ಅಬ್ಬಬ್ಬಾ.. ಬಾಲಕನ ಹೊಟ್ಟೆಯಲ್ಲಿತ್ತು ಸ್ಪ್ಯಾನರ್‌, 7 ಬ್ರಶ್‌ಗಳು!

ಅಬ್ಬಬ್ಬಾ.. ಬಾಲಕನ ಹೊಟ್ಟೆಯಲ್ಲಿತ್ತು ಸ್ಪ್ಯಾನರ್‌, 7 ಬ್ರಶ್‌ಗಳು!

ರಾಜಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋಗಿದ್ದ ಬಾಲಕನನ್ನ ಪರೀಕ್ಷಿಸಿದ ವೈದ್ಯರು ಶಾಕ್‌ ಆಗಿದ್ದಾರೆ. ಸ್ಕ್ಯಾನಿಂಗ್‌ ವೇಳೆ ಬಾಲಕ ಹೊಟ್ಟೆಯಲ್ಲಿ ಚಿತ್ರ ವಿಚಿತ್ರ ವಸ್ತುಗಳ ಪತ್ತೆಯಾಗಿದೆ.

ಇದನ್ನೂ ಓದಿ: ಟಾಸ್ಕ್‌ ಆಡಿ ಅಂದ್ರೆ ಫೈಟ್‌ ಮಾಡಿಕೊಂಡ ಸ್ಪಂದನಾ, ರಾಶಿಕಾ! – ಬಿಗ್‌ಬಾಸ್‌ ರೂಲ್ಸ್‌ನ ಅಪಾರ್ಥ ಮಾಡಿಕೊಂಡ್ರಾ?

ರಾಜಸ್ಥಾನ ಮೂಲದ ಬಾಲಕನೊಬ್ಬ ಕೆಲ ದಿನಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಆತನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವೈದ್ಯರು ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಲು ಸೂಚಿಸಿದ್ದಾರೆ. ಬಾಲಕನ ಸ್ಕ್ಯಾನಿಂಗ್‌ ರಿಪೋರ್ಟ್‌ ನೋಡಿ ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಬಾಲಕನ ಹೊಟ್ಟೆಯಲ್ಲಿ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಶ್ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿದೆ.

ಕೂಡಲೇ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆತನ ಹೊಟ್ಟೆಯಲ್ಲಿದ್ದ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಶ್‌ಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಯುವಕನ ಹೊಟ್ಟೆಯಿಂದ 2 ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು 7 ಹಲ್ಲುಜ್ಜುವ ಬ್ರಶ್‌ಗಳನ್ನು ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಆರೋಗ್ಯವಾಗಿದ್ದಾನೆ.  ಆ ಯುವಕ ಮಾನಸಿಕ ಅಸ್ವಸ್ಥನಾಗಿದ್ದರಿಂದ ಇಂತಹ ವಸ್ತುಗಳನ್ನು ನುಂಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಆತ ಇಂತಹ ಅಪಾಯಕಾರಿ ವಸ್ತುಗಳನ್ನು ನುಂಗಲು ಖಚಿತ ಕಾರಣ ಇನ್ನೂ ಬಯಲಾಗಿಲ್ಲ.

Shwetha M