19ನೇ ಸೀಸನ್ ಗೆ ಕೊಹ್ಲಿ-ಸಾಲ್ಟ್ ಓಪನರ್ಸ್ – 2026ರ ಐಪಿಎಲ್ ಗೆ RCB ಪ್ಲೇಯಿಂಗ್ 11 ರೆಡಿ!

2008 ರಿಂದ 2024ರವರೆಗೆ ಸುದೀರ್ಘ 17 ಸೀಸನ್ಗಳಲ್ಲಿ ಟ್ರೋಫಿಗಾಗಿ ಚಾತಕ ಪಕ್ಷಿಯಂತೆ ಕಾದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಸೀಸನ್ನಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತ್ತು. ದಿಗ್ಗಜ ಆಟಗಾರರು, ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿತ್ತು. ಈಗ 2026ರ ಐಪಿಎಲ್ಗೆ 2 ತಿಂಗಳಷ್ಟೇ ಬಾಕಿ ಇದೆ. ಹಾಲಿ ಚಾಂಪಿಯನ್ಸ್ ಆರ್ಸಿಬಿ ಸತತ ಎರಡನೇ ಕಪ್ ಗೆಲ್ಲೋ ಯೋಜನೆಯಲ್ಲಿದೆ. ತಂಡದಲ್ಲಿ ಘಟಾನುಘಟಿ ಆಟಗಾರರೇ ಇದ್ದು ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಸೋ ಕಪ್ ಗೆಲ್ಲೋಕೆ ಪ್ಲೇಯಿಂಗ್ 11 ಸೆಲೆಕ್ಷನ್ ಕೂಡ ಇಂಪಾರ್ಟೆಂಟ್ ಆಗುತ್ತೆ.
ಇದನ್ನೂ ಓದಿ : 10 ವರ್ಷದ ಬಳಿಕ ಹುಟ್ಟಿದ ಮಗುವನ್ನ ಬಲಿ ಪಡೆದ ಒಂದು ಹನಿ ನೀರು – ಅಯ್ಯೋ ವಿಧಿಯೇ.. ನೀನೆಷ್ಟು ಕ್ರೂರಿ
ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು ಟೀಂ 19ನೇ ಆವೃತ್ತಿಗೆ ಪವರ್ಹೌಸ್ ಲೈನಪ್ನೊಂದಿಗೆ ಎಂಟ್ರಿ ಕೊಡ್ತಿದೆ. ಫಿಲ್ ಸಾಲ್ಟ್ರ ಅಗ್ರೆಸ್ಸಿವ್ ಬ್ಯಾಟಿಂಗ್, ವಿರಾಟ್ ಕೊಹ್ಲಿಯಂಥ ರನ್ ಮಷಿನ್.. ರಜತ್ ಪಾಟಿದಾರ್ ಅವರ ಕ್ಯಾಪ್ಟನ್ಸಿ, ಬಲಿಷ್ಠ ಬೌಲರ್ಗಳೇ ಇರೋ ಹಾಲಿ ಚಾಂಪಿಯನ್ಗಳು ತಮ್ಮ ಕಿರೀಟವನ್ನು ಉಳಿಸಿಕೊಳ್ಳಲು ಸರ್ವಸಮರ್ಥರೂ ಆಗಿದ್ದಾರೆ. ಹಾಗಾದ್ರೆ ನೆಕ್ಸ್ಟ್ ಐಪಿಎಲ್ನಲ್ಲಿ ಬೆಂಗಳೂರು ತಂಡದ ಪ್ಲೇಯಿಂಗ್ 11 ಹೇಗಿರಬಹುದು.
2026ಕ್ಕೆ ಆರ್ ಸಿಬಿ ಪ್ಲೇಯಿಂಗ್ 11
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್ / ವೆಂಕಟೇಶ್ ಅಯ್ಯರ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ಕೃನಾಲ್ ಪಾಂಡ್ಯ
ರೊಮಾರಿಯೋ ಶೆಫರ್ಡ್
ಭುವನೇಶ್ವರ್ ಕುಮಾರ್
ಯಶ್ ದಯಾಲ್
ಜೋಶ್ ಹ್ಯಾಜಲ್ ವುಡ್
ಇದಿಷ್ಟು 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ 11. ಅಂದ್ರೆ ಆಲ್ಮೋಸ್ಟ್ ಚಾಂಪಿಯನ್ ತಂಡವನ್ನೇ ಕಣಕ್ಕಿಳಿಸೋದು ಪಕ್ಕಾ. ಯಾಕಂದ್ರೆ ಕಳೆದ ವರ್ಷ ಆಡಿರುವಂಥ ಈ ಮೇಲಿನ ಎಲ್ಲರೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ರು. ಹೀಗಾಗಿ ಈ ಸಲ ಹೆಚ್ಚಿನ ಚೇಂಜಸ್ ಅಂತಾ ಏನೂ ಇರಲ್ಲ.

ನೋಡಿರಿ

