ಶ್ರೇಯಸ್ ಹಿಂಡಿ ಹಿಪ್ಪೆ ಮಾಡಿದ ಗಾಯ – 6 ಕೆಜಿ ತೂಕ ಇಳಿಕೆ.. ODIಗಿಲ್ಲ ಅಯ್ಯರ್  
ಆಡಿದ್ರೆ ಅಪಾಯ ಎಂದಿದ್ದೇಕೆ ವೈದ್ಯರು?

ಶ್ರೇಯಸ್ ಹಿಂಡಿ ಹಿಪ್ಪೆ ಮಾಡಿದ ಗಾಯ – 6 ಕೆಜಿ ತೂಕ ಇಳಿಕೆ.. ODIಗಿಲ್ಲ ಅಯ್ಯರ್  ಆಡಿದ್ರೆ ಅಪಾಯ ಎಂದಿದ್ದೇಕೆ ವೈದ್ಯರು?

ಮೈದಾನಗಳಲ್ಲಿ ಕ್ರಿಕೆಟ್ ಆಡುವಾಗ ಅಥವಾ ನೆಟ್ಸ್​ನಲ್ಲಿ ಪ್ರಾಕ್ಟೀಸ್ ಮಾಡುವಾಗ ಸಾಕಷ್ಟು ಆಟಗಾರರು ಇಂಜುರಿಗೆ ಒಳಗಾಗ್ತಾರೆ. ಌಂಡ್ ಪಂದ್ಯದ ಅರ್ಧದಲ್ಲೇ ಬಿಟ್ಟು ಹೊರಬರ್ತಾರೆ. ಹೀಗೆ ಬಂದವ್ರು ಕೆಲ ವಾರ, ಅಥವಾ ತಿಂಗಳಲ್ಲೇ ರಿಕವರ್ ಆಗಿ ಕಂ ಬ್ಯಾಕ್ ಮಾಡ್ತಾರೆ. ಆದ್ರೆ ಶ್ರೇಯಸ್ ಅಯ್ಯರ್ ಸಿಚುಯೇಷನ್ ಮಾತ್ರ ಬೇರೆಯದ್ದೇ ಇದೆ. ಮೈದಾನದಿಂದ ಹೊರಗುಳಿದು ಮೂರು ತಿಂಗಳೇ ಕಳೆದಿದ್ರೂ ಮತ್ತೆ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಡೋದು ಕಷ್ಟವಾಗಿದೆ. ಌಂಡ್ ಈ ಸಲ ವೈದ್ಯರ ಅಪಾಯದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ : RCBಯಲ್ಲಿ ವೆಂಕಿಗೆ ₹7 ಕೋಟಿ ವೇಸ್ಟ್ – ನಂ.3ನಲ್ಲಿ ಪಡಿಕ್ಕಲ್ ಆಡೋದೇ ಬೆಸ್ಟ್

ಶ್ರೇಯಸ್ ಅಯ್ಯರ್.. ಟೀಂ ಇಂಡಿಯಾದ ಒನ್ ಆಫ್ ದಿ ಬೆಸ್ಟ್ ಪ್ಲೇಯರ್. ಏಕದಿನ ಮಾದರಿಯಲ್ಲಿ ಉಪನಾಯಕ ಮತ್ತು ಪ್ರಮುಖ ಬ್ಯಾಟರ್ ಆಗಿರೋ ಶ್ರೇಯಸ್ ಈ ಬಾರಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೂಲಕ ಕಂ ಬ್ಯಾಕ್ ಮಾಡ್ತಾರೆ ಅನ್ನೋದು ಎಲ್ಲರ ನಿರೀಕ್ಷೆ ಆಗಿತ್ತು. ಆದ್ರೆ ಈಗ ತಂಡಕ್ಕೆ ಆಯ್ಕೆಯಾಗೋದೇ ಡೌಟಿದೆ. ಆಸೀಸ್​ ಸರಣಿ ವೇಳೆ ಆದ ಇಂಜುರಿಯೇ ದೊಡ್ಡ ಹೊಡೆತ ನೀಡ್ತಿದೆ. ಇದೇ ಕಾರಣಕ್ಕೆ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಿಂದ ಶ್ರೇಯಸ್​​ ಅಯ್ಯರ್​ಗೆ ಆಡಲು ಅನುಮತಿ ಸಿಕ್ಕಿಲ್ಲ.

ಬ್ಯಾಟಿಂಗ್ ಓಕೆ.. ಮೈದಾನದಲ್ಲಿ ಹೆಚ್ಚು ಟೈಂ ಫೀಲ್ಡಿಂಗ್ ಕಷ್ಟ!

ಕಳೆದ ಅಕ್ಟೋಬರ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಕೊನೇ ಮ್ಯಾಚಲ್ಲಿ ಶ್ರೇಯಸ್ ಇಂಜುರಿಗೊಳಗಾಗಿದ್ರು. ಡೈವಿಂಗ್ ಕ್ಯಾಚ್ ಹಿಡಿಯಲು ಯತ್ನಿಸುವಾಗ ಶ್ರೇಯಸ್ ಗಂಭೀರವಾಗಿ ಗಾಯಗೊಂಡಿದ್ರು. ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ ಎಸೆತದಲ್ಲಿ ಡೈವಿಂಗ್ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಶ್ರೇಯಸ್‌ಗೆ ಗಂಭೀರ ಗಾಯವಾಯಿತು. ಸಿಡ್ನಿಯ ಆಸ್ಪತ್ರೆಯಲ್ಲಿ ದಾಖಲಾಗಿ ಸ್ಕ್ಯಾನ್‌ ಮಾಡಿದ ನಂತರ ಆಂತರಿಕ ರಕ್ತಸ್ರಾವ ಕಂಡುಬಂದಿತ್ತು. ತಕ್ಷಣವೇ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಚಿಕಿತ್ಸೆ ಪಡೆದಿದ್ದ ಶ್ರೇಯಸ್ ಆ ನಂತ್ರ ಭಾರತಕ್ಕೆ ವಾಪಸ್ ಆಗಿದ್ರು. ಆ ಬಳಿಕ ಬಿಸಿಸಿಐನ ಸೆಂಟ್ರ್ ಆಫ್ ಎಕ್ಸ್​ಲೆನ್ಸ್​ನಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ರು. ಆದ್ರೆ ಇನ್ನೂ ಕಂಪ್ಲೀಟ್ ಆಗಿ ರಿಕವರ್ ಆಗಿಲ್ಲ. ಌಂಡ್ ಗಂಭೀರ ಗಾಯದ ಕಾರಣಕ್ಕೆ 6ಕೆಜಿ ತೂಕ ಕಡಿಮೆಯಾಗಿದೆ. ಹೀಗಾಗಿ ಮತ್ತೆ ಪಂದ್ಯಗಳನ್ನ ಆಡೋಕೆ ವೈದ್ಯರಿಂದ ಒಪ್ಪಿಗೆ ಸಿಕ್ಕಿಲ್ಲ. ಶ್ರೇಯಸ್ ಬ್ಯಾಟಿಂಗ್ ಮಾಡಬಹುದು, ಆದರೆ ಮೈದಾನದಲ್ಲಿ ಹೆಚ್ಚು ಹೊತ್ತು ಇರಲು ಇನ್ನೂ ಶಕ್ತಿಯನ್ನು ಪಡೆದಿಲ್ಲ ಎಂದಿದ್ದಾರೆ. ದಿಢೀರ್ ಅಂತಾ 6 ಕೆಜಿ ವೇಯ್ಟ್ ಲಾಸ್ ಆಗಿರೋದ್ರಿಂದ ವೀಕ್​ನೆಸ್ ಇದ್ದು 50 ಓವರ್​ಗಳವರೆಗೆ ಫೀಲ್ಡಿಂಗ್ ಕಷ್ಟ ಆಗಬಹುದು ಎಂದಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನೂ ಆಡಲ್ವಾ?

ಇನ್ನು ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಜನವರಿ 3 ಮತ್ತು 6 ರಂದು ಮುಂಬೈ ಪರ ಎರಡು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನು ಆಡ್ತಾರೆ. ಆ ನಂತ್ರ ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ವಡೋದರಾದಲ್ಲಿ ಭಾರತೀಯ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ ಈಗಿರೋ ಸಿಚುಯೇಷನ್ ನೋಡಿದ್ರೆ ಶ್ರೇಯಸ್ ಸದ್ಯಕ್ಕೆ ಆಡೋದು ಡೌಟಿದೆ. ದ್ಯ ಶ್ರೇಯಸ್ ಅಯ್ಯರ್ ಈ ವಾರ ಸ್ಕಿಲ್ ಟ್ರೈನಿಂಗ್ ಪ್ರಾರಂಭಿಸಿದ್ದಾರೆ.. ಆದರೆ, ಅವರನ್ನು ಮತ್ತೆ ಮೈದಾನಕ್ಕೆ ಇಳಿಸುವ ಮೊದಲು 50 ಓವರ್‌ಗಳ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಅವರ ಸಾಮರ್ಥ್ಯವನ್ನು ನಿರ್ಧಾರ ಮಾಡಬೇಕಾಗುತ್ತೆ. ಹೇಗೆ ಪುಲ್ ಮಾಡುತ್ತಾರೆ ಎಂಬುದರ ಆಧಾರದ ಮೇಲೆ, ವಿಜಯ್ ಹಜಾರೆಯಲ್ಲಿ ಆಡಿಸ್ಬೇಕಾ ಬೇಡ್ವಾ ಅನ್ನೋದನ್ನ ನಿರ್ಧಾರ ಮಾಡಲಾಗುತ್ತೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಇಲ್ಲಿ ಶ್ರೇಯಸ್​ಗೆ ಬ್ಯಾಟಿಂಗ್​ ಮಾಡೋದು ಕಷ್ಟವಾಗ್ತಿಲ್ಲ. ಌಂಡ್ ನೆಟ್ಸ್‌ನಲ್ಲಿ ಕಂಫರ್ಟಬಲ್ ಆಗಿ ಕಾಣ್ತಿದ್ದಾರೆ. ಆದ್ರೆ ಗಾಯದ ನಂತರದ ಹೆವಿ ವೇಯ್ಡ್ ಲಾಸ್, ಮಸಲ್ ಮಾಸ್ ನಿಂದ ಕಂ ಬ್ಯಾಕ್ ಕಷ್ಟವಾಗ್ತಿದೆ.  ಹೀಗಾಗಿ ಡಾಕ್ಟರ್ಸ್ ಕೂಡ ರಿಸ್ಕ್ ತಗೊಳ್ಳೋಕೆ ರೆಡಿ ಇಲ್ಲ. ಌಂಡ್ ಕ್ಲಿಯರೆನ್ಸ್ ಕೂಡ ಕೊಡ್ತಿಲ್ಲ ಎನ್ನಲಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಶ್ರೇಯಸ್‌ಗೆ ಆಟಕ್ಕೆ ಮರಳುವ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ. ಈ ಮೂಲಕ ಶ್ರೇಯಸ್ ಅವರ ರೀ ಎಂಟ್ರಿಯನ್ನ ಇನ್ನೊಂದು ವಾರ ಪೋಸ್ಟ್ ಪೋನ್ ಮಾಡ್ತಾರೆ. ಜನವರಿ 2 ಅಥವಾ ಮೂರರಂದು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನ ಅನೌನ್ಸ್ ಮಾಡಲಾಗುತ್ತೆ. ಬಹುಶಃ ಶ್ರೇಯಸ್ ಅಯ್ಯರ್ ತಂಡದಲ್ಲಿ ಅವಕಾಶ ಪಡೆಯೋದು ಅನುಮಾನವೇ ಸರಿ.

Shantha Kumari