ಈ ಟೈಮ್‌ನಲ್ಲಿ ಇಂಥಾ ಮಾತು ಬೇಕಿತ್ತಾ? – ಅಶ್ವಿನಿ ಕೆಣಕಿದ ಗಿಲ್ಲಿಗೆ ಕಿಚ್ಚನ ಕ್ಲಾಸ್‌!

ಈ ಟೈಮ್‌ನಲ್ಲಿ ಇಂಥಾ ಮಾತು ಬೇಕಿತ್ತಾ? – ಅಶ್ವಿನಿ ಕೆಣಕಿದ ಗಿಲ್ಲಿಗೆ ಕಿಚ್ಚನ ಕ್ಲಾಸ್‌!

ವೀಕೆಂಡ್‌ ಬಂತು ಅಂದ್ರೆ ಬಿಗ್‌ಬಾಸ್‌ ವೀಕ್ಷಕರು ಕಿಚ್ಚನ ಪಂಚಾಯ್ತಿಗೆ ಕಾಯ್ತಿರ್ತಾರೆ. ಈ ವಾರ ಯಾವೆಲ್ಲಾ ವಿಚಾರದ ಬಗ್ಗೆ ಸುದೀಪ್‌ ಚರ್ಚೆ ನಡೆಸಲಿದ್ದಾರೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತೆ. ಇದೀಗ ಈ ವಾರದ ಸಂಚಿಕೆಯ ಪ್ರೋಮೋ ರಿಲೀಸ್‌ ಆಗಿದೆ. ಸುದೀಪ್‌ ಗಿಲ್ಲಿನಟ, ಅಶ್ವಿನಿ, ಧನುಷ್‌ಗೆ ಕ್ಲಾಸ್‌ ತೆಗೆದುಕೊಳ್ಳೋದು ಫಿಕ್ಸ್‌ ಆಗಿದೆ.

ಇದನ್ನೂ ಓದಿ: ಮೇವು ಎಂದು ಜೋಳದ ಚಿಗುರು ತಿಂದ ಕುರಿಗಳು! –  ಅಯ್ಯೋ.. 50 ಕುರಿಗಳು ಬಲಿ!

ಕಳೆದ ವಾರ ಗಿಲ್ಲಿನಟ ಕ್ಯಾಪ್ಟನ್‌ ಆಗ್ತಿದ್ದಂತೆ ಅಶ್ವಿಯನ್ನ ಪದೇ ಪದೇ ಕೆಣಕುತ್ತಿದ್ದರು. ಏಕವಚನದಲ್ಲಿ ಮಾತನಾಡಿ ಆಗಾಗ ಅಶ್ವಿನಿಯನ್ನ ಟ್ರಿಗರ್‌ ಮಾಡ್ತಿದ್ರು. ಗಿಲ್ಲಿ ವರ್ತನೆ ವೀಕ್ಷಕರಿಗೂ ಬೇಸರ ತರಿಸಿತ್ತು. ಗಿಲ್ಲಿ ಗೆಲ್ಲಲಿ ಎಂದು ನಾವು ಸಪೋರ್ಟ್‌ ಮಾಡಿದ್ರೆ, ಆತ ಮಾತ್ರ ತನ್ನ ಆಟವನ್ನೇ ಮರೆತಂತಿದೆ ಎಂದು ವೀಕ್ಷಕರು ಕೂಡ ಹೇಳಿದ್ರು. ಇದೀಗ ಅಶ್ವಿನಿ, ಗಿಲ್ಲಿ ಜಗಳದ ವಿಚಾರ ಕಿಚ್ಚನ ಪಂಚಾಯ್ತಿಯಲ್ಲೂ ಚರ್ಚೆಯಾಗಿದೆ. ಅನಾವಶ್ಯಕವಾಗಿ ಅಶ್ವಿನಿಯನ್ನ ಕೆಣಕಿದ ಗಿಲ್ಲಿಗೆ ಕಿಚ್ಚ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ರಿಲೀಸ್‌ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್, ಬಿಗ್‌ಬಾಸ್ ವೇದಿಕೆಗೆ ಆಗಮಿಸಿರುವ ಸುದೀಪ್, ಇಷ್ಟು ದಿನಗಳ ಕಾಲ ಒಳ್ಳೆಯ ಆಟದ ಮೂಲಕ ಜನರ ಮನಸ್ಸು ಗೆದ್ದಿರುವ ಕೆಲವರಿಗೆ, ಈ ಸಮಯದಲ್ಲಿ ಇಂಥಾ ಮಾತುಗಳು ಬೇಕಿತ್ತಾ ಎಂದು ಹೇಳುತ್ತಾರೆ. ಈ ಮಾತಿನ ಬಳಿಕ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಮಾತಿನ ಚಕಮಕಿಯನ್ನು ತೋರಿಸಲಾಗುತ್ತದೆ. ಈ ಬಾರಿ ಗಿಲ್ಲಿ ನಟ ಏಕವಚನದಲ್ಲಿಯೇ ಅಶ್ವಿನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಮುಂದುವರಿದು ಮಾತನಾಡುವ ಸುದೀಪ್, ಆಟದಲ್ಲಿ ಗೆದ್ರೂ ಕೂಡ ಕೆಲವರಿಗೆ ಗೆಲುವನ್ನು ಸಂಭ್ರಮಿಸಲು ಆಗುತ್ತಿಲ್ಲ ಎಂದು ಹೇಳುತ್ತಾರೆ. ಈ ಮಾತುಗಳ ಬಳಿಕ ಧನುಷ್ ಮತ್ತು ಅಶ್ವಿನಿ ಗೌಡ ನಡುವಿನ ಸಂಭಾಷಣೆ ಮತ್ತು ಆಟದಲ್ಲಾದ ವ್ಯತ್ಯಾಸವನ್ನು ತೋರಿಸಲಾಗುತ್ತದೆ. ಈ ವಾರ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂಬುದನ್ನು ಪ್ರೋಮೋ ಮೂಲಕ ತೋರಿಸಲಾಗಿದೆ.

14ನೇ ವಾರದ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ವಿರುದ್ಧ ಅಶ್ವಿನಿ ಗೌಡ ಮತ್ತು ಧ್ರುವಂತ್ ಜೊತೆಯಾಗಿ ಹಲವು ಆರೋಪಗಳನ್ನು ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಮತ್ತು ಟಾಸ್ಕ್ ಉಸ್ತುವಾರಿ ಸಂಬಂಧ ಅಶ್ವಿನಿ ಗೌಡ ಬೇಸರ ವ್ಯಕ್ತಪಡಿಸಿದರು. ಇತ್ತ ಕ್ಯಾಪ್ಟನ್ ಗಿಲ್ಲಿ ಆಟದ ವೈಖರಿ ಬಗ್ಗೆ ರಕ್ಷಿತಾ ಶೆಟ್ಟಿ ಮತ್ತು ರಘು ಸಹ ಬೇಸರ ವ್ಯಕ್ತಪಡಿಸಿದರು.

ಮತ್ತೊಂದೆಡೆ ಕ್ಯಾಪ್ಟನ್ಸಿ ಟಾಸ್ಕ್ ಉಸ್ತುವಾರಿಯ ಎಡವಟ್ಟಿನಿಂದ ಇಡೀ ಆಟವೇ ಬದಲಾಗಿ ಅಂತಿಮವಾಗಿ ಮತದಾನದ ಮೂಲಕ ಮುಂದಿನ ವಾರ ಕ್ಯಾಪ್ಟನ್ ಆಯ್ಕೆ ಮಾಡಲಾಯ್ತು. ಕ್ಯಾಪ್ಟನ್ ಆಯ್ಕೆಯೇ ತಪ್ಪು ಎಂದು ಅಶ್ವಿನಿ ಗೌಡ ಭಾವುಕರಾಗಿದ್ದರು. ಮತ್ತೊಂದೆಡೆ ಕ್ಯಾಪ್ಟನ್ ಆದ್ರೂ ಧನುಷ್ ಮತ್ತು ಬೇರಾವ ಸದಸ್ಯರು ಸಂಭ್ರಮಿಸಲಿಲ್ಲ. ಧನುಷ್ ಸಹ ಕ್ಯಾಪ್ಟನ್ ರೂಮ್ ಬಳಸದಿರಲು ನಿರ್ಧರಿಸಿದ್ದಾರೆ.

Shwetha M