ಹೊಸ ವರ್ಷದ ದಿನ ಭಾರತದ ಮುಂದೆ ಬಿಟ್ಟಿ ಬಿಲ್ಡಪ್ ಕೊಟ್ಟಪಾಕ್

2026ರ ಮೊದಲ ದಿನವೇ ಪಾಕ್ ಭಾರತಕ್ಕೆ ಬೆದರಿಕೆ ಹಾಕಿದೆ. ಭಾರತದ ಜೊತೆ ಸಂಬಂಧವನ್ನ ಸರಿಪಡಿಸಿಕೊಳ್ಳುವುದು ಬಿಟ್ಟು, ನರಿ ಬುದ್ಧಿ ಪಾಕ್ ಬಿಟ್ಟಿ ಬಿಲ್ಡಪ್ ಕೊಟ್ಟಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪಾಕಿಸ್ತಾನವು ಹೊಸ ವರ್ಷವನ್ನು ಬಿಲ್ಡಪ್ ಕೊಟ್ಟು ಸ್ವಾಗತ ಮಾಡಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಭಾರತವನ್ನು ನೇರವಾಗಿ ಹೆಸರಿಸದೆ, ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಯ ಧಕ್ಕೆ ತಂದರೆ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಯಾವುದೇ ಹಂತಕ್ಕೆ ಹೋಗಲಿದೆ ಎಂದು ಮನೀರ್ ಹೇಳಿದ್ದಾರೆ. ಭಯೋತ್ಪಾದನೆ ಮತ್ತು ಅಶಾಂತಿಯನ್ನು ತೊಡೆದು ಹಾಕಲು ಭದ್ರತಾ ಪಡೆಗಳು ಕಠಿಣ ಕಾರ್ಯಾಚರಣೆಗಳನ್ನು ಮುಂದುವರಿಸಿವೆ ಎಂದಿದ್ದಾರೆ.
ಇದನ್ನೂ ಓದಿ: ಮಯಾಂಕ್ & ದೇವದತ್ ಪಡಿಕ್ಕಲ್ ಶತಕ – ಕರ್ನಾಟಕದ ಪರ ಸಿಡಿಲಬ್ಬರದ ಆಟ
ಹಾಗೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಡ್ರೋನ್‌ಗಳನ್ನು ಬಳಸಿಕೊಂಡು ಪಂಜಾಬ್‌ಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳುಹಿಸುತ್ತಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಹೇಳಿದ್ದಾರೆ.ಗ್ರೆನೇಡ್ ದಾಳಿಯಂತಹ ಘಟನೆಗಳನ್ನು ಪ್ರೋತ್ಸಾಹಿಸುವ ಮೂಲಕ ಪಾಕಿಸ್ತಾನ ಪಂಜಾಬ್ ಅನ್ನು ಅತ್ಯಂತ ತೊಂದರೆಗೊಳಗಾದ ರಾಜ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಗಡಿಯಾಚೆಯಿಂದ ಐಎಸ್‌ಐ ಆಯೋಜಿಸಿದ್ದ ಪ್ರತಿಯೊಂದು ಪಿತೂರಿಯನ್ನು ಪೊಲೀಸರು ಯಶಸ್ವಿಯಾಗಿ ವಿಫಲಗೊಳಿಸುತ್ತಿದ್ದಾರೆ ಎಂದು ಪಂಜಾಬ್ ಡಿಜಿಪಿ ಹೇಳಿದರು.
ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ನಡೆದ ಗ್ರೆನೇಡ್ ದಾಳಿಯನ್ನು ಉಲ್ಲೇಖಿಸಿ, ಪಾಕಿಸ್ತಾನ ಗಡಿ ರಾಜ್ಯದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದೆ, ಆದರೆ ಭದ್ರತಾ ಸಂಸ್ಥೆಗಳು ಸಂಪೂರ್ಣವಾಗಿ ಜಾಗರೂಕರಾಗಿ ಪ್ರತಿಯೊಂದು ಪ್ರಯತ್ನವನ್ನೂ ತಟಸ್ಥಗೊಳಿಸುತ್ತಿವೆ ಎಂದ್ರು. ದೇಶದ ಸಶಸ್ತ್ರ ಪಡೆಗಳ ಸಂಪೂರ್ಣ ನಿಯಂತ್ರಣವನ್ನು ನೀಡುವ ಮೂಲಕ ಇತ್ತೀಚೆಗೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (CDF) ನೇಮಕಗೊಂಡ ಅಸಿಮ್ ಮುನೀರ್, ಗುಜ್ರಾನ್‌ವಾಲಾ ಮತ್ತು ಸಿಯಾಲ್‌ಕೋಟ್ ಗ್ಯಾರಿಸನ್‌ಗಳಿಗೆ ಭೇಟಿ ನೀಡಿದರು.

ನೋಡಿರಿ

