ಅಧಿಕಾರ ಕೊಟ್ಟಾಗ, ನಮ್ಮಲ್ಲಿರೋ ಅಹಂಕಾರ ಹೊರಗೆ ಬರತ್ತೆ ಅನ್ನೋದಕ್ಕೆ ಗಿಲ್ಲಿನೇ ಸಾಕ್ಷಿ – ಕಿಚ್ಚನ ಮುಂದೆಯೇ ಕಿಡಿಕಾರಿದ ಸ್ಪರ್ಧಿಗಳು!

ಗಿಲ್ಲಿ ನಟ ಅವರದ್ದು ಎಲ್ಲರಿಗೂ ಇಷ್ಟ ಆಗೋ ವ್ಯಕ್ತಿತ್ವ. ಡೈಲಾಗ್ ಮೂಲಕ ತಮ್ಮ ಮಾತಿನ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಮಾಡೋ ಕಾಮಿಡಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅದರಲ್ಲೂ ಸಿನಿಮಾ ದೃಶ್ಯಗಳನ್ನು ಮನೆಯಲ್ಲಿ ನಡೆಯುವ ಘಟನೆಗಳಿಗೆ ಹೋಲಿಸಿ ಮಾಡುವ ಕಾಮಿಡಿಗಳು ಅದ್ಭುತವಾಗಿ ಇರುತ್ತವೆ. ಆದ್ರೆ ಗಿಲ್ಲಿ ಕ್ಯಾಪ್ಟನ್ ಆಗಿ ಕಂಪ್ಲೀಟ್ ಫೈಲ್ಯೂರ್ ಆಗಿದ್ದಾರೆ. ಇದೀಗ ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ಮೇಲೆ ಕಂಪ್ಲೇಂಟ್ ಹೇಳಿದ್ದಾರೆ ಮನೆಮಂದಿ.
ಇದನ್ನೂ ಓದಿ: ರೀಲ್ಸ್ ಮಾಡಿ, ಕೋಟಿ ರೂಪಾಯಿ ಗೆಲ್ಲಿ! – ಕೊರಗಜ್ಜ ಚಿತ್ರತಂಡದ ಆಫರ್ಗೆ ದೈವ ನರ್ತಕರಿಂದ ಆಕ್ರೋಶ!
ಗಿಲ್ಲಿನಟ ಈ ವಾರ ದೊಡ್ಮನೆಯಲ್ಲಿ ಕ್ಯಾಪ್ಟನ್ ಆಗಿದ್ರು. ಆದ್ರೆ ಗಿಲ್ಲಿ ಕಾವ್ಯಳನ್ನ ನಾಮಿನೇಷನ್ನಿಂದ ಪಾರು ಮಾಡಲು ಉಸ್ತುವಾರಿಯಲ್ಲಿ ಫೇವರಿಸಂ ಮಾಡಿದ್ದರು. ಈ ವಿಚಾರವಾಗಿ ಸಹ ಸ್ಪರ್ಧಿಗಳು ಗಿಲ್ಲಿ ವಿರುದ್ಧ ಕಿಡಿಕಾಡಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ಗಿಲ್ಲಿ ಕ್ಯಾಪ್ಟನ್ಸಿ ಹೇಗಿತ್ತು ಅಂತ ಸುದೀಪ್ ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಅವರು ಕ್ಯಾಪ್ಟನ್ ಅಂತ ಅನ್ನಿಸಲೇ ಇಲ್ಲ ಎಂದಿದ್ದಾರೆ. ರಘು ಅವರು, ಅವರಿಗೆ ರೆಸ್ಪಾನ್ಸಿಬಲ್ ಇರಲಿಲ್ಲ ಎಂದಿದ್ದಾರೆ. ಅಶ್ವಿನಿ ಮಾತನಾಡಿ, ಒಂದು ಅಧಿಕಾರ ಕೊಟ್ಟಾಗ, ನಮ್ಮಲ್ಲಿರುವ ಅಹಂಕಾರ ಹೊರಗೆ ಬರತ್ತೆ ಅನ್ನೋದಕ್ಕೆ ಸಾಕ್ಷಿ ಗಿಲ್ಲಿನೇ ಎಂದಿದ್ದಾರೆ. ಸ್ಪಂದನಾ ಕೂಡ ಗಿಲ್ಲಿ ತುಂಬಾ ಟಾಕ್ಸಿಕ್ ಥರ ಅನ್ನಿಸೋಕೆ ಶುರು ಆದ್ರು ಎಂದಿದ್ದಾರೆ.
ಅಶ್ವಿನಿ ಮತ್ತೆ ಮಾತನಾಡಿ, ನಾನು ಕಪ್ ಗೆದ್ದುಕೊಂಡು ಹೋಗ್ತೀನಿ, ಇನ್ನೊಬ್ಬರನ್ನು ಫಿನಾಲೆಗೆ ಕರೆದುಕೊಂಡು ಹೋಗ್ತೀನಿ ಅಂತ ಸವಾಲ್ ಒಡ್ದಿದಂತಹ ಗಿಲ್ಲಿ. ಯಾರೇ ಇದ್ದಿದ್ದರು ಕಾವ್ಯ ಅವರನ್ನೇ ಸೇಫ್ ಮಾಡ್ತಾ ಇದ್ದರು ಎಂದಿದ್ದಾರೆ ಸ್ಪಂದನಾ.
ಈ ವಾರ ಅಶ್ವಿನಿ ಮತ್ತು ಗಿಲ್ಲಿ ಇಬ್ಬರೂ ಟಾಸ್ಕ್ಗಳ ಉಸ್ತುವಾರಿ ವಹಿಸಿದ್ದರು. ಸಾಕಷ್ಟು ಸಮಯದಲ್ಲಿ ಈ ಇಬ್ಬರ ನಡುವೆ ಜಗಳಗಳು ನಡೆಯಿತು. ವಾರಾಂತ್ಯದಲ್ಲೂ ಈ ಜಗಳ ಮುಂದುವರೆದಿದೆ. ಗಿಲ್ಲಿ, ಅಶ್ವಿನಿಯ ಯೋಗ್ಯತೆಯ ಕುರಿತಾಗಿ ಮಾತನಾಡಿದ್ದಾರೆ. ಇದು ಅಶ್ವಿನಿ ಅವರನ್ನು ಕೆರಳಿಸಿದೆ. ಇಬ್ಬರ ನಡುವೆ ಭರ್ಜರಿ ವಾಗ್ಯುದ್ಧವೇ ನಡೆದಿದೆ. ಈ ಬಗ್ಗೆಯೂ ಕಿಚ್ಚ ಚರ್ಚಿಸಲಿದ್ದಾರೆ.

ನೋಡಿರಿ

