ಮಯಾಂಕ್ & ದೇವದತ್ ಪಡಿಕ್ಕಲ್ ಶತಕ – ಕರ್ನಾಟಕದ ಪರ ಸಿಡಿಲಬ್ಬರದ ಆಟ

ಅಹಮದಾಬಾದ್ನ ರೈಲ್ವೇಸ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಕರ್ನಾಟಕ ತಂಡ ಬೃಹತ್ ಮೊತ್ತ ಪೇರಿಸಿದೆ. ಪುದುಚೇರಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ಒದಗಿಸಿದ್ದರು.
ಆರಂಭದಿಂದಲೇ ಉತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿಯು ಮೊದಲ ವಿಕೆಟ್ಗೆ ಪೇರಿಸಿದ್ದು ಬರೋಬ್ಬರಿ 228 ರನ್ಗಳು. ಇದರ ನಡುವೆ 116 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 113 ರನ್ ಬಾರಿಸಿ ದೇವದತ್ ಪಡಿಕ್ಕಲ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಇನಿಂಗ್ಸ್ ಕಟ್ಟುವ ಕಾಯಕ ಮುಂದುವರೆಸಿದ ಮಯಾಂಕ್ ಅಗರ್ವಾಲ್ 124 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 15 ಫೋರ್ಗಳನ್ನು ಬಾರಿಸಿದರು. ಈ ಮೂಲಕ 132 ರನ್ಗಳನ್ನು ಬಾರಿಸಿ ಮಯಾಂಕ್ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ಒಂದೇ ದಿನ ನಮ್ಮ ಮೆಟ್ರೋದಲ್ಲಿ 8.93 ಲಕ್ಷ ಪ್ರಯಾಣಿಕರ ಸಂಚಾರ! BMRCLಗೆ ಕೋಟಿ ಕೋಟಿ ಆದಾಯ
ಆ ಬಳಿಕ ಬಂದ ಕರುಣ್ ನಾಯರ್ ತಮ್ಮ ಅನುಭವಯನ್ನು ಧಾರೆಯೆದರು. ಈ ಮೂಲಕ 34 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 64 ರನ್ ಬಾರಿಸಿದರು. ಇನ್ನು ಸ್ಮರಣ್ ರವಿಚಂದ್ರನ್ 21 ರನ್ಗಳ ಕೊಡುಗೆ ನೀಡಿದರೆ, ಅಭಿನವ್ ಮನೋಹರ್ 6 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 21 ರನ್ ಬಾರಿಸಿದರು. ಈ ಮೂಲಕ ಕರ್ನಾಟಕ ತಂಡವು 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿದೆ.

ನೋಡಿರಿ

