ಮನೆಗೆ ಬಾ.. ಸ್ವೀಟ್‌ ಕೊಡ್ತೀನಿ ಅಂದ್ಲು! – ಅಯ್ಯಯ್ಯೋ.. ಪ್ರಿಯಕರನ ಖಾಸಗಿ ಅಂಗವೇ ಕಟ್‌!

ಮನೆಗೆ ಬಾ.. ಸ್ವೀಟ್‌ ಕೊಡ್ತೀನಿ ಅಂದ್ಲು! – ಅಯ್ಯಯ್ಯೋ.. ಪ್ರಿಯಕರನ ಖಾಸಗಿ ಅಂಗವೇ ಕಟ್‌!

ಗರ್ಲ್‌ ಫ್ರೆಂಡ್‌ ಸ್ವೀಟ್‌ ಕೊಡ್ತೀನಿ ಬಾ ಅಂತ ಮನೆಗೆ ಕರೆದ್ಲು ಅಂತ ಹೋಗೋರೇ ಹುಷಾರು.. ಯಾಕಂದ್ರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು ಹೊಸ ವರ್ಷಾಚರಣೆಗೆ ಪ್ರಿಯಕರನನ್ನು ಮನೆಗೆ ಕರೆಸಿ ಮಾಡಿದ್ದೇನು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್‌ ಆಗ್ತೀರಾ.. ಮಹಳೆಯ ಬಣ್ಣದ ಮಾತು ಕೇಳಿ ಆಕೆ ಮನೆಗೆ ಹೋದಾತ ತನ್ನ ಆತನ ಖಾಸಗಿ ಅಂಗವನ್ನೇ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ತನ್ನ ಹೊಗಳಿದ್ರೆ ಮಾತ್ರ ಗಿಲ್ಲಿ ಫೇವರಿಟ್?‌ – ಗಿಲ್ಲಿ ಸಾಂಗ್‌ನಿಂದಲೇ ಬದಲಾದ್ರಾ ಧ್ರುವಂತ್?

ಈ ವಿಲಕ್ಷಣಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. 25 ವರ್ಷದ ವಿವಾಹಿತ ಮಹಿಳೆ ತನ್ನ 44 ವರ್ಷದ ಪ್ರಿಯಕರನಿಗೆ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಇದು ಅವರ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಡಿಸೆಂಬರ್ 31 ರಂದು ಮಹಿಳೆ ತನ್ನ ಮನೆಗೆ ಕರೆದು ಪ್ರಿಯಕರನ ಮೇಲೆ ದಾಳಿ ನಡೆಸಿದ್ದಾಳೆ.

ಡಿಸೆಂಬರ್ 31 ರಂದು ಮಹಿಳೆ ಹೊಸ ವರ್ಷಕ್ಕೆ ಸ್ವೀಟ್ ನೀಡುವ ನೆಪದಲ್ಲಿ ಅವನನ್ನು ತನ್ನ ಮನೆಗೆ ಆಹ್ವಾನಿಸಿದ್ದಳು. ಆ ಸಮಯದಲ್ಲಿ, ಮಹಿಳೆಯ ಮಕ್ಕಳು ಮನೆಯಲ್ಲಿ ಮಲಗಿದ್ದರು. ಮಹಿಳೆ ಮೊದಲು ಪ್ರಿಯಕರನ ಪ್ಯಾಂಟ್ ತೆಗೆಯಲು ಹೇಳಿ, ಅಡುಗೆ ಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕು ತಂದು, ಇದ್ದಕ್ಕಿದ್ದಂತೆ ಬಲಿಪಶುವಿನ ಖಾಸಗಿ ಅಂಗ ಕಟ್‌ ಮಾಡಿದ್ದಾಳೆ. ಕೂಡಲೇ ಆತ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾನೆ. ತೀವ್ರ ಗಾಯವಾಗಿದ್ದ ಆತ ಮನೆಗೆ ವಾಪಸ್‌ ಆದಾಗ, ಮಕ್ಕಳು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ ಇಬ್ಬರೂ ಸಂಬಂಧಿಕರು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆ ದಾಳಿಗೊಳಗಾದವನ ಸಹೋದರಿಯ ಅತ್ತಿಗೆ ಎಂದು ತಿಳಿದು ಬಂದಿದೆ. ಇಬ್ಬರೂ ಕಳೆದ ಆರರಿಂದ ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಪ್ರಿಯಕರ, ಮಹಿಳೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಎಂದು ವರದಿಯಾಗಿದೆ.

Shwetha M