ರೀಲ್ಸ್ ಮಾಡಿ, ಕೋಟಿ ರೂಪಾಯಿ ಗೆಲ್ಲಿ! – ಕೊರಗಜ್ಜ ಚಿತ್ರತಂಡದ ಆಫರ್‌ಗೆ ದೈವ ನರ್ತಕರಿಂದ ಆಕ್ರೋಶ!

ಈಗೀಗ ಸೋಶಿಯಲ್ ಮೀಡಿಯಾದ್ದೇ ಕಾರುಬಾರು. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ಪೋಸ್ಟ್ ಹಾಕ್ತಿದ್ರೆ ಮಾತ್ರ ಮರ್ಯಾದೆ ಅನ್ನೋ ಕಾಲ ಇದು. ಹೀಗಾಗೇ ರೀಲ್ಸ್ ಕಾಂಪಿಟೇಷನ್ ಕೂಡ ನಡೆಸಲಾಗುತ್ತೆ. ಇತ್ತೀಚೆಗೆ ಸಿನಿಮಾ ತಂಡಗಳು ಕೂಡ ರೀಲ್ಸ್ ಮೂಲಕ ಪ್ರೇಕ್ಷಕರನ್ನ ಸೆಳೆಯಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಇದೀಗ ಕೊರಗಜ್ಜ ಸಿನಿಮಾ ಟೀಮ್ ಕೂಡ ರೀಲ್ಸ್ ಸ್ಪರ್ಧೆ ಏರ್ಪಡಿಸಿದೆ. ಈ ಬೆನ್ನಲ್ಲೇ ಸಿನಿಮಾ ತಂಡದ ನಿರ್ಧಾರಕ್ಕೆ ದೈವ ನರ್ತಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಮೊನ್ನೆ ಅಧಿಕಾರ ಸ್ವೀಕಾರ, ನಿನ್ನೆ ತಲೆದಂಡ, ಇಂದು ಆತ್ಮಹತ್ಯೆಗೆ ಯತ್ನ! – ಅಮಾನತು ಬೆನ್ನಲ್ಲೇ ಎಸ್ಪಿ ಪವನ್ ದುಡುಕಿನ ನಿರ್ಧಾರ
ಮೊದಲೆಲ್ಲ ನಟ-ನಟಿಯರು ಆಟೋ ಓಡಿಸುವುದು, ಕಾಲೇಜುಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದವರು. ಆದ್ರೆ ಸೋಶಿಯಲ್ ಮೀಡಿಯಾ ಬಂದ್ಮೇಲೆ ರೀಲ್ಸ್ ಕಾಂಪಿಟೇಷನ್ ನಡೆಸಲಾಗ್ತಿದೆ. ಇದೀಗ ಕೊರಗಜ್ಜ ಚಿತ್ರತಂಡ ಇಂಥಹದ್ದೇ ಆಫರ್ ನೀಡಿದೆ. ಕೊರಗಜ್ಜ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಸಹ ಚಿತ್ರತಂಡ ನೀಡಿದೆ. ಚೆನ್ನಾಗಿ ರೀಲ್ಸ್ ಮಾಡಿ ಹಂಚಿಕೊಂಡು, ಅದರಲ್ಲಿ ಚಿತ್ರತಂಡ ಆಯ್ಕೆ ಮಾಡಿದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಆದ್ರೆ ಇದಕ್ಕೆ ಕೊಡಗಿನ ದೈವ ನರ್ತಕರಿಂದ ಆಕ್ರೋಶ ವುಕ್ತವಾಗಿದೆ.
ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾದ ಹಾಡುಗಳು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಚಿತ್ರತಂಡ ನೀಡಿದೆ. ಇದೀಗ ತುಳುನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನ ಕುರಿತು ರೀಲ್ಸ್ ಮಾಡಿ ಹೆಚ್ಚು ಲೈಕ್ಸ್, ವೀವ್ಸ್ ಗಳಿಸಿದವಿಗೆ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿರುವುದು ಖಂಡನೀಯವಾಗಿದೆ. ಈ ತಪ್ಪು ಮುಂದುವರಿದ್ರೆ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಕರಾವಳಿ ಭಾಗದ ಕಾರಣಿಕದ ಶಕ್ತಿಯಾಗಿರುವ ಕೊರಗಜ್ಜ ದೈವದ ಕಥೆ ಆಧರಿತ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ಕೊರಗಜ್ಜ ಚಿತ್ರದಲ್ಲಿರುವ 6 ಹಾಡುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಸಿನಿಮಾದ ಪ್ರಚಾರಕ್ಕಾಗಿ ಕೊರಗಜ್ಜ ರೀಲ್ಸ್ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಇದನ್ನ ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ತೀವ್ರವಾಗಿ ಖಂಡಿಸಿದೆ. ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ದೈವ ನರ್ತಕರ ಸಂಘದ ಪ್ರಮುಖರು ತಿಳಿಸಿದ್ದಾರೆ.

ನೋಡಿರಿ

