ಯುಗಾದಿಗೆ ಬಾಕ್ಸಾಫೀಸ್ ಕ್ಲ್ಯಾಶ್!– TOXIC VS ಧುರಂಧರ್-2 ಫೈಟ್
ಗೆಲ್ಲೋ ಸಿನಿಮಾ ಯಾವುದು?

ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಏನು ಹೊಸದಲ್ಲ. ಕಳೆದ ಡಿಸೆಂಬರ್‌ನಲ್ಲಿ ಮಾರ್ಕ್ ಮತ್ತು 45 ನಡುವೆ ಕ್ಲ್ಯಾಶ್ ಆಗಿತ್ತು. ಈಗ 2026 ರಲ್ಲಿ ದೊಡ್ಡ ಸಿನಿಮಾದ ನಡುವೆ ಬಿಗ್ ಕ್ಲ್ಯಾಶ್ ಆಗಲಿದೆ. ಎರಡು ಬಿಗ್ ಬಜೆಟ್ ಮತ್ತು ಸಾಕಷ್ಟು ನಿರೀಕ್ಷೆ ಮೂಡಿಸಿರೋ ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲಿದೆ. ಈ ಬಾರಿ ಯುಗಾದಿಯಂದೇ ಟಾಕ್ಸಿಕ್ ಹಾಗೂ ಧುರಂಧರ್ 2 ಚಿತ್ರಗಳು ಬಿಡುಗಡೆಯಾಗುತ್ತಿದೆ. ಹಾಗಿದ್ರೆ ಈ ಎರಡು ಸಿನಿಮಾದಲ್ಲಿ ಗೆಲ್ಲೋ ಸಿನಿಮಾ ಯಾವುದು ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ.
ಸಾಕಷ್ಟು ದಿನಗಳ ಹಿಂದೆಯೇ2026 ರ ಮಾರ್ಚ್ 19 ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ ಅಂತ ಟಾಕ್ಸಿಕ್ ಚಿತ್ರತಂಡ ಘೋಷಿಸಿತ್ತು. ಹಾಗಾಗಿ ಆ ದಿನ ಬೇರೆ ಯಾವುದೇ ಸಿನಿಮಾ ಬಿಡುಗಡೆಗೆ ಯಾರೂ ಮನಸ್ಸು ಮಾಡಲಿಲ್ಲ. ಲವ್ ಅಂಡ್ ವಾರ್ ಸಿನಿಮಾ ರಿಲೀಸ್ ಡೇಟ್ ಕೂಡ ಟಾಕ್ಸಿಕ್ ವಿಚಾರಕ್ಕೆ ಮುಂದೂಡಲಾಗಿತ್ತು. ಆದರೆ ದಿಢೀರನೆ ಅದೇ ದಿನ ‘ಧುರಂಧರ್’-2 ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದಾರೆ. ಇದು ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಕಾರಣವಾಗ್ತಿದೆ.
ಇದನ್ನೂ ಓದಿ: ಕಡೆಗೂ ಗೊತ್ತಾಯ್ತು ಭೂಮಿಕಾಗೆ ಒಡಲ ರಹಸ್ಯ! – ಭಾಗ್ಯಮ್ಮ ರಾಕ್.. ಶಕುಂತಲಾ ಶಾಕ್!
ಟಾಕ್ಸಿಕ್ ಹಾಗೂ ಧುರಂಧರ್’-2 ಎರಡೂ ಕೂಡ ದೊಡ್ಡ ಸಿನಿಮಾಗಳೇ. ‘KGF’-2 ಬಳಿಕ ಯಶ್ ನಟನೆಯ ಸಿನಿಮಾ ಎನ್ನುವ ಕಾರಣಕ್ಕೆ ಟಾಕ್ಸಿಕ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಯಶ್ ಕೂಡ ಕೆಜಿಎಫ್ ನಂತ್ರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಇವರಿಗೆ ಈ ಸಿನಿಮಾ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಹಾಗೇ ಧುರಂಧರ್ ರಿಲೀಸ್ ಸಾಕಷ್ಟು ಸಕ್ಸಸ್ ಕಾಣುತ್ತಿದ್ದು, ಸಾವಿರಾರು ಕೋಟಿ ಬಾಚಿಕೊಳ್ಳುತ್ತಿದೆ. ಹೀಗಾಗಿಯೇ ಬ್ಲಾಕ್‌ಬಸ್ಟರ್ ಧುರಂಧರ್ ಸಕ್ಸಸ್ ಸೀಕ್ವೆಲ್ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ. ಈ ಎರಡು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಆದ್ರೆ ಈ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗ್ತಾ ಇದ್ದು, ಅತಿದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ಆಗಲಿದೆ. ಎರಡೂ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗ್ತಿದೆ. ಒಂದೇ ದಿನ ಎರಡೂ ಸಿನಿಮಾಗಳು ಬರುವುದರಿಂದ ಉತ್ತರ ಭಾರತದಲ್ಲಿ ಟಾಕ್ಸಿಕ್ ಚಿತ್ರಕ್ಕೆ ಹಿನ್ನಡೆ ಆಗಬಹುದು. ಅದೇ ರೀತಿ ದಕ್ಷಿಣದಲ್ಲಿ ‘ಧುರಂಧರ್’-2 ಚಿತ್ರಕ್ಕೆ ಕೊಂಚ ಪೆಟ್ಟು ಬೀಳಬಹುದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.
ಧುರಂಧರ್’ ಸಿನಿಮಾ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೊಂಡಾಡುತ್ತಿದ್ದಾರೆ. ಇದೀಗ ‘ಟಾಕ್ಸಿಕ್’ ಹಾಗೂ ‘ಧುರಂಧರ್’-2 ಕ್ಲ್ಯಾಶ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಟಾಕ್ಸಿಕ್’ ಎದುರು ‘ಧುರಂಧರ್’-2 ಆರ್ಭಟ ಜೋರಾಗಿರುತ್ತದೆ ಎನ್ನುವ ಅರ್ಥದಲ್ಲಿ ವರ್ಮಾ ಟ್ವೀಟ್ ಮಾಡಿದ್ದಾರೆ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ. ಆಗಲಿ ನೋಡೋಣ ಏನಾಗುತ್ತದೆ ಎಂದು ಆರ್‌ಜಿವಿಗೆ ತಿರುಗೇಟು ನೀಡುತ್ತಿದ್ದಾರೆ. ಈ ಹಿಂದೆ ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಯಶ್ ಮಾತನಾಡಿದ್ದ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನನ್ನ ಸಿನಿಮಾ ಬಿಡುಗಡೆ ಆಗುವಾಗ ಬೇರೆ ಯಾವುದೇ ಸಿನಿಮಾ ಬಂದ್ರು ನಾನು ತಲೆಕೆಡಿಸಿಕೊಳ್ಳಲ್ಲ. ಅದು ನನ್ನ ಸಿನಿಮಾ ನಾನು ರಿಲೀಸ್ ಮಾಡ್ತೀನಿ, ಉಳಿದವರು ಆ ಬಗ್ಗೆ ಯೋಚಿಸಬೇಕು ಎಂದು ಹಿಂದೆ ಸಂದರ್ಶನವೊಂದರಲ್ಲಿ ಯಶ್ ಹೇಳಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ.
‘ಧುರಂಧರ್’ ಸಿನಿಮಾ 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ಸಾಕಷ್ಟು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈನಡುವೆ ಧುರಂಧರ ಸಿನಿಮಾವನ್ನ ಹೊಗಳುವ ಭರದಲ್ಲಿ ಟಾಕ್ಸಿಕ್ ಸಿನಿಮಾವನ್ನ ತೆಗಳಿದ್ದಾರೆ. ಧುರಂಧರ್ 2ರ ಬೈಟ್ ವಿಷಕಾರಿಯಾಗಿರುತ್ತದೆ” ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಭಾರತದ ಸಿನಿಮಾ ರಂಗದ ವಿರುದ್ಧ ಅವರು ಈ ಟ್ವೀಟ್ ಮಾಡಿದ್ದು ಬಹಳಷ್ಟು ಜನರಿಗೆ ಇಷ್ಟವಾಗಿಲ್ಲ. ಧುರಂಧರ್ ಸಿನಿಮಾಗೆ ಹೋಲಿಸುತ್ತಾ ಆರ್ಜಿವಿ ಸೌತ್ ಸಿನಿಮಾ ಟೀಕಿಸಿದ್ದಾರೆ.
ಈ ಹಿಂದೆ ಕೂಡ ‘ಧುರಂಧರ್’ ಸಿನಿಮಾ ಮೆಚ್ಚಿ ವರ್ಮಾ ಟ್ವೀಟ್ ಮಾಡಿದ್ದರು. ಬಾಲಿವುಡ್ ಮೇಲೆ ದಕ್ಷಿಣದ ಭಾರತದ ಸಿನಿಮಾಗಳ ಆರ್ಭಟವನ್ನು ‘ಧುರಂಧರ್’ ಮೂಲಕದ ಆದಿತ್ಯಧರ್ ಎಡಗಾಲಿನಲ್ಲಿ ಒದ್ದಿದ್ದಾರೆ. ಇದೀಗ ಬಲಗಾಲನ್ನು ‘ಧುರಂಧರ್-2’ ಮೂಲಕ ಸಿದ್ಧಪಡಿಸುತ್ತಿದ್ದಾರೆ” ಎಂದು ವ್ಯಂಗ್ಯ ಮಾಡಿದ್ದರು. “ಮೊದಲ ಭಾಗ ಪ್ರೇಕ್ಷಕರನ್ನು ಹೆದರಿಸಿದರೆ, ಎರಡನೆಯದು ಅವರನ್ನು ಮತ್ತಷ್ಟು ಭಯಭೀತಗೊಳಿಸುತ್ತದೆ” ಎಂದು ಬರೆದುಕೊಂಡಿದ್ರು. ಇದು ಟಾಕ್ಸಿಕ್‌ಗೆ ಟಾಂಗ್ RGV ಹೀಗೆ ಬರೆದುಕೊಂಡಿದ್ರು.
ಒಟ್ನಲ್ಲಿ ಭಾರತೀಯ ಚಿತ್ರರಂಗ ಮಾರ್ಕ್‌ನಲ್ಲಿ ದೊಡ್ಡ ಬಾಕ್ಸ್ ಆಪೀಸ್ ಕ್ಲ್ಯಾಶ್ ಎದುರಿಸಲಿದೆ. ಇದ್ರಲ್ಲಿ ಈ ಎರಡು ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಧುರಂಧರಿಗೆ ಕೆಲ ದೇಶಗಳಲ್ಲಿ ನಿಷೇಧ ಎದುರಿಸುತ್ತಿದ್ದರೆ, ಟಾಕ್ಸಿಕ್ ಕಥೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಈ ಎರಡು ಸಿನಿಮಾಗಳ ಫೈಟ್‌ನಲ್ಲಿ ಕೊನೆಯಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ನಮಸ್ಕಾರ.

ನೋಡಿರಿ

