ಗಿಲ್ ಕ್ಯಾಪ್ಟನ್ಸಿಯಲ್ಲೇ NZ ಸರಣಿ – ಶ್ರೇಯಸ್ ವಾಪಸ್.. ಇಲ್ಲೂ ರಾಣಾ!
KLರಂತೆ ಗಟ್ಟಿಯಾಗಿ ನಿಲ್ತಾರಾ ಪ್ರಸಿದ್ಧ್?

ಅಂತೂ ಇಂತೂ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ಯಾಡ್ ಅನೌನ್ಸ್ ಆಯ್ತು. ಶುಭ್ಮನ್ ಗಿಲ್ ಕ್ಯಾಪ್ಟನ್ ಆಗಿ ಹಾಗೇ ಶ್ರೇಯಸ್ ಅಯ್ಯರ್ ವೈಸ್ ಕ್ಯಾಪ್ಟನ್ ಆಗಿ ಟೀಮ್ಗೆ ಕಂ ಬ್ಯಾಕ್ ಮಾಡಿದ್ದಾರೆ. ಜನವರಿ 11 ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ 15 ಸದಸ್ಯರ ತಂಡವನ್ನ ಪ್ರಕಟ ಮಾಡಲಾಗಿದೆ. ಏನ್ ಪ್ರಸ್ತುತ ವಿಜಯ್ ಹಜಾರೆ ಟೂರ್ನಿಯಲ್ಲಿ ಅಬ್ಬರಿಸ್ತಿರೋ ಅವ್ರು ಯಾರಿಗೂ ಚಾನ್ಸ್ ಕೊಡೋ ಗೋಜಿಗೇ ಹೋಗಿಲ್ಲ. ಮೊದ್ಲು ತಂಡದಲ್ಲಿ ಯಾರಿದ್ರೋ ಅವ್ರನ್ನೇ ಕಂಟಿನ್ಯೂ ಮಾಡಿದ್ದಾರೆ.
ಇದನ್ನೂ ಓದಿ : 10 ವರ್ಷದ ಬಳಿಕ ಹುಟ್ಟಿದ ಮಗುವನ್ನ ಬಲಿ ಪಡೆದ ಒಂದು ಹನಿ ನೀರು – ಅಯ್ಯೋ ವಿಧಿಯೇ.. ನೀನೆಷ್ಟು ಕ್ರೂರಿ
ಏಕದಿನ ಸರಣಿಗೆ ತಂಡ ಪ್ರಕಟ!
ಶುಭಮನ್ ಗಿಲ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಕೆಎಲ್ ರಾಹುಲ್
ಶ್ರೇಯಸ್ ಅಯ್ಯರ್
ವಾಷಿಂಗ್ಟನ್ ಸುಂದರ್
ರವೀಂದ್ರ ಜಡೇಜಾ
ಮೊಹಮ್ಮದ್ ಸಿರಾಜ್
ಹರ್ಷಿತ್ ರಾಣಾ
ಪ್ರಸಿದ್ಧ್ ಕೃಷ್ಣ
ಕುಲದೀಪ್ ಯಾದವ್
ರಿಷಭ್ ಪಂತ್
ನಿತೀಶ್ ಕುಮಾರ್ ರೆಡ್ಡಿ
ಅರ್ಶದೀಪ್ ಸಿಂಗ್
ಯಶಸ್ವಿ ಜೈಸ್ವಾಲ್
ಸೋ ಹೀಗೆ ಟೋಟಲ್ಲಾಗಿ 15 ಆಟಗಾರರು ಸೆಲೆಕ್ಟ್ ಆಗಿದ್ದಾರೆ. ಇಲ್ಲಿ ಅಚ್ಚರಿ ಅನ್ಸುವಂಥ ಯಾವ ಪ್ಲೇಯರ್ ಕೂಡ ಇಲ್ಲ. ಅಂದ್ರೆ ಆಲ್ಮೋಸ್ಟ್ ಹಳಬರೇ ಇದ್ದಾರೆ. ಹೊಸಬರು ಯಾರು ಇಲ್ಲ. ಬ್ಯಾಟರ್ಗಳಾಗಿ ಗಿಲ್, ರೋಹಿತ್, ಕೊಹ್ಲಿ, ಶ್ರೇಯಸ್, ಜೈಸ್ವಾಲ್ ಇದ್ದಾರೆ.. ವಿಕೆಟ್ ಕೀಪರ್ಗಳಾಗಿ ಕೆಎಲ್ ರಾಹುಲ್ ಮತ್ತು ಪಂತ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಲ್ರೌಂಡರ್ ಗಳಾಗಿ ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ ಅವಕಾಶ ಪಡೆದಿದ್ದಾರೆ. ಉಳಿದಂತೆ ಬೌಲರ್ಗಳಾಗಿ ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಇದ್ದಾರೆ. ಸೋ ಈ ಸರಣಿಗೆ ಇಬ್ಬರು ಕನ್ನಡಿಗರಿಗೆ ಅವಕಾಶ ಸಿಕ್ಕಿದೆ. ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಇಬ್ಬರೂ ಇದ್ದಾರೆ. ವಿಜಯ್ ಹಜಾರೆಯಲ್ಲಿ ಅಬ್ಬರಿಸ್ತಿರೋ ದೇವದತ್ ಪಡಿಕ್ಕಲ್ ಆಗ್ಲಿ, ಸರ್ಫರಾಜ್ ಆಗ್ಲಿ ಅಥವಾ ಗಾಯಕ್ವಾಡ್ ಆಗ್ಲಿ ಅವಕಾಶ ಪಡೆದಿಲ್ಲ. ಒಂಥರಾ ಎಕ್ಸ್ಪೆಕ್ಟೆಡ್ ಅನ್ನೋ ಥರನೇ ಇದ್ದಾರೆ.
ಸಂಭಾವ್ಯ ಪ್ಲೇಯಿಂಗ್ 11
ಶುಭ್ ಮನ್ ಗಿಲ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ರವೀಂದ್ರ ಜಡೇಜಾ
ವಾಷಿಂಗ್ಟನ್ ಸುಂದರ್ / ನಿತೀಶ್ ರೆಡ್ಡಿ
ಕುಲ್ದೀಪ್ ಯಾದವ್
ಅರ್ಶದೀಪ್ ಸಿಂಗ್
ಪ್ರಸಿದ್ಧ್ ಕೃಷ್ಣ
ಮೊಹಮ್ಮದ್ ಸಿರಾಜ್
ಇವ್ರಿಷ್ಟು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಬೋದು. ಉಳಿದಂತೆ ಯಶಸ್ವಿ ಜೈಸ್ವಾಲ್ ಬ್ಯಾಕಪ್ ಬ್ಯಾಟರ್ ಆಗಿ ರಿಷಭ್ ಪಂತ್ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಹಾಗೇ ಹರ್ಷಿತ್ ರಾಣಾ ಬೆಂಚ್ ಕಾಯುವಂಥ ಚಾನ್ಸಸ್ ಇದೆ. ಆದ್ರೆ ಇಲ್ಲಿ ಮೊಹಮ್ಮದ್ ಶಮಿಯನ್ನ ಆಯ್ಕೆ ಮಾಡದೇ ಮೋಸ ಮಾಡಿದರು ಅನ್ನಿಸುತ್ತಿದೆ. ಹರ್ಷಿತ್ ರಾಣಾಗಿಂತ ಶಮಿ 100 ಪಾಲು ಉತ್ತಮ ಆಯ್ಕೆಯಾಗಿದ್ರು.

ನೋಡಿರಿ

