ಅಶ್ವಿನಿ ಹೀರೋ ಆಗಲು ನನ್ನ ವಿಲನ್ ಮಾಡಿದರು! – ಗಿಲ್ಲಿನಟ ಶಾಕಿಂಗ್ ಹೇಳಿಕೆ

ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹತ್ತಿರವಾಗ್ತಿದ್ದಂತೆ ಸ್ಪರ್ಧಿಗಳ ಆಟದ ವರಸೆ ಬದಲಾಗಿದೆ. ಎಲ್ಲರೂ ಟ್ರೋಫಿ ಗೆಲ್ಲಲು ಸೀರಿಯಸ್ ಆಗಿ ಆಟ ಆಡ್ತಿದ್ದಾರೆ. ಆದ್ರೆ ಗಿಲ್ಲಿ ಮಾತ್ರ ಇನ್ನೂ ಆಟವನ್ನ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣ್ತಿಲ್ಲ. ಇದೀಗ ಗಿಲ್ಲಿ ಅಶ್ವಿನಿಯನ್ನ ಕೆಣಕಿದ್ದಾರೆ. ಇಬ್ಬರ ಮಧ್ಯೆ ದೊಡ್ಡ ವಾಗ್ವಾದ ನಡೆದಿದೆ.
ಇದನ್ನೂ ಓದಿ: ಇಂದೋರ್ ಕಲುಷಿತ ನೀರು ದುರಂತ – ಸಾವಿನ ಸಂಖ್ಯೆ 14ಕ್ಕೆ ಏರಿಕೆ, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ಬಿಗ್ಬಾಸ್ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಬಿಗ್ಬಾಸ್ ಒಂದು ಟಾಸ್ಕ್ ನೀಡಿದ್ದು, ಇದ್ರಲ್ಲಿ ಯಾರು ಉತ್ತಮ? ಯಾರು ಕಳಪೆ ಎಂದು ಸಮರ್ಥಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ವೇಳೆ ಗಿಲ್ಲಿ ನಟ ಅಶ್ವಿನಿ ಗೌಡಗೆ ಕಳಪೆ ನೀಡಿದ್ದಾರೆ. ಈ ಕಾರಣಕ್ಕೆ ಗಿಲ್ಲಿ ನಟ, ಅಶ್ವಿನಿ ಗೌಡ ಮಧ್ಯೆ ಜಗಳ ಶುರುವಾಗಿದೆ. ಬಾಯಿಗೆ ಬಂದಂತೆ ಬೈದುಕೊಂಡಿದ್ದಾರೆ.
ಪ್ರೋಮೋದಲ್ಲಿ ಗಿಲ್ಲಿನಟ, ಅಶ್ವಿನಿ ಹೀರೋ ಆಗೋಕೆ ಹೊರಟು, ನನ್ನ ವಿಲನ್ ಮಾಡಿದರು ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಅಶ್ವಿನಿ ನಾನು ಹೀರೋ ಆಗೋಕೆ ಹೊರಟಿಲ್ಲ, ನೀನು ಜೋಕರ್ ಆಗಬೇಡ ಎಂದಿದ್ದಾರೆ. ಆಗ ಗಿಲ್ಲಿ ನಾನು ಕಾಮಿಡಿಯನ್ ಅಂದಿದ್ದಕ್ಕೆ ಅಶ್ವಿನಿ ತಿಂದುಕೊಂಡು, ಉಂಡುಕೊಂಡು ಇರೋಕೆ ಬಿಗ್ ಬಾಸ್ ಮನೆಗೆ ಯಾಕೆ ಬರಬೇಕಿತ್ತು ಎಂದು ಕೇಳಿದ್ದಾರೆ. ಅದಕ್ಕೆ ತಿಂದುಕೊಂಡು, ಉಂಡುಕೊಂಡು ಇರೋಕೆ ನಾನು ಬಂದಿದೀನಿ. ಕ್ಯಾಪ್ಟನ್ ಆಗೋ ತಾಕತ್ತು ಇಲ್ಲ. ಒಂದು ಟಾಸ್ಕ್ ಗೆಲ್ಲೋಕೆ ಆಗಲಿಲ್ಲ ಎಂದಿದ್ದಾರೆ. ಆಗ ನಾನು ಸಾಬೀತು ಮಾಡ್ತೀನಿ ಎಂದು ಗಿಲ್ಲಿಗೆ ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಅಶ್ವಿನಿ ಗೌಡ-ಗಿಲ್ಲಿ ನಟನ ಜಗಳ ಮುಗಿಯೋ ಹಾಗೆ ಕಾಣ್ತಿಲ್ಲ. ಆರಂಭದಿಂದ ಇಲ್ಲಿಯವರೆಗೆ ಇವರಿಬ್ಬರೂ ಕಿತ್ತಾಡಿಕೊಂಡಲೇ ಬರುತ್ತಿದ್ದಾರೆ. ಈ ಜಗಳದ ಮಧ್ಯೆ ಬಳಸಿದ ಪದಗಳಿಂದಾಗಿ ಕಿಚ್ಚ ಸುದೀಪ್ ಕೂಡ ಕಿವಿ ಹಿಂಡಿದ್ದರು.

ನೋಡಿರಿ

