ನಿಮ್ಮ ಮೇಲೆ ನಿಮ್ಮ ಮಕ್ಕಳ ಮೇಲೆ ದುಷ್ಟ ಕಣ್ಣು ಬಿದ್ದಿದ್ಯಾ – ಇಲ್ಲಿದೆ ಸಿಂಪಲ್ ಪರಿಹಾರ

ನಿಮ್ಮ ಮೇಲೆ ನಿಮ್ಮ ಮಕ್ಕಳ ಮೇಲೆ ದುಷ್ಟ ಕಣ್ಣು ಬಿದ್ದಿದ್ಯಾ –  ಇಲ್ಲಿದೆ ಸಿಂಪಲ್ ಪರಿಹಾರ

 ಎಷ್ಟೇ ಪ್ರಯತ್ನಿಸಿದರೂ, ಒದ್ದಾಡಿದ್ದರೂ ಹಾಗೂ ನಮ್ಮ ಶಕ್ತಿ ಮೀರಿ ಯತ್ನಿಸಿದರೂ, ಕಷ್ಟಗಳು ಪರಿಹಾರ ಆಗುವುದೇ ಇಲ್ಲ. ಯಾಕೆ ಅಂತ ಗೊತ್ತಾಗಲ್ಲ.  ಒಮ್ಮೊಮ್ಮೆ ಯಾರಾದರ ಕೆಟ್ಟ ದೃಷ್ಟಿ ಬಿದ್ದರೆ ಅಥವಾ ದುಷ್ಟ ಕಣ್ಣು  ತಗ್ಗಿದ್ದರೆ ಇಂತಹ ಸಂಕಷ್ಟಗಳು ಎದುರಾಗುತ್ತವೆ. ದುಷ್ಟ ಕಣ್ಣು ನಿಮ್ಮ ವ್ಯವಹಾರ, ವ್ಯಾಪಾರ ಅಥವಾ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರಲಿದ್ದು, ಕೆಲವೊಮ್ಮೆ ಈ ಕೆಟ್ಟ ದೃಷ್ಟಿಯಿಂದ ಸಂಬಂಧಗಳಲ್ಲಿಯೂ ಬಿರುಕು ಮೂಡುತ್ತದೆ.  ಒಬ್ಬರ ದುಷ್ಟ ಕಣ್ಣು ಯಾವುದರ ಮೇಲಾದರೂ ಇದ್ದಾಗ, ಆ ವ್ಯಕ್ತಿಗೆ ಕೆಟ್ಟದಾಗುತ್ತಾ ಹೋಗುತ್ತದೆ. ಈ ಕೆಟ್ಟ ದೃಷ್ಟಿಗೆ ಎಷ್ಟು ಶಕ್ತಿ ಇದೆ ಎಂದರೆ, ನಿಮ್ಮನ್ನು ಸಂಪೂರ್ಣವಾಗಿ ಕಷ್ಟದಲ್ಲಿ ಮುಳುಗಿಸಲಿದ್ದು, ನಿಮ್ಮ ಅವನತಿಗೂ ಕಾರಣವಾಗುತ್ತದೆ. ಹಾಗಿದ್ರೆ ಈ ಕಷ್ಟ ಪರಿಹರಿಕೊಳ್ಳುವುದು ಹೇಗೆ ಅನ್ನೋದ್ದನ್ನ ನೋಡೋಣ.

ಹಿಟ್ಟಿನ ದೀಪ

ಮಗುವಿನ ಮೇಲೆ ಬಿದ್ದ ಕೆಟ್ಟ ದೃಷ್ಟಿಯ ಹುಟ್ಟಡಾಗಿಸುವ ಶಕ್ತಿ ಹಿಟ್ಟಿನ ದೀಪಕ್ಕಿದ್ದು, ದೃಷ್ಟಿ
ತೆಗೆಯಲು ಹಿಟ್ಟಿನ ದೀಪವನ್ನು ಮಾಡಬೇಕು, ನಂತರ ಆ ದೀಪದಲ್ಲಿ ನಾಲ್ಕು ಬತ್ತಿಗಳನ್ನು ಇಟ್ಟು ಎಳ್ಳೆಣ್ಣೆಯನ್ನು ಹಾಕಬೇಕು. ಬಳಿಯ ದೀಪವನ್ನು ಹಚ್ಚಿ, ನಿಮ್ಮ ಮಗುವಿನ ತಲೆಯಿಂದ ಪಾದದವರೆಗೂ 21 ಬಾರಿ ನಿವಾಳಿಸಿ, ಅದನ್ನು ಮೂರು ರಸ್ತೆ ಕೂಡುವ ಮಾರ್ಗದಲ್ಲಿ ಹಾಕಬೇಕು ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ.

 ಅಡುಗೆಮನೆಯ ವಸ್ತುಗಳು ಮದ್ದು

ನಿಮ್ಮ ಮಗುವಿನ ಯಾರಾದರ ಕೆಟ್ಟ ದೃಷ್ಟಿ ಬಿದಿದ್ದರೆ, ಏಳು ಮೆಣಸಿನಕಾಯಿಗಳು, ಸ್ವಲ್ಪ ಉಪ್ಪು ಮತ್ತು ಅರಿಶಿನವನ್ನು ತೆಗೆದುಕೊಂಡು ಮಗುವಿನ ತಲೆ ಸುತ್ತ ಏಳು ಬಾರಿ ನಿವಾಳಿಸಿ ಬೆಂಕಿಗೆ ಅರ್ಪಿಸಿ. ದೇವರ ದಯೆಯಿಂದ ನಿಮ್ಮ ಮಕ್ಕಳ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ಹೋಗುತ್ತದೆ ಇದರ ಹೊರತಾಗಿ ಮಕ್ಕಳಿಗೆ ಪಂಚಮುಖಿ ಹನುಮಂತನ ಪದಕ ಇರುವ ಸರವನ್ನು ಮಗುವಿನ ಕತ್ತಿಗೆ ಹಾಕುವುದರಿಂದ ಕೆಟ್ಟ ದೃಷ್ಟಿಯ ಪರಿಣಾಮಗಳು ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ ಮತ್ತು ಯಾರ ಕೆಟ್ಟ ಕಣ್ಣುಗಳನ್ನು ಸುಲಭವಾಗಿ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.

ಇನ್ನು ದೊಡ್ಡವರ ಮೇಲೆ ದುಷ್ಟ ಕಣ್ಣು ಬಿದ್ದಾಗ ಅವರು, ಕಷ್ಟಗಳ ವಿಮೋಚಕನಾಗಿರುವ ಹನುಮಂತನನ್ನು ತೊಂದರೆಗಳ ವಿಮೋಚಕ ಎಂದು ಪರಿಗಣಿಸಲಾಗುತ್ತದೆ. ಅವನು ಎಲ್ಲಾ ತೊಂದರೆಗಳನ್ನು ನಾಶಮಾಡುವವನು. ಆದ್ದರಿಂದ, ಪ್ರತಿದಿನ ನಿಮ್ಮ ಮಗುವನ್ನು ಕೂರಿಸಿಕೊಂಡು ಭಜರಂಗ್ ಬಾನ್ ಪಠಣವನ್ನು ಪಠಿಸಬೇಕು. ಇದಲ್ಲದೇ ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಣ ಮಾಡಿ. ಇದು ನಿಮ್ಮ ಮನೆಗೆ ಬರುವ ಎಲ್ಲಾ ಅಡೆತಡೆಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತದೆ.ಕೆ

Kishor KV