BCCI ತಲೆಬಿಸಿಗೆ ಶಮಿ ಮದ್ದು – NZ ಸರಣಿಗೆ ಸೆಲೆಕ್ಟ್ ಮಾಡಿದ್ರಷ್ಟೇ ಸೇಫ್
35+ ಆದವ್ರು ಬೌಲಿಂಗ್ ಮಾಡ್ತಿಲ್ವಾ?

BCCI ತಲೆಬಿಸಿಗೆ ಶಮಿ ಮದ್ದು – NZ ಸರಣಿಗೆ ಸೆಲೆಕ್ಟ್ ಮಾಡಿದ್ರಷ್ಟೇ ಸೇಫ್35+ ಆದವ್ರು ಬೌಲಿಂಗ್ ಮಾಡ್ತಿಲ್ವಾ?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ಭಾರತ ಈ ವರ್ಷದ ಜರ್ನಿ ಸ್ಟಾರ್ಟ್ ಮಾಡುತ್ತೆ. ಌಂಡ್ ವೀಕೆಂಡ್​ನಲ್ಲಿ ಟೀಂ ಕೂಡ ಅನೌನ್ಸ್ ಆಗೋ ಸಾಧ್ಯತೆ ಇದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿ ಮೂಲಕ ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡೋ ಚಾನ್ಸಸ್ ಜಾಸ್ತಿ ಇದೆ.

ಇದನ್ನೂ ಓದಿ : VHTಯಲ್ಲಿ ಗಿಲ್ ಅದೃಷ್ಟ ಪರೀಕ್ಷೆ – ರಾಹುಲ್, ಜಡ್ಡು ಬೆನ್ನು ಬಿದ್ದ BCCI

ಟೀಂ ಇಂಡಿಯಾ ಬೌಲಿಂಗ್ ಸ್ಕ್ಯಾಡ್ ಅಂದಾಗ ಥಟ್ ಅಂತಾ ನೆನಪಾಗೋದೇ ಜಸ್ಪ್ರೀತ್ ಬುಮ್ರಾ. ಯಾವುದೇ ಫಾರ್ಮೆಟ್​​ನಲ್ಲಿ ಆಡ್ತಿದ್ರೂ ವಿಕೆಟ್ ಟೇಕಿಂಗ್ ಬೌಲರ್ ಪ್ಲಸ್ ಎಕಾನಮಿ ರೇಟ್​ ಕೂಡ ಅದ್ಭುತವಾಗಿದೆ. ನ್ಯೂಬಾಲ್ & ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್. ವೇಗದ ಬೌಲರ್​ಗಳಲ್ಲಿ ಬುಮ್ರಾ ಹೊರತುಪಡಿಸಿದ್ರೆ ಮೋಸ್ಟ್ ಎಕ್ಸ್​ಪೀರಿಯನ್ಸ್​​ಡ್ ಪ್ಲೇಯರ್ ಅನ್ಸೋದು ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ. ಈಗ ಟಿ-20 ವಿಶ್ವಕಪ್ ಅಂತಾ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯಗೆ ರೆಸ್ಟ್ ಕೊಡೋಕೆ ಬಿಸಿಸಿಐ ಮುಂದಾಗಿದೆ. ಜೊತೆಗೆ ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಇದ್ರೂ ಅನುಭವಿ ಅಂತಾ ನೋಡ್ದಾಗ ಶಮಿನೇ ದಿ ಬೆಸ್ಟ್ ಅನ್ಸುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದ ಪರ ಆಡುವಂಥ ಎಲ್ಲಾ ಅರ್ಹತೆಗಳೂ ಮೊಹಮ್ಮದ್ ಶಮಿ ಅವ್ರಲ್ಲಿದೆ. ಭಾರತ ತಂಡದಿಂದ ಕೈಬಿಟ್ಟಿದ್ರೂ ಡೊಮೆಸ್ಟಿಕ್​ನಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡ್ತಿದ್ದಾರೆ.

ದೇಶೀ ಕ್ರಿಕೆಟ್ ನಲ್ಲಿ ಬಂಗಾಳ ಪರ ಶಮಿ ಅಬ್ಬರ!

ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗದೇ ಇದ್ರೂ ದೇಶೀಯ ಕ್ರಿಕೆಟ್​ನಲ್ಲಿ ಮೊಹಮ್ಮದ್ ಮಿಂಚು ಹರಿಸ್ತಿದ್ದಾರೆ. 2025ರಲ್ಲಿ ಬಂಗಾಳ ಪರ 200 ಕ್ಕೂ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ರಣಜಿ ಟ್ರೋಫಿ , ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡುತ್ತಿದ್ದಾರೆ. ತಮ್ಮ ಪ್ರದರ್ಶನವೇ ತಮ್ಮ ಬಗ್ಗೆ ಮಾತಾಡುವಂತೆ ಅಬ್ಬರಿಸ್ತಿದ್ದಾರೆ.  ಇನ್ನು ಟೀಂ ಇಂಡಿಯಾಗೆ ಆಯ್ಕೆ ವಿಚಾರವಾಗಿ ಅಜಿತ್ ಅಗರ್ಕರ್ ಮತ್ತು ಶಮಿ ನಡುವೆ ಕೌಂಟರ್​ವಾರ್ ಕೂಡ ನಡೆದಿತ್ತು. ಈ ವೇಳೆ ಅಗರ್ಕರ್ ಅವ್ರು ಶಮಿ ಇನ್ನೊಂದಷ್ಟು ಪಂದ್ಯಗಳನ್ನ ಆಡ್ಬೇಕು ಅಂದಿದ್ರು. ಆದ್ರೆ ಶಮಿ ರಣಜಿ ಟ್ರೋಫಿಯಲ್ಲಿ 145.2 ಓವರ್‌ಗಳು, SMAT ನಲ್ಲಿ 26.5 ಓವರ್‌ಗಳು ಮತ್ತು ನಡೆಯುತ್ತಿರುವ VHT ನಲ್ಲಿ 34.2 ಓವರ್‌ಗಳನ್ನ ಬೌಲ್ ಮಾಡಿ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ.

35 ವರ್ಷ ವಯಸ್ಸು.. 2027ರ ವಿಶ್ವಕಪ್ ಆಡಿಸ್ತಾರಾ?

ಇನ್ನು ಭಾರತ ತಂಡಕ್ಕೆ ಸೆಲೆಕ್ಟ್ ಮಾಡಲು ಬಿಸಿಸಿಐ ಮಿನಮೇಷ ಎಣಿಸ್ತಿರೋದಕ್ಕೆ ಕಾರಣವೇ 35 ವರ್ಷ ವಯಸ್ಸಾಗಿದೆ ಅನ್ನೋದು. 2027ರ ವಿಶ್ವಕಪ್​ವರೆಗೂ ಆಡಿಸ್ಬೇಕಾ ಅಥವಾ ಬೇರೆ ಯಾರನ್ನಾದ್ರೂ ಆಡಿಸಿ ರೆಡಿ ಮಾಡ್ಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ಆದ್ರೆ ಮಿಚೆಲ್ ಸ್ಟಾರ್ಕ್ 35 ನೇ ವಯಸ್ಸಿನಲ್ಲಿ ಎದುರಾಳಿಗಳನ್ನು ಬೆಂಡೆತ್ತುತ್ತಿದ್ದಾರೆ.. ಸ್ಕಾಟ್ ಬೋಲ್ಯಾಂಡ್ 36 ನೇ ವಯಸ್ಸಿನಲ್ಲಿ ಸದ್ದು ಮಾಡ್ತಿದ್ದಾರೆ.  ಮೈಕೆಲ್ ನೆಸರ್ 35 ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಪರ ಪ್ರಭಾವ ಬೀರುತ್ತಿದ್ದಾರೆ ಅಂದ್ರೆ ಶಮಿ ಕೂಡ ಈ ವಯಸ್ಸಲ್ಲಿ ಆರಾಮಾಗಿ ಆಡ್ಬೋದು.  ಬಲಗೈ ಸೀಮರ್ ಶಮಿ 2023 ರ ODI ವಿಶ್ವಕಪ್‌ನ ಆರಂಭದಲ್ಲಿ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಆ ನಂತ್ರ ಅವಕಾಶ ಸಿಕ್ಕಾಗ ಯಾಕಾದ್ರೂ ಬೆಂಚ್ ಕಾಯಿಸಿದ್ವೋ ಅಂತಾ ಮ್ಯಾನೇಜ್​ಮೆಂಟೇ ಸಫರ್ ಆಗಿತ್ತು. ಆ ಮಟ್ಟಿಗೆ ಪ್ರದರ್ಶನ ನೀಡಿದ್ರು. ಹೀಗಾಗಿ ಭಾರತದ ಪರ ಆಡಲು ಶಮಿ ಇನ್ನೂ ಕೇಪೆಬಲ್ ಇದ್ದಾರೆ. ಶಮಿ ಕೊನೆಯ ಬಾರಿಗೆ ಭಾರತದ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ರು. ಐದು ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದರು.. ಇದ್ರಲ್ಲಿ ಒಂದು ಫೈಫರ್ ಸಾಧನೆಯೂ ಸೇರಿತ್ತು. ಬಳಿಕ ಇಂಗ್ಲೆಂಡ್ ಸಿರೀಸ್​ಗೆ ಫಿಟ್​ನೆಸ್ ಪ್ರಾಬ್ಲಂ ಹೇಳಿ ಬಿಸಿಸಿಐ ಹೊರಗಿಟ್ಟಿತ್ತು. ಅಲ್ಲಿಂಗ ಈಚೆಗೆ ಶಮಿಗೆ ಭಾರತದ ಬಾಗಿಲು ತೆರೆದೇ ಇಲ್ಲ.

ಡೊಮೆಸ್ಟಿಕ್ ನಲ್ಲಿ ನಲ್ಲಿ ಶಮಿ ಬೌಲಿಂಗ್ ಬಿರುಗಾಳಿ!

ಇನ್ನು ರಣಜಿ ಟ್ರೋಫಿಯ 2025-26ರ ಟೂರ್ನಿಯ ಫಸ್ಟ್ ಆಫ್​ನ 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ರು. ಬಂಗಾಳ ಪರ 7 ಇನ್ನಿಂಗ್ಸ್​ಗಳನ್ನ ಆಡಿದ್ದ ಮೊಹಮ್ಮದ್ ಶಮಿ 20 ವಿಕೆಟ್​ಗಳನ್ನ ಬೇಟೆಯಾಡಿದ್ರು. ಹಾಗೇ 18.60 ಆವರೇಜ್​ನಲ್ಲಿ 20 ವಿಕೆಟ್​ಗಳನ್ನ ಬೇಟೆಯಾಡಿದ್ರು. ಹಾಗೇ 2025-26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 7 ಇನ್ನಿಂಗ್ಸ್​ಗಳಲ್ಲಿ 16 ವಿಕೆಟ್ ಕಬಳಿಸಿದ್ರು. ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 4 ಪಂದ್ಯಗಳಿಂದ 8 ವಿಕೆಟ್​ಗಳನ್ನ ಉರುಳಿಸಿದ್ರು. ಹೀಗಾಗಿ ಟೀಂ ಇಂಡಿಯಾದಲ್ಲಿ ಚಾನ್ಸ್ ನೀಡುವಂತೆ ಪದೇಪದೆ ಸೋಶಿಯಲ್ ಮೀಡಿಯಾ ಮೂಲಕವೂ ಪೋಸ್ಟ್​ಗಳನ್ನ ಹಾಕ್ತಿದ್ರು. ಌಂಡ್ ಅಜಿತ್ ಅಗರ್ಕರ್ ಕೂಡ ಈ ಬಗ್ಗೆ ರಿಯಾಕ್ಟ್ ಮಾಡಿದ್ರು. ಈಗಲಾದ್ರೂ ಚಾನ್ಸ್ ಕೊಡ್ತಾರಾ ನೋಡ್ಬೇಕು.

Shantha Kumari