RCB ಹೊಸ ಕ್ರಶ್ ಲಾರೆನ್ – ಬೆಲ್ ಬ್ಯೂಟಿಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್
WPL ಆರಂಭಕ್ಕೂ ಮುನ್ನವೇ ಟ್ರೆಂಡ್

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 4ರ ಆರಂಭಕ್ಕೆ ವಾರ ಕೂಡ ಉಳ್ದಿಲ್ಲ. ಜನವರಿ 9 ರಂದು ಮಹತ್ವದ ಟೂರ್ನಿ ಆರಂಭವಾಗಲಿದೆ. ಈ ಬಾರಿ ಎಲ್ಲಾ ಪಂದ್ಯಗಳೂ ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಬ್ಯಾಡ್ಲಕ್ ಅಂದ್ರೆ ಆರ್ಸಿಬಿಯ ಸ್ಟಾರ್ ಲೇಡಿ ಎಲ್ಲಿಸ್ ಪೆರ್ರಿ ಈ ಸಲ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ. ಅವ್ರ ಬದಲಿ ಆಟಗಾರ್ತಿ ಕೂಡ ಜಾಯ್ನ್ ಆಗಿದ್ದಾರೆ. ಕನ್ನಡಿಗರ ಕ್ರಶ್ ಆಗಿದ್ದ ಪೆರ್ರಿ ಇಲ್ಲದ್ದು ಬೇಸರದ ವಿಚಾರವೇ. ಆದ್ರೆ ಈ ಸಲ ಟೂರ್ನಿಯಲ್ಲಿ ಆರ್ಸಿಬಿಯ ಅದೊಬ್ಬ ಆಟಗಾರ್ತಿ ಹೊಸ ಕ್ರಶ್ ಆಗ್ಬೋದು. ಅವ್ರೇ ಲಾರೆನ್ ಬೆಲ್.
ಇದನ್ನೂ ಓದಿ : ಬಾಗಿಲು ಬಡಿತಿದ್ದಾರೆ ಪಡಿಕ್ಕಲ್ – ಇನ್ನಾದ್ರೂ ಓಪನ್ ಮಾಡುತ್ತಾ BCCI?
2026ರ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡಕ್ಕೆ ಇನ್ನಷ್ಟು ಫ್ಯಾನ್ಸ್ ಕ್ರೇಜ್ ಹೆಚ್ಚಾಗೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಈಗ ಕಂಪ್ಲೀಟ್ ಆಗಿ ರಾಯಲ್ ಚಾಲೆಂಜರ್ಸ್ ಬ್ಯೂಟೀಸ್ ಟೀಂ ಆಗಿ ಬದ್ಲಾಗಿ ಬಿಟ್ಟಿದೆ. ಕಳೆದ ಮೂರು ಆವೃತ್ತಿಗಳಲ್ಲೂ ಬೆಂಗಳೂರು ತಂಡದ ಹುಡ್ದೀರು ಕ್ರಶ್ ಆಗಿದ್ದಾರೆ. ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್ ಈಗ ಲಾರೆನ್ ಬೆಲ್. ಹಂಗಂತ ಇವ್ರೆಲ್ಲಾ ಬರೀ ಬ್ಯೂಟೀಸ್ ಅಷ್ಟೇ ಅಲ್ಲ ಟ್ಯಾಲೆಂಟ್ ಕೂಡ ನೆಕ್ಸ್ಟ್ ಲೆವೆಲ್ನಲ್ಲಿದೆ. ಈ ಲಾರೆನ್ ಬೆಲ್ ಬಂದ್ಮೇಲಂತೂ ಆರ್ಸಿಬಿ ಹವಾ ಇನ್ನೂ ಒಂದು ಕೈ ಜಾಸ್ತಿ ಆಗಿದೆ.
ಮೆಗಾ ಹರಾಜಿಗೂ ಮೊದ್ಲೇ ಲಾರೆನ್ ಬೆಲ್ ಟ್ರೆಂಡ್!
ಡಬ್ಲ್ಯೂಪಿಎಲ್ ಮೆಗಾ ಆಕ್ಷನ್ಗೂ ಮೊದ್ಲೇ ಭಾರತದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಲಾರೆನ್ ಬೆಲ್ ಮೇಲಿತ್ತು. ಯಾಕಂದ್ರೆ ಕ್ರಿಕೆಟ್ ಲೋಕದಲ್ಲಿ ಆಲ್ರೆಡಿ ದೀ ಮೋಸ್ಟ್ ಬ್ಯೂಟಿಫುಲ್ ಪ್ಲೇಯರ್ ಅಂತಾ ಫೇಮಸ್ ಆಗಿದ್ದಾರೆ. ಡಬ್ಲ್ಯೂಪಿಎಲ್ ಮೆಗಾ ಹರಾಜಿನಲ್ಲಿದ್ದ ಈಕೆ ಯಾವ ತಂಡ ಸೇರ್ತಾರೆ ಅಂತಾ ಫುಲ್ ಕ್ಯೂರಿಯಸ್ ಆಗಿದ್ರು. ಒಂದಷ್ಟು ಟ್ರೋಲ್ ಪೇಜ್ ಗಳಲ್ಲಿ ಲಾರೆನ್ ಬೆಲ್ ಫೋಟೋ ಹರಿದಾಡ್ತಿದ್ವು. ಈ ಪ್ಲೇಯರ್ ಯಾವ ತಂಡಕ್ಕೆ ಸೇರ್ತಾರೋ ಅವ್ರಿಗೇ ನಾವು ಸಪೋರ್ಟ್ ಮಾಡೋದು ಅಂತಾ. ಯಾಕಂದ್ರೆ ಲಾರೆನ್ ಬೆಲ್ ನೋಡೋಕೆ ಅಷ್ಟು ಮುದ್ದಾಗಿದ್ದಾರೆ. ಫೈನಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 90 ಲಕ್ಷ ರೂಪಾಯಿಗೆ ಇವ್ರನ್ನ ಖರೀದಿ ಮಾಡಿದೆ. ಌಂಡ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಬಿಡ್ ಮಾಡಿದ ಹೈಯೆಸ್ಟ್ ಪೇಯ್ಡ್ ಗರ್ಲ್ ಇವ್ರೇ ಆಗಿದ್ದಾರೆ. ಅಷ್ಟಕ್ಕೂ ಯಾರು ಈ ಲಾರೆನ್ ಬೆಲ್ ಅಂದ್ರೆ ಇಂಗ್ಲೆಂಡ್ ತಂಡದ ಸುರಸುಂದರಿ.
ಆರ್ ಸಿಬಿಯಲ್ಲಿ ಆಡಲು ಕಾಯುತ್ತಿದ್ದೇನೆಂದ ಲಾರೆನ್!
ಬರೋಬ್ಬರಿ 6.2 ಅಡಿ ಎತ್ತರದ ಲಾರೆನ್ ಬೌಲಿಂಗ್ ನಲ್ಲಿ ತುಂಬಾನೇ ಸ್ಟ್ರಾಂಗ್ ಇದ್ದಾರೆ. ಸ್ವಿಂಗ್ & ಪೇಸ್ ಅಸ್ತ್ರದಿಂದಲೇ ಎದುರಾಳಿ ಬ್ಯಾಟರ್ಸ್ಗೆ ಬೆವರಿಳಿಸುತ್ತಾರೆ. ಇದೇ ಕಾರಣಕ್ಕೆ ಹರಾಜಿನಲ್ಲಿ ಫ್ರಾಂಚೈಸಿ 90 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ. 6 ಅಡಿ ಎರಡು ಇಂಚು ಎತ್ತರದ ಇಂಗ್ಲಿಷ್ ವೇಗದ ಬೌಲರ್ ಆಗಿರುವ ಲಾರೆನ್ ಬೆಲ್ 2001ರ ಜನವರಿ 2 ರಂದು ಸ್ಟಿಂಡನ್‌ನಲ್ಲಿ ಜನಿಸಿದರು. ಈವರೆಗೆ ಇಂಗ್ಲೆಂಡ್ ಪರ 36 ಟಿ20ಐ ಪಂದ್ಯಗಳನ್ನಾಡಿರೋ ಲಾರೆಲ್ ಬೆಲ್ 50 ವಿಕೆಟ್ ಬೇಟೆಯಾಡಿದ್ದಾರೆ. 7.40ರ ಎಕಾನಮಿ ಹೊಂದಿದ್ದಾರೆ. ಇಂಗ್ಲೆಂಡ್ ಪರ 5 ಟೆಸ್ಟ್ ಪಂದ್ಯಗಳು, 31 ಏಕದಿನ ಪಂದ್ಯಗಳು ಮತ್ತು 36 T201 ಗಳನ್ನು ಆಡಿದ್ದಾರೆ, 112 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು, ದಿ 100 ಲೀಗ್ನಲ್ಲೂ ಧೂಳೆಬ್ಬಿಸಿರೋ ಬೆಲ್ 41 ಮ್ಯಾಚ್ನಲ್ಲಿ 60 ವಿಕೆಟ್ ಉರುಳಿಸಿ ಕಮಾಲ್ ಮಾಡಿದ್ದಾರೆ. 6.81ರ ಉತ್ತಮ ಎಕಾನಮಿಯನ್ನ ಕಾಯ್ದುಕೊಂಡಿದ್ದಾರೆ. 16ನೇ ವಯಸ್ಸಿನಲ್ಲಿ ಕ್ರಿಕೆಟ್ ಆಯ್ಕೆ ಮಾಡುವ ಮೊದಲು ಅವರು ಫುಟ್ಬಾಲ್ ಆಟಗಾರ್ತಿಯಾಗಿದ್ದರು.
ಐಪಿಎಲ್ ಇರ್ಲಿ ಅಥವಾ ಡಬ್ಲ್ಯೂಪಿಎಲ್ ಇರ್ಲಿ.. ಹೈಯೆಸ್ಟ್ ಫ್ಯಾನ್ ಬೇಸ್ಡ್ ಫ್ರಾಂಚೈಸಿ ಅಂದ್ರೆ ಅದು ಆರ್ಸಿಬಿ ಅದ್ರಲ್ಲಿ ಎರಡು ಮಾತಿಲ್ಲ.. ಮೆನ್ಸ್ ಟೀಂ ಅಂತಾ ಬಂದಾಗ ತಂಡದ ವಿರಾಟ್ ಕೊಹ್ಲಿ. ಐಕಾನಿಕ್ ಪ್ಲೇಯರ್.. ಇನ್ನು ವುಮೆನ್ಸ್ ಟೀಮ್ನಲ್ಲೂ ಟ್ಯಾಲೆಂಟೆಡ್ ಗರ್ಲ್ಸ್ ಇದ್ದಾರೆ. ಒಟ್ನಲ್ಲಿ ಆರ್ಸಿಬಿ ಅಂದ್ರೇನೆ ಭಾಷೆ, ಗಡಿಗಳ ಗೆರೆ ದಾಟಿ ಫ್ಯಾನ್ಸ್ ಇದ್ದಾರೆ. ವರ್ಷದಿಂದ ವರ್ಷಕ್ಕೆ ಬೆಂಗಳೂರು ಟೀಂ ಹಾಗೇ ಫ್ಯಾನ್ಸ್ ಹವಾ ಹೆಚ್ಚಾಗ್ತಾನೇ ಇದೆ. ಇನ್ನು ಡಬ್ಲ್ಯೂಪಿಎಲ್ನಲ್ಲೂ ಆರ್ಸಿಬಿ ಕ್ರೇಜ್ ಮತ್ತಷ್ಟು ಪೀಕ್ಗೆ ಹೋಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

