ಕಡೆಗೂ ಗೊತ್ತಾಯ್ತು ಭೂಮಿಕಾಗೆ ಒಡಲ ರಹಸ್ಯ! – ಭಾಗ್ಯಮ್ಮ ರಾಕ್.. ಶಕುಂತಲಾ ಶಾಕ್!

ಅಮೃತಧಾರೆ ಸೀರಿಯಲ್ ಈಗ ರೋಚಕ ಘಟ್ಟತಲುಪಿದೆ. ದೂರವಾದ ಭೂಮಿಕಾ ಹಾಗೂ ಗೌತಮ್‌ನ ಒಂದು ಮಾಡಲು ಎಲ್ಲರೂ ಒಟ್ಟಾಗಿದ್ದಾರೆ. ಆದ್ರೆ ಕೆಡಿ ಜೈದೇವ್‌ನಿಂದಾಗಿ ಹತ್ತಿರವಾಗ್ತಿರೋ ಭೂಮಿಕಾ ದೇಶವನ್ನೇ ಬಿಟ್ಟುಹೋಗಲು ಮುಂದಾಗಿದ್ದಳು. ಆದ್ರೀಗ ಭಾಗ್ಯಮ್ಮ ಶಕುಂತಲಾಗೆ ಶಾಕ್ ಕೊಟ್ಟಿದ್ದಾಳೆ.
ಇದನ್ನೂ ಓದಿ: ಒಂದೇ ದಿನ ನಮ್ಮ ಮೆಟ್ರೋದಲ್ಲಿ 8.93 ಲಕ್ಷ ಪ್ರಯಾಣಿಕರ ಸಂಚಾರ! BMRCLಗೆ ಕೋಟಿ ಕೋಟಿ ಆದಾಯ
ಭೂಮಿಕಾಗೆ ಈಗ ಮಗಳು ಬದುಕಿರುವ ವಿಚಾರ ಗೊತ್ತಾಗಿದೆ. ಭೂಮಿಕಾ ಇನ್ನೇನು ದೇಶವನ್ನು ಬಿಟ್ಟು ಹೋಗಬೇಕು ಎನ್ನುವಷ್ಟರಲ್ಲಿ ಆನಂದ್ ಬಂದು ಮಗಳು ಬದುಕಿರುವ ಸುದ್ದಿಯನ್ನು ಹೇಳಿದ್ದಾನೆ. ಸತ್ಯ ಗೊತ್ತಾಗ್ತಿದ್ದಂತೆ ಭೂಮಿಕಾ ಫಾರಿನ್‌ಗೆ ಹೋಗೋ ಪ್ಲ್ಯಾನ್‌ನ ಅರ್ಧಕ್ಕೆ ಸ್ಟಾಪ್ ಮಾಡಿದ್ದಾಳೆ. ಮತ್ತೊಂದ್ಕಡೆ ಅದೇ ಇನ್ನೊಂದೆಡೆ ಮಲ್ಲಿ ಭೂಮಿಕಾಗೆ ಬುದ್ಧಿಮಾತು ಹೇಳಿ, ಗೌತಮ್ ಮಗುವನ್ನು ಹುಡುಕುತ್ತಿರುವ ದಾಖಲೆ ಕೊಟ್ಟಿದ್ದಾಳೆ. ಇದನ್ನೆಲ್ಲಾ ನೋಡಿದ ಮೇಲೆ ಭೂಮಿಕಾಗೆ ತಾನು ಮಾಡ್ತಿರೋದು ತಪ್ಪು ಎನ್ನಿಸಿದೆ. ಗೌತಮ್ ಬಳಿ ಎಲ್ಲಾ ವಿಷಯ ಹೇಳುವ ನಿರ್ಧಾರ ಮಾಡಿದ್ದಾಳೆ.
ಇನ್ನು ಗೌತಮ್, ಭೂಮಿಕಾ ವಿರುದ್ಧ ಸಂಚು ಮಾಡ್ತಿರುವ ಕುತಂತ್ರಿಗಳಿಗೆ ಒಂದಲ್ಲಾ ಒಂದು ಶಾಕ್ ಎದುರಾಗ್ತಿದೆ. ಭಾಗ್ಯಮ್ಮಗೆ ಮಾತು ಬರಲ್ಲ ಅಂದ್ಕೊಂಡಿದ್ದಳು ಶಕುಂತಲಾ. ಇದೀಗ ಭಾಗ್ಯಮ್ಮ ಮುಂದೆ ಮಾತನಾಡಿ ಶಾಕ್ ಕೊಟ್ಟಿದ್ದಾಳೆ. ಶಕುಂತಲಾ ಕೈತಿರುಗಿಸಿ, ಇನ್ನು ನಿನ್ನ ಆಟ ಮುಗಿಯಿತು ಎಂದಿದ್ದಾಳೆ.
ಇದೀಗ ಭೂಮಿಕಾ ಗೌತಮ್‌ನ ಒಂದು ಮಾಡಲು ಎಲ್ಲರು ಪಣತೊಟ್ಟಾಗಿದೆ. ಕುತಂತ್ರಿಗಳಿಗೂ ಕೇಡುಗಾಲ ಶುರುವಾಗಿದೆ. ಹಾಗಾದ್ರೆ ಭೂಮಿಕಾ- ಗೌತಮ್ ಒಂದಾಗ್ತಾರಾ ಅಥವಾ ಇನ್ನೇನೋ ಅನಾಹುತ ಆಗತ್ತಾ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

ನೋಡಿರಿ

