ಮೋಸ ಮಾಡಿ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ರಾ ಧನುಷ್? – ಫಿನಾಲೆ ಟಾಸ್ಕ್‌ನಿಂದ ಔಟ್?‌

ಮೋಸ ಮಾಡಿ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ರಾ ಧನುಷ್? – ಫಿನಾಲೆ ಟಾಸ್ಕ್‌ನಿಂದ ಔಟ್?‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರ ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ಟಫ್‌ಫೈಟ್‌ ಏರ್ಪಟ್ಟಿದೆ. ಇದೀಗ ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ನಡೆದಿದೆ. ಇದ್ರಲ್ಲಿ ಗೆದ್ದವರು ಫಿನಾಲೆ ಟಾಸ್ಕ್‌ಗೆ ಆಯ್ಕೆಯಾಗಲಿದ್ದಾರೆ. ಇದೀಗ ಧನುಷ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸ ಮಾಡಿ ಗೆದ್ರಾ ಅನ್ನೋ ಅನುಮಾನ ಕಾಡ್ತಿದೆ.

ಇದನ್ನೂ ಓದಿ:‌ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್‌ ಗಲಾಟೆ – ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ

ಬಿಗ್‌ಬಾಸ್‌ ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಆಗುವ ಅವಕಾಶವನ್ನ ನೀಡಿದ್ದಾರೆ.  ಈ ಸ್ಥಾನಕ್ಕಾಗಿ ಅಶ್ವಿನಿ ಗೌಡ ವಿರುದ್ಧ ನಡೆದ ಟಾಸ್ಕ್‌ನಲ್ಲಿ ಧನುಷ್‌ ಮೋಸ ಮಾಡಿದ್ರಾ ಅನುಮಾನು ಶುರುವಾಗಿದೆ. ದೊಡ್ಮನೆ ಮಂದಿ ಬಳಿ ಈ ಬಗ್ಗೆ ಬಿಗ್‌ ಬಾಸ್‌ ಕೂಡ ಪ್ರಶ್ನಿಸಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಕೊನೆಯ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದ ಅಶ್ವಿನಿ ಗೌಡ ಮತ್ತು ಧನುಷ್‌ಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಒಂದು ಮೇಜಿನಲ್ಲಿ ಪಜಲ್‌ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಮೇಜಿನ ಮೇಲ್ಭಾಗದಲ್ಲಿ ಚಾಕು ಇರುವ ಪಜಲ್‌ ತುಂಡಿರುತ್ತದೆ. ಅದನ್ನು ಮೇಜಿನ ಕೆಳಭಾಗಕ್ಕೆ ತಂದು ಹೊರತೆಗೆಯಬೇಕು. ಇದರ ಮಧ್ಯೆ ಸಿಗುವ ಪಜಲ್‌ ತುಂಡುಗಳನ್ನು ಪಕ್ಕಕ್ಕೆ ಸರಿಸುತ್ತಾ, ಚಾಕು ಇರುವ ತುಂಡನ್ನು ಕೆಳಭಾಗಕ್ಕೆ ತರಬೇಕು. ಈ ವೇಳೆ, ಪಜಲ್‌ ತುಂಡುಗಳನ್ನು ತಿರುಗಿಸುವಂತಿಲ್ಲ ಮತ್ತು ಸ್ಥಳಾಂತರಿಸುವಂತಿಲ್ಲ. ಟಾಸ್ಕ್‌ ಪೂರ್ಣಗೊಳಿಸಿ ಹಗ್ಗವನ್ನು ಮೊದಲು ಕತ್ತರಿಸುವ ಸ್ಪರ್ಧಿ ವಿನ್ನರ್‌ ಆದಂತೆ. ಇದು ಆಟದ ನಿಯಮವಾಗಿತ್ತು. ಈ ಟಾಸ್ಕ್‌ನ ಅಶ್ವಿನಿಗಿಂತ ಬೇಗವಾಗಿ ಧನುಷ್‌ ಮುಗಿಸಿ ಗೆದ್ದಿದ್ದಾರೆ.

ಇನ್ನು ಟಾಸ್ಕ್‌ ಕಂಪ್ಲೀಟ್‌ ಆಗ್ತಿದ್ದಂತೆ ಬಿಗ್‌ಬಾಸ್‌ ಆಟದ ವಿಚಾರವಾಗಿ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಪಜಲ್‌ ತುಂಡನ್ನು ಸರಿಸಬೇಕಿರುವ ಮಾನದಂಡದ ಪ್ರಕಾರ, ಚಾಕು ಇರುವ ಪಜಲ್‌ ತುಂಡನ್ನು ಹೊರಗೆ ತೆಗೆಯಲಾಗಿದೆಯೇ ಎಂದು ಬಿಗ್‌ ಬಾಸ್‌ ಪ್ರಶ್ನೆ ಮಾಡ್ತಾರೆ. ಚಾಕು ಇರುವ ತುಂಡನ್ನು ಹೊರತೆಗೆಯುವ ಭರದಲ್ಲಿ ಧನುಷ್‌ ಯಡವಟ್ಟು ಮಾಡಿಕೊಂಡಿರುವಂತೆ ಕಾಣುತ್ತಿದೆ. ಇದೀಗ ಧನುಷ್‌ ಮೋಸದ ಆಟ ಆಡಿ ಗೆದ್ರಾ? ಅವರೇ ಮನೆಯ ಕೊನೆಯ ಕ್ಯಾಪ್ಟನ್‌ ಆಗಿ ಫಿನಾಲೆಗೆ ಮೊದಲ ಎಂಟ್ರಿ ಕೊಡ್ತಾರಾ? ಅಥವಾ ಕ್ಯಾಪ್ಟನ್ಸಿ ಸ್ಥಾನ ಅವರ ಕೈತಪ್ಪುತ್ತಾ ಎಂಬುದನ್ನು ಕಾದುನೋಡಬೇಕಿದೆ.

Shwetha M