ಜಗತ್ತಿನ ಅತಿ ಉದ್ದ ಹಡಗು ‘ಗಂಗಾ ವಿಲಾಸ್’ ಲೋಕಾರ್ಪಣೆ – 27 ನದಿಗಳಲ್ಲಿ ಪ್ರವಾಸಿಗರ ನೌಕಾ ಯಾನ
ನವದೆಹಲಿ: ಜಗತ್ತಿನ ಅತಿ ಉದ್ದನೆಯ ಮತ್ತು ಐಷಾರಾಮಿ ಹಡಗು ಗಂಗಾ ವಿಲಾಸ್ ಗೆ ಶುಕ್ರವಾರ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಗಂಗಾ ವಿಲಾಸ್ ಹಡಗನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ ವಾರಾಣಸಿಯ ಗಂಗಾ ದಡದಲ್ಲಿನ ‘ಟೆಂಟ್ ಸಿಟಿ’ಯನ್ನೂ ಮೋದಿ ಉದ್ಘಾಟಿಸಿದ್ದಾರೆ. ಒಟ್ಟು 3200 ಕಿ.ಮೀ. ದೂರ ಸಾಗಲಿರುವ ಗಂಗಾ ವಿಲಾಸ್ ಹಡಗು 51 ದಿನಗಳ ಕಾಲ ಗಂಗೆ, ಬ್ರಹ್ಮಪುತ್ರ, ಹೂಗ್ಲಿ ಸೇರಿ 27 ನದಿಗಳಲ್ಲಿ ಸಂಚರಿಸಲಿದೆ. ನದಿ ಮಾರ್ಗದಲ್ಲಿ ಸಾಗುವ ಈ ಐಷಾರಾಮಿ ಗಂಗಾ ವಿಲಾಸ್ ಹಡಗು ವಾರಾಣಸಿಯ ಗಂಗಾ ನದಿಯಲ್ಲಿ ಪ್ರಯಾಣ ಆರಂಭಿಸಿ ಬಾಂಗ್ಲಾದೇಶ ಮಾರ್ಗವಾಗಿ ಅಸ್ಸಾಂನ ದಿಬ್ರುಗಢದಲ್ಲಿ ಪ್ರಯಾಣ ಮುಗಿಸಲಿದೆ. ಒಟ್ಟು 3200 ಕಿ.ಮೀ. ದೂರ ಸಾಗಲಿರುವ ಗಂಗಾ ವಿಲಾಸ್ ಹಡಗು 51 ದಿನಗಳ ಕಾಲ ಗಂಗೆ, ಬ್ರಹ್ಮಪುತ್ರ, ಹೂಗ್ಲಿ ಸೇರಿ 27 ನದಿಗಳಲ್ಲಿ ಸಂಚರಿಸಲಿದ್ದು, ನದಿ ಅಕ್ಕಪಕ್ಕದ 50 ಪ್ರವಾಸಿ ತಾಣಗಳಲ್ಲಿ ನಿಲ್ಲಲಿದೆ.
ಇದನ್ನೂ ಓದಿ: ಶಬರಿಮಲೆ ‘ಅರವಣ ಪ್ರಸಾದಮ್’ ವಿತರಣೆಗೆ ಹೈಕೋರ್ಟ್ ತಡೆ – ವ್ಯರ್ಥವಾಯ್ತು 6 ಕೋಟಿ ರೂಪಾಯಿ ಮೌಲ್ಯದ ಪ್ರಸಾದ..!
ಜನವರಿ 13ರಂದು ಆರಂಭವಾಗುವ ಈ ಪ್ರಯಾಣ ಮಾರ್ಚ್ ಒಂದಕ್ಕೆ ಮುಗಿಯಲಿದೆ. 27 ನದಿಗಳಲ್ಲಿ ನೌಕಾಯಾನ ಮಾಡುವ ಮೂಲಕ ಆ ಭವ್ಯವಾದ ಕ್ಷಣಗಳನ್ನು ವೀಕ್ಷಿಸಲು 51 ದಿನಗಳ ಪ್ಯಾಕೇಜ್ ನ್ನು ಪ್ರವಾಸಿಗರು ಬುಕ್ ಮಾಡಬಹುದು. ಈ ಹಡಗಿನಲ್ಲಿ ಉತ್ತಮ ಭೋಜನ, ಸ್ಪಾ ಮತ್ತು ಬಹು ವಿಶ್ರಾಂತಿ ಆಯ್ಕೆಗಳನ್ನು ಸಹ ಪಡೆಯಬಹುದು.
ಟ್ರಿಪಲ್ ಡೆಕ್ ಗಂಗಾ ವಿಲಾಸ್ ಕ್ರೂಸ್ ಐಷಾರಾಮಿ ಹಡಗಾಗಿದ್ದು, ವಾರಾಣಸಿಯಿಂದ ಅಸ್ಸಾಂನ ದಿಬ್ರುಗಡ್‌ಗೆ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣಿಸಲಿದೆ. ಐಷಾರಾಮಿ ಕ್ರೂಸ್ 3,200 ಕಿಮೀ ದೂರವನ್ನು ಕ್ರಮಿಸುತ್ತದೆ. ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ ಮೂಲಕ ಇದು ಹಾದುಹೋಗುತ್ತದೆ. ಈ ಐಷಾರಾಮಿ ಗಂಗಾ ವಿಲಾಸ್ ಹಡಗಿನ ಟಿಕೆಟ್‌ಗಳು ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಪ್ರತಿ ವ್ಯಕ್ತಿಗೆ 1 ರಾತ್ರಿಗೆ ಸರಾಸರಿ 25,000 ರೂ. ದರವಿರಲಿದೆ ಎನ್ನಲಾಗಿದೆ. ಹಡಗಿನಲ್ಲಿ ಪ್ರಯಾಣಿಸಲು ಸ್ವಿಜರ್ಲೆಂಡ್ ಕಂಪನಿಯಿಂದ 32 ಸ್ವಿಸ್ ಪ್ರವಾಸಿಗರಿಗೆ ಚೊಚ್ಚಲ ಪ್ರವಾಸಕ್ಕಾಗಿ ಸಂಪೂರ್ಣ ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಭಾರತದ ಪ್ರಮುಖ ನಗರಗಳಾದ ಪಾಟ್ನಾ, ಕೋಲ್ಕತ್ತಾ ಗುವಾಹಟಿ ಮತ್ತು ಬಾಂಗ್ಲಾದೇಶದ ಢಾಕಾ ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ. ಈ ವಿಹಾರವು ಮೂರು ಪ್ರಮುಖ ನದಿಗಳಾದ ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ಮೂಲಕ ಹಾದು ಹೋಗಲಿದೆ. ಬಾಂಗ್ಲಾದೇಶದಲ್ಲಿ ಮೇಘನಾ, ಪದ್ಮ ಮತ್ತು ಜಮುನಾ ಮೂಲಕ ಹಾದುಹೋಗುತ್ತದೆ. ನಂತರ ಅಸ್ಸಾಂನ ಬ್ರಹ್ಮಪುತ್ರ ನದಿಯನ್ನು ಪ್ರವೇಶಿಸುತ್ತದೆ. ಈ ಗಂಗಾ ವಿಲಾಸ್ ವಿಹಾರಕ್ಕೆ ಸುಮಾರು 20 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಈ ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳಲ್ಲಿ 27 ನದಿಗಳಲ್ಲಿ 3,200 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸುತ್ತದೆ. ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲವಿದೆ. 36 ಪ್ರವಾಸಿಗರ ಸಾಮರ್ಥ್ಯವಿರುವ 18 ಸೂಟ್‌ಗಳನ್ನು ಹೊಂದಿದೆ.