ಅಯ್ಯೋ.. ಕಾಡಲ್ಲೂ ನಂಗೆ ಪ್ರೈವೆಸಿ ಇಲ್ವಾ? – ಪ್ರಾಣಿಗಳ ಚಲನವಲನದ ವೀಕ್ಷಣೆಗೆ ಇರಿಸಿದ ಕ್ಯಾಮರಾ ಕಿತ್ತೆಸೆದ ಆನೆ

ಮನುಷ್ಯರಿಗಿಂತ ಪ್ರಾಣಿಗಳಿಗೆ ಪ್ರತಿಯೊಂದರ ಬಗ್ಗೆ ಹೆಚ್ಚು ಜ್ಞಾನ ಇರುತ್ತೆ. ಪ್ರಕೃತಿಯನ್ನ ಹೆಚ್ಚಾಗಿ ಅರ್ಥ ಮಾಡಿಕೊಂಡಿರುವುದು ಮನುಷ್ಯರೇ. ತನ್ನ ಸುತ್ತಮುತ್ತ ಬೆಳವಣಿಗೆಯ ಬಗ್ಗೆ ಸಾಕಷ್ಟು ಜಾಗ್ರತೆಯಿಂದ ಇರುತ್ತವೆ. ಇದೀಗ ಇಲ್ಲೊಂದು ಆನೆ ಕಾಡಿನಲ್ಲಿರುವ ಸಿಸಿ ಕ್ಯಾಮೆರಾವನ್ನ ಕಿತ್ತೆಸೆದಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ರೀಲ್ಸ್ ಮಾಡಿ, ಕೋಟಿ ರೂಪಾಯಿ ಗೆಲ್ಲಿ! – ಕೊರಗಜ್ಜ ಚಿತ್ರತಂಡದ ಆಫರ್‌ಗೆ ದೈವ ನರ್ತಕರಿಂದ ಆಕ್ರೋಶ!
ಕಾಡಾನೆಗಳು ಬಹಳ ಜಾಣ್ಮೆಯಿಂದ ಎಲ್ಲವನ್ನೂ ಗಮನಿಸುತ್ತಿರುತ್ತವೆ. ತಮ್ಮ ವೈಯಕ್ತಿಕ ಸ್ಥಳವನ್ನು ಬೇರೆಯವರು ಆಕ್ರಮಿಸುವುದನ್ನು ಆನೆಗಳು ಸೇರಿದಂತೆ ಯಾವ ಪ್ರಾಣಿಗಳು ಇಷ್ಟಪಡುವುದಿಲ್ಲ. ಇಲ್ಲೊಂದು ಕಡೆ ಆನೆಯೊಂದು ಕಾಡಿನಲ್ಲಿ ಆಳವಡಿಸಲಾಗಿದ್ದ ಕ್ಯಾಮರಾವನ್ನು ಕಿತ್ತೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಕಾಡಾನೆಯ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 28 ಸೆಕೆಂಡ್‌ಗಳ ವೀಡಿಯೋದಲ್ಲಿ ಕಾಡಾನೆ ಕ್ಯಾಮರಾವನ್ನು ದೂರದಿಂದಲೇ ಗಮನಿಸಿ ಅದರತ್ತ ಬಂದು ದಾಳಿ ಮಾಡಿ ಅದನ್ನು ಕಿತ್ತೆಸೆದಿದೆ. ಕ್ಯಾಮರಾ ಕೆಳಗೆ ಬಿದ್ದ ನಂತರ ಆನೆ ಸಮಾಧಾನದಿಂದ ಅಲ್ಲಿಂದ ಹೊರಟು ಹೋಗಿದೆ. ಈ ವೀಡಿಯೋವನ್ನು ಹಂಚಿಕೊಂಡ ಪರ್ವಿನ್ ಕಸ್ವಾನ್ ಅವರು ಹೀಗೆ ಬರೆದಿದ್ದಾರೆ. ಖಾಸಗಿತನ ಬಹಳ ಅಗತ್ಯ. ಆನೆಯೊಂದು ಏನೋ ನೈಸರ್ಗಿಕವಲ್ಲದ ಸೆಟಪ್‌ನ್ನು ಗಮನಿಸಿ ಅದನ್ನು ಕಿತ್ತೆಸೆಯಲು ನಿರ್ಧಾರ ಮಾಡಿತ್ತು. ಅದು ಎಷ್ಟು ಬುದ್ಧಿವಂತ ನೋಡಿ ಎಂದು ಅವರು ಬರೆದಿದ್ದಾರೆ. ಪ್ರಾಣಿಗಳ ಚಲನವಲನಗಳ ವೀಕ್ಷಣೆಗೆ ಪರಿಸರದ ಅಧ್ಯಯನಕ್ಕೆ ಉದ್ಯಾನವಲಯದಲ್ಲಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಪ್ರಸ್ತುತ 210 ಅಂತಹ ಕ್ಯಾಮರಾಗಳನ್ನು ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಲಾಗಿದೆ.
ಆನೆ ಕ್ಯಾಮರಾವನ್ನು ದೂರ ಎಸೆದಿದ್ದರೂ ಕ್ಯಾಮರಾಗೆ ಹೆಚ್ಚೇನು ಹಾನಿಯಾಗದೇ ಸುರಕ್ಷಿತವಾಗಿತ್ತು. ಹೀಗಾಗಿಯೇ ಆನೆ ದಾಳಿ ಮಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆನೆಯ ವರ್ತನೆಯನ್ನು ಸೆರೆ ಹಿಡಿದಿದೆ. ಪ್ರಾಣಿಗಳ ನೈಸರ್ಗಿಕ ಪ್ರವೃತ್ತಿಯನ್ನು ಪ್ರದರ್ಶಿಸುವ ಅದ್ಭುತ ವೀಡಿಯೊವನ್ನು ಪ್ರಸಾರ ಮಾಡುವಲ್ಲಿ ಕ್ಯಾಮರಾ ಯಶಸ್ವಿಯಾಗಿದೆ ಎಂದು ಕಸ್ವಾನ್ ಹೇಳಿದ್ದಾರೆ.
ಅದೃಷ್ಟವಶಾತ್ ಕ್ಯಾಮೆರಾ ಜೀವಂತವಾಗಿದ್ದು, ಈ ಅದ್ಭುತ ಕ್ಲಿಪ್ ಅನ್ನು ಹೊರ ತರಲು ಸಾಧ್ಯವಾಯಿತು. ಇದರೊಂದಿಗೆ ನಾವು ನಮ್ಮ ಕ್ಷೇತ್ರ ಸಿಬ್ಬಂದಿಗೆ ಸಂರಕ್ಷಣೆಗಾಗಿ ತಂತ್ರಜ್ಞಾನದ ಬಳಕೆಯ ಬಗ್ಗೆ ತರಬೇತಿ ನೀಡುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಉದ್ಯಾನವನದಲ್ಲಿ 20,000 ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯನ್ನು ಕ್ಯಾಮೆರಾಗಳು ಆವರಿಸಿವೆ ಎಂದು ವನ್ಯಜೀವಿ ಅಧಿಕಾರಿಗಳು ಕ್ಯಾಮೆರಾವನ್ನು ಇರಿಸುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಕಸ್ವಾನ್ ಹೇಳಿದ್ದಾರೆ.

ನೋಡಿರಿ

