ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ರವೀಂದ್ರ ಜಡೇಜಾ – ಜಡ್ಡುಗೆ ಪಟ್ಟ ಕಟ್ಟಲು RR ತಯಾರಿ

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾರನ್ನ ರಾಜಸ್ಥಾನ್ ರಾಯಲ್ಸ್ , ಸಿಎಸ್ಕೆ ಇಂದ ಟ್ರೇಡ್ ಮೂಲಕ ತಂಡಕ್ಕೆ ಕರೆತಂದಿದೆ. ಇದೀಗ ರವೀಂದ್ರ ಜಡೇಜಾರನ್ನ ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರಿನ ಸಿನಿಮಾ ಥಿಯೇಟರ್ನ ಲೇಡಿಸ್ ವಾಶ್ರೂಂನಲ್ಲಿತ್ತು ಸೀಕ್ರೆಟ್ ಕ್ಯಾಮೆರಾ!
ರಾಜಸ್ಥಾನ್ ರಾಯಲ್ಸ್ ತಂಡ ಹೊಸ ನಾಯಕನ ಮೂಲಕ ಜೋಶ್ನಲ್ಲೇ ಈ ಬಾರಿ ಐಪಿಎಲ್ಗೆ ಎಂಟ್ರಿಕೊಡಲಿದೆ. ಆರ್ ಆರ್ ಪ್ರಾಂಚೈಸಿ ತನ್ನ ಎಕ್ಸ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಜಡೇಜಾ ನಾಯಕ ಎಂಬ ಸುಳಿವು ನೀಡಿದೆ. ಗುಜರಾತ್ನ ಜಾಮ್ನಗರದ 37 ವರ್ಷದ ಈ ಆಟಗಾರ, ಡಿಸೆಂಬರ್ 16, 2025ರಲ್ಲಿ ನಡೆದ ಐಪಿಎಲ್ 2026ರ ಆಕ್ಷನ್ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದಿಂದ ಟ್ರೇಡ್ ಮೂಲಕ ರಾಜಸ್ಥಾನ್ ರಾಯಲ್ಸ್ ಸೇರಿದ್ದರು. ಜಡೇಜಾ ಈ ಮೊದಲು 2008ರಿಂದ 2009ರವರೆಗೆ ಆರ್ಆರ್ ತಂಡದಲ್ಲಿ ಆಡಿದ್ದರು. 2012ರಿಂದ 2025ರವರೆ ಸಿಎಸ್ಕೆ ತಂಡದ ಭಾಗವಾಗಿದ್ದರು. ಜಡೇಜಾ 2022ರಲ್ಲಿ ಸಿಎಸ್ಕೆ ತಂಡವನ್ನು 8 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಆದರೆ ಒತ್ತಡ ನಿರ್ವಹಿಸಲು ವಿಫಲರಾದ ಹಿನ್ನಲೆ ಸ್ವತಃ ಜಡೇಜಾ ನಾಯಕತ್ವವನ್ನ ಧೋನಿಗೆ ಬಿಟ್ಟುಕೊಟ್ಟಿದ್ದರು. ಸಂಜು ಸ್ಯಾಮ್ಸನ್ ಸಿಎಸ್ಕೆಗೆ ಹೋದ ನಂತರ ನಾಯಕತ್ವದ ಸ್ಥಾನ ಖಾಲಿ ಆಗಿತ್ತು. ಸಂಜು ಬದಲಿಗೆ ಜಡೇಜಾ ಮತ್ತು ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಅನ್ನು ಆರ್ಆರ್ ಪಡೆದುಕೊಂಡಿತ್ತು. ಮೊದಲಿಗೆ ನಾಯಕತ್ವಕ್ಕೆ ರಿಯಾನ್ ಪರಾಗ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರಲ್ಲಿ ಒಬ್ಬರು ತಂಡದ ನಾಯಕರಾಗಬಹುದು ಎಂಬ ಊಹಾಪೋಹಗಳಿದ್ದವು. ಇದೀಗ ರವೀಂದ್ರ ಜಡೇಜಾ ನಾಯಕನ ಪಟ್ಟಕ್ಕೇರಲಿದ್ದಾರೆ.

ನೋಡಿರಿ

