ಕಿವೀಸ್ ವಿರುದ್ಧದ ಏಕದಿನ ಸರಣಿ ಮುನ್ನ ಗಿಲ್, ಕೆ.ಎಲ್ ಮಹತ್ವದ ನಿರ್ಧಾರ – ರಾಹುಲ್, ಜಡೇಜಾ ಈ ನಿರ್ಧಾರಕ್ಕೆ ಬಂದಿದ್ಯಾಕೆ?

ಕಿವೀಸ್ ವಿರುದ್ಧದ ಏಕದಿನ ಸರಣಿ ಮುನ್ನ ಗಿಲ್, ಕೆ.ಎಲ್ ಮಹತ್ವದ ನಿರ್ಧಾರ – ರಾಹುಲ್, ಜಡೇಜಾ ಈ ನಿರ್ಧಾರಕ್ಕೆ ಬಂದಿದ್ಯಾಕೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಗೆ ದಿನಗಣನೆ ಶುರುವಾಗಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ಆಟಗಾರರಾದ ಶುಭ್​ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:VHTಯಲ್ಲಿ ಗಿಲ್ ಅದೃಷ್ಟ ಪರೀಕ್ಷೆ – ರಾಹುಲ್, ಜಡ್ಡು ಬೆನ್ನು ಬಿದ್ದ BCCI

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಒಡಿಐ ಸರಣಿಗೆ ಮೊದಲು ಮೂವರು ಸ್ಟಾರ್ ಆಟಗಾರರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಶುಭ್ಮನ್ ಗಿಲ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ ಕಿವೀಸ್ ಸರಣಿಗೂ ಮುನ್ನ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ. ರಾಷ್ಟ್ರೀಯ ತಂಡದ ಆಟಗಾರರು ಭಾಗವಹಿಸುತ್ತಿರುವುದರಿಂದ ಈ ಟೂರ್ನಿ  ಹೆಚ್ಚು ಗಮನ ಸೆಳೆಯುತ್ತಿದೆ. ಪಂಜಾಬ್ ತಂಡಕ್ಕೆ ಗಿಲ್ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ಶುಭ್​ಮನ್ ಗಿಲ್ ಅವರು ಭಾರತದ ಟೆಸ್ಟ್ ಮತ್ತು ಒಡಿಐ ತಂಡದ ನಾಯಕರಾಗಿದ್ದಾರೆ. ಅವರು ಪಂಜಾಬ್ ತಂಡಕ್ಕಾಗಿ ಆಡಲಿದ್ದಾರೆ. ಜೈಪುರದಲ್ಲಿ ಜನವರಿ 3ರಂದು ಸಿಕ್ಕಿಂ ವಿರುದ್ಧ ಮತ್ತು ಜನವರಿ 6ರಂದು ಗೋವಾ ವಿರುದ್ಧ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಪಂಜಾಬ್ ತಂಡ ಗ್ರೂಪ್ ಸಿಯಲ್ಲಿ 3 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಸ್ಟಾರ್ ಆಲ್ರೌಂಡರ್​ ರವೀಂದ್ರ ಜಡೇಜಾ ಅವರು ಸೌರಾಷ್ಟ್ರ ತಂಡಕ್ಕಾಗಿ ಆಡಲಿದ್ದಾರೆ. ಅವರು ಕೂಡ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ತಿಳಿಸಿದ್ದಾರೆ. ಆಲೂರ್‌ನಲ್ಲಿ (ಕರ್ನಾಟಕ) ಜನವರಿ 6ರಂದು ಸರ್ವಿಸಸ್ ವಿರುದ್ಧ ಮತ್ತು ಜನವರಿ 8ರಂದು ಗುಜರಾತ್ ವಿರುದ್ಧದ ಎರಡು ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಸೌರಾಷ್ಟ್ರ ತಂಡ 3 ಪಂದ್ಯಗಳಲ್ಲಿ 1 ಗೆಲುವು ಪಡೆದು 8 ತಂಡಗಳ ಗ್ರೂಪ್‌ನಲ್ಲಿ 6ನೇ ಸ್ಥಾನದಲ್ಲಿದೆ.

ಕೆಎಲ್ ರಾಹುಲ್ ಅವರು ಕರ್ನಾಟಕ ತಂಡಕ್ಕಾಗಿ ಆಡುವ ಸಾಧ್ಯತೆ ಇದೆ. ಅಹಮದಾಬಾದ್‌ನಲ್ಲಿ ಜನವರಿ 3ರಂದು ತ್ರಿಪುರಾ ವಿರುದ್ಧ ಮತ್ತು ಜನವರಿ 6ರಂದು ರಾಜಸ್ಥಾನ ವಿರುದ್ಧ ಪಂದ್ಯಗಳಲ್ಲಿ ಭಾಗವಹಿಸಬಹುದು. ಕರ್ನಾಟಕ ತಂಡ ಗ್ರೂಪ್ ಎಯಲ್ಲಿ 4 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 2ನೇ ಸ್ಥಾನದಲ್ಲಿದೆ.

Sulekha