ಈ ಹೊತ್ತಲ್ಲಿ ಮೊಸರು ತಿನ್ನುತ್ತೀರಾ? ಹುಷಾರ್..‌ ಈ ಕಾಯಿಲೆ ಬರುತ್ತೆ!

ಈ ಹೊತ್ತಲ್ಲಿ ಮೊಸರು ತಿನ್ನುತ್ತೀರಾ? ಹುಷಾರ್..‌ ಈ ಕಾಯಿಲೆ ಬರುತ್ತೆ!

ನೀವು ಮೊಸರು ತಿಂತೀರಾ? ಹಾಗಾದ್ರೆ ನೀವು ಈ ಸ್ಟೋರಿ ನೋಡ್ಲೇಬೇಕು. ಈ ಹೊತ್ತಲ್ಲಿ ಮೊಸರು ತಿಂದ್ರೆ ನಿಮ್ಮ ಆರೋಗ್ಯ ಹಾಳಾಗ್ಬೋದು. ಹಾಗಾದ್ರೆ ಮೊಸರು ಆರೋಗ್ಯದ ಮೇಲೆ ಹೇಗೆ ಎಫೆಕ್ಟ್‌ ಬೀಳುತ್ತೆ. ಯಾವ ಹೊತ್ತಲ್ಲಿ ಮೊಸರು ತಿನ್ಬೇಕು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಧಿಕಾರ ಕೊಟ್ಟಾಗ, ನಮ್ಮಲ್ಲಿರೋ ಅಹಂಕಾರ ಹೊರಗೆ ಬರತ್ತೆ ಅನ್ನೋದಕ್ಕೆ ಗಿಲ್ಲಿನೇ ಸಾಕ್ಷಿ – ಕಿಚ್ಚನ ಮುಂದೆಯೇ ಕಿಡಿಕಾರಿದ ಸ್ಪರ್ಧಿಗಳು!

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಇದ್ರಿಂದಾಗಿ ಸಾಕಷ್ಟು ಬೆನಿಫಿಟ್ಸ್‌ ಇದೆ.  ಹೀಗಾಗಿ ಅನೇಕ ಜನರು ಮೊಸರು ಇಲ್ಲದೆ ಊಟವನ್ನೇ ಮಾಡುವುದಿಲ್ಲ. ಆದ್ರೆ  ಮೊಸರು ತಿನ್ನುವುದು ಒಳ್ಳೆಯದೇ. ಆದರೆ ಅತಿಯಾಗಿ ತಿನ್ನಬಾರದು. ಇದ್ರಿಂದಾಗಿ ಆರೋಗ್ಯ ಸಮಸ್ಯೆ ಕಾಡುತ್ತೆ.

ಮೊಸರನ್ನ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಯಾವಾಗ ತಿನ್ಬೇಕು ಅನ್ನೋದ್ರ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಮೊಸರು ತಿನ್ನಲು ಕೆಲವು ನಿಯಮಗಳಿವೆ. ರಾತ್ರಿಯ ಸಮಯದಲ್ಲಿ ಮೊಸರು ತಿನ್ನಬಾರದು. ರಾತ್ರಿಯ ಹೊತ್ತಿನಲ್ಲಿ ಮೊಸರು ತಿನ್ನುವುದರಿಂದ ಶೀತ, ಕೆಮ್ಮು, ಸೈನಸ್ ಮತ್ತು ಕಫ ಹೆಚ್ಚಾಗುತ್ತದೆ.‎ ಏಕೆಂದರೆ ಮೊಸರು ತಂಪಾಗಿಸುವ ಗುಣಗಳನ್ನು ಹೊಂದಿದೆ. ರಾತ್ರಿ ಹೊತ್ತಿನಲ್ಲಿ ಮೊಸರು ತಿಂದಾಗ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ರಾತ್ರಿ ಮೊಸರು ತಿನ್ನೋದನ್ನ ಆದಷ್ಟು ಅವಾಯ್ಡ್‌ ಮಾಡಿ.

ಇನ್ನು ಮೊಸರನ್ನ ಮಧ್ಯಾಹ್ನದ ಸಮಯದಲ್ಲಿ ತಿನ್ನುವುದು ಉತ್ತಮ. ‎ಈ ಸಮಯದಲ್ಲಿ ಜೀರ್ಣಕ್ರಿಯೆ ವೇಗವಾಗಿ ನಡೆಯುತ್ತದೆ. ದೇಹವು ಮೊಸರಿನಲ್ಲಿರುವ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಮೊಸರು ಪ್ರೋಬಯಾಟಿಕ್‌ಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

‎ಇನ್ನು ಹುರಿದ ಜೀರಿಗೆಯೊಂದಿಗೆ ಮೊಸರು ತಿನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ಮಲಬದ್ಧತೆ ಅಥವಾ ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಮೊಸರು ತಿನ್ನುವುದರಿಂದ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹ ದಣಿದಿದ್ದರೆ ಮತ್ತು ದುರ್ಬಲವಾಗಿದ್ದರೆ ನಿಯಮಿತವಾಗಿ ಮೊಸರು ತಿನ್ನುವುದು ಒಳ್ಳೆಯದು. ಏಕೆಂದರೆ ಅದು ನಿಮಗೆ ಶಕ್ತಿಯನ್ನು ನೀಡುತ್ತದೆ.

ಇನ್ನು ಮೊಸರಿಗೆ ಹುರಿದ ಜೀರಿಗೆ ಪುಡಿಯನ್ನು ಸೇರಿಸುವುದು ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ. ಮೊಸರಿಗೆ ಸಕ್ಕರೆ ಅಥವಾ ಉಪ್ಪು ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ. ಎರಡು ಪಟ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೀಗಾಗಿ ಆದಷ್ಟು ಮಧ್ಯಾಹ್ನದ ವೇಳೆ ಮೊಸರನ್ನ ಸೇವಿಸಿ.

Shwetha M