ಮದುವೆ ಬಗ್ಗೆ ಭವಿಷ್ಯ ಕೇಳಿದ ಯುವತಿ! – ಅಬ್ಬಬ್ಬಾ.. ಆನ್‌ಲೈನ್ ಗುರೂಜಿ ಮಾಡಿದ್ದೇನು ಗೊತ್ತಾ?

ಇದು ಆನ್‌ಲೈನ್ ಜಮಾನ. ಈಗ ಎಲ್ಲವೂ ಆನ್‌ಲೈನ್ ಮೂಲಕವೇ ಸಿಗುತ್ತದೆ. ಇದೀಗ ಇಲ್ಲೊಬ್ಬಳು ಮದುವೆ ಬಗ್ಗೆ ಆನ್‌ಲೈನಲ್ಲಿ ಭವಿಷ್ಯ ಕೇಳಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡಿದ್ದಾಳೆ. ಇದೀಗ ಯುವತಿ ಗುರೂಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.
ಇದನ್ನೂ ಓದಿ: ನಿನಗೆ ಒರಗಿಕೊಳ್ಳೋಕೆ ರಘು ಹೆಗಲು, ತೊಡೆ ಬೇಕು! – ರಾಶಿಕಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅಶ್ವಿನಿ
ಸಾಮಾಜಿಕ ಜಾಲತಾಣದಲ್ಲಿ ಕಷ್ಟಕ್ಕೆ ಪರಿಹಾರ ಎಂದು ಜಾಹೀರಾತು ಪ್ರಕಟಿಸಲಾಗಿತ್ತು. ಆ ಜಾಹೀರಾತು ಗಮನಿಸಿದ ಬೆಂಗಳೂರಿನ ಆಡುಗೋಡಿ ನಿವಾಸಿಯ ಯುವತಿಯೊಬ್ಬಳು ತನಗೆ ಮದುವೆ ಆಗುತ್ತದೆಯೇ ಎನ್ನುವುದರ ಬಗ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅದಕ್ಕೆ ಗುರೂಜಿ ಮದುವೆ ಆಗುತ್ತದೆ. ಆದರೆ, ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಒಪ್ಪಿಕೊಂಡ ಯುವತಿ ಗುರೂಜಿ ಸೂಚನೆ ಮೇರೆಗೆ ಆತ ನೀಡಿದ್ದ ನಂಬರ್‌ಗೆ ಆನ್‌ಲೈನ್ ಮೂಲಕ ಕಳೆದ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ₹2.05 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.
ಹಣ ನೀಡಿದ ಬಳಿಕ ಯುವತಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಆಕೆ ಹಣ ವಾಪಸ್ ಕೇಳಿದ್ದಾಳೆ. ಅದಕ್ಕೆ ಹಣ ನೀಡುವುದಿಲ್ಲ. ಏನು ಮಾಡುತ್ತಿಯೋ ಮಾಡಿಕೋ ಎಂದು ಗುರೂಜಿ ಬೆದರಿಕೆ ಹಾಕಿದ್ದಾನೆ. ಇದೀಗ ಈ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ ಗುರೂಜಿ ಚಂದ್ರಶೇಖರ್ ಸುಗತ್ ಗುರೂಜಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ನೋಡಿರಿ

