ರೂಲ್ಸ್‌ ಬ್ರೇಕ್‌ ಮಾಡಿದ್ರೂ ಮತ್ತೆ ಕ್ಯಾಪ್ಟನ್ ಆದ ಧನುಷ್!‌ – ಅಶ್ವಿನಿ ಸೋತಿದ್ದು ಹೇಗೆ?

ರೂಲ್ಸ್‌ ಬ್ರೇಕ್‌ ಮಾಡಿದ್ರೂ ಮತ್ತೆ ಕ್ಯಾಪ್ಟನ್ ಆದ ಧನುಷ್!‌ – ಅಶ್ವಿನಿ ಸೋತಿದ್ದು ಹೇಗೆ?

ಬಿಗ್‌ಬಾಸ್‌ ಮನೆಯ ಆಟಕ್ಕೆ ಯಾರೂ ಊಹಿಸಿರದ ಟ್ವಿಸ್ಟ್‌ ಸಿಕ್ತಿದೆ. ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್‌ ವೇಳೆ ಧನುಷ್‌ ರೂಲ್ಸ್‌ ಬ್ರೇಕ್‌ ಮಾಡಿದ್ರು. ಇದ್ರಿಂದಾಗಿ ಕ್ಯಾಪ್ಟನ್ಸಿ ಧನುಷ್‌  ಕೈತಪ್ಪುತ್ತೆ ಎಂದು ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಬಿಗ್‌ಬಾಸ್‌ ಬಾಸ್‌ ಟ್ವಿಸ್ಟ್‌ ನೀಡಿದ್ದು, ಕಡೆಗೂ ಧನುಷ್‌ ಕ್ಯಾಪ್ಟನ್‌ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸೂರ್ಯೋದಯವೋ.. ಸೂರ್ಯಾಸ್ತವೋ? – ಗಂಭೀರ ಸ್ಥಿತಿಯಿಂದ ಹೊರಬರುತ್ತಾ ಟೆಸ್ಟ್?

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ  ಗಿಲ್ಲಿ ಮತ್ತು ರಾಶಿಕಾ ಅವರನ್ನು ಸೋಲಿಸಿ ಅಂತಿಮ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಶ್ವಿನಿ ಮತ್ತು ಧನುಷ್‌ ಆಯ್ಕೆಯಾಗಿದ್ದರು. ಕೊನೆಯ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದ ಅಶ್ವಿನಿ ಗೌಡ ಮತ್ತು ಧನುಷ್‌ಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಮೇಜಿನಲ್ಲಿ ಪಜಲ್‌ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಮೇಜಿನ ಮೇಲ್ಭಾಗದಲ್ಲಿ ಚಾಕು ಇರುವ ಪಜಲ್‌ ತುಂಡಿರುತ್ತದೆ. ಅದನ್ನು ಮೇಜಿನ ಕೆಳಭಾಗಕ್ಕೆ ತಂದು ಹೊರತೆಗೆಯಬೇಕು. ಇದರ ಮಧ್ಯೆ ಸಿಗುವ ಪಜಲ್‌ ತುಂಡುಗಳನ್ನು ಪಕ್ಕಕ್ಕೆ ಸರಿಸುತ್ತಾ, ಚಾಕು ಇರುವ ತುಂಡನ್ನು ಕೆಳಭಾಗಕ್ಕೆ ತರಬೇಕು. ಈ ವೇಳೆ ಪಜಲ್‌ ತುಂಡುಗಳನ್ನು ತಿರುಗಿಸುವಂತಿಲ್ಲ ಮತ್ತು ಸ್ಥಳಾಂತರಿಸುವಂತಿಲ್ಲ. ಟಾಸ್ಕ್‌ ಪೂರ್ಣಗೊಳಿಸಿ ಹಗ್ಗವನ್ನು ಮೊದಲು ಕತ್ತರಿಸುವ ಸ್ಪರ್ಧಿ ವಿನ್ನರ್‌ ಆಗುವಂತೆ ಟಾಸ್ಕ್‌ ಅನ್ನು ರೂಪಿಸಲಾಗಿತ್ತು.

ಈ ಟಾಸ್ಕ್‌ ಆಡಿ ಧನುಷ್‌ ಜಯಗಳಿಸಿದ್ದರು. ಆದರೆ ಧನುಷ್‌ ನಿಯಮವನ್ನು ಉಲ್ಲಂಘಿಸಿ ಚಾಕು ಇರುವ ತುಂಡನ್ನು ಕೆಳಗಡೆಯಿಂದ ತೆಗೆದಿದ್ದರು. ಈ ವಿಚಾರವನ್ನು ಲಿವಿಂಗ್‌ ರೂಮ್‌ನಲ್ಲಿ ವಿಡಿಯೋ ಪ್ಲೇ ಮಾಡಿ ಮನೆಗೆ ಮಂದಿಗೆ ಬಿಗ್‌ ಬಾಸ್‌ ತೋರಿಸಿದ್ದರು. ಹೀಗಾಗಿ ಮುಂದಿನ ವಾರಕ್ಕೆ ನಾಯಕ ಯಾರು ಎನ್ನುವ ಕುತೂಹಲ ಇತ್ತು. ಈ ವೇಳೆ ಅಶ್ವಿನಿ ಮತ್ತು ಧನುಷ್‌ ಇಬ್ಬರು ಮನೆಯ ಸದಸ್ಯರನ್ನು ಒಲಿಸಬೇಕು. ಯಾರಿಗೆ ಹೆಚ್ಚಿನ ವೋಟ್‌ ಸಿಗುತ್ತದೋ ಅವರು ಕ್ಯಾಪ್ಟನ್‌ ಆಗುತ್ತಾರೆ ಎಂದು ಬಿಗ್‌ಬಾಸ್‌ ಹೇಳಿದರು.

ಬಿಗ್‌ಬಾಸ್‌ ಸೂಚನೆಯ ಅನ್ವಯ ಇಬ್ಬರೂ ಮನೆಯ ಉಳಿದ ಸದಸ್ಯರ ಬಳಿ ಹೋಗಿ ತನಗೆ ವೋಟ್‌ ಹಾಕುವಂತೆ ಮನವಿ ಮಾಡಿದರು. ಕೊನೆಗೆ ಸದಸ್ಯರು ಮುಂದೆ ಬಂದು ಕಾರಣ ನೀಡಿ ಯಾಕೆ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ವಾದಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ಅಶ್ವಿನಿಗೆ ರಕ್ಷಿತಾ, ರಘು, ಧ್ರುವಂತ್‌ ಮತ ಹಾಕಿದರೆ ಧನುಷ್‌ಗೆ ಕಾವ್ಯ, ಸ್ಪಂದನಾ, ರಾಶಿಕಾ, ಗಿಲ್ಲಿ ಒಪ್ಪಿಗೆ ಸೂಚಿಸಿದರು. 4 ಮತಗಳು ಧನುಷ್‌ಗೆ ಬಿದ್ದ ಕಾರಣ ಧನುಷ್‌ 2ನೇ ಬಾರಿ ಮನೆಯ ನಾಯಕನಾಗಿ ಆಯ್ಕೆಯಾದರು.

Shwetha M