ರಾಹುಲ್ ದ್ರಾವಿಡ್ ಕೋಚಿಂಗ್ ನಲ್ಲಿದ್ದಂತೆ ರೋಲ್ ಕ್ಲಾರಿಟಿ

ಹಿರಿಯ ಆಟಗಾರರ ಜೊತೆ ಗೌರವಯುತವಾದ ನಡವಳಿಕೆ

ನಾನು ನಡೆದಿದ್ದೇ ದಾರಿ ಎನ್ನುವಂಥ ಮನಸ್ಥಿತಿ ಸುಧಾರಿಸಬೇಕು

ಮಾಜಿ ಕ್ರಿಕೆಟಿಗರಿಂದ ಕೇಳಿ ಬರುವ ಟೀಕೆಗಳ ವಿರುದ್ಧ ಸೈಲೆನ್ಸ್

ಹೀಗೆ ಗೌತಮ್ ಗಂಭೀರ್ ಪ್ರತೀ ಹೆಜ್ಜೆಯನ್ನೂ ಅಳೆದು ತೂಗಿ ಇಡಬೇಕು. ಟೀಂ ಇಂಡಿಯಾ ಜಗತ್ತಿನಲ್ಲೇ ಬಲಿಷ್ಠ ತಂಡ. ಅದ್ರಲ್ಲೂ ವೈಟ್ ಬಾಲ್ ಸಿರೀಸ್​ನಲ್ಲಿ ಕಟ್ಟಿ ಹಾಕೋರೇ ಇಲ್ಲ. ಆದ್ರೆ ಟೆಸ್ಟ್ ಕ್ರಿಕೆಟ್ ಪಾತಾಳಕ್ಕೆ ಬಿದ್ದಿದೆ. ಈ ವರ್ಷ ಅದನ್ನ ಮೇಲೆತ್ತಲೇಬೇಕಿದೆ. ಈ ಮೂಲಕ ಭಾರತದ ಜರ್ನಿಯನ್ನ ದಿ ಗ್ರೇಟ್ ಎನ್ನಿಸಿಕೊಳ್ಳೋದ್ರ ಜೊತೆಗೆ ಗಂಭೀರ್ ಕೂಡ ಎಲ್ಲರ ಮನಗೆಲ್ಲುವ ಕೆಲಸ ಮಾಡಬೇಕಿದೆ. ಇಲ್ಲದೇ ಇದ್ರೆ 2025ರ ಬಳಿಕ ಗೌತಮ್ ಗಂಭೀರ್ ಅವ್ರನ್ನ ಚೇಂಜ್ ಮಾಡಿ ಎನ್ನುವ ಕೂಗು ಜೋರಾಗುತ್ತೆ.

Shantha Kumari