ಜಾಲಿ ಮೂಡ್ನಲ್ಲಿ ಡಿವೈನ್ ಸ್ಟಾರ್! – ಫ್ಯಾಮಿಲಿ ಜೊತೆ ಗೋವಾದಲ್ಲಿ ಎಂಜಾಯ್ ಮಾಡಿದ ರಿಷಬ್ ಶೆಟ್ಟಿ!

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಕ್ಸಸ್ ಖುಷಿಯಲ್ಲಿದ್ದಾರೆ. ಟೆಂಪಲ್ ರನ್ ಮುಗಿಸಿದ ಬಳಿಕ ರಿಷಬ್ ಪ್ಯಾಮಿಲಿ ಜೊತೆ ಜಾಲಿ ಮೂಡ್ನಲ್ಲಿದ್ದಾರೆ. ಇದೀಗ ಡಿವೈನ್ ಸ್ಟಾರ್ ಫ್ಯಾಮಿಲಿ ಜೊತೆ ಗೋವಾಗೆ ಹಾರಿದ್ದಾರೆ.
ಇದನ್ನೂ ಓದಿ: ಭಾಗ್ಯಗೆ ಪ್ರಪೋಸ್ ಮಾಡಿದ ಆದೀಶ್ವರ್.. ಕುಸುಮಾ ಸೊಸೆ ಕಾಲಿಗೆ ಬಿದ್ದ ತಾಂಡವ್!
ಕಾಂತಾರ: ಚಾಪ್ಟರ್ 1 ಸಿನಿಮಾ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಇಷ್ಟು ದಿನ ದೇಶದ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ರಿಷಬ್ ಫ್ಯಾಮಿಲಿ ಜೊತೆ ಗೋವಾಗೆ ಹಾರಿದ್ದಾರೆ.
ರಿಷಬ್ ಶೆಟ್ಟಿ ಅವರು ಕುಟುಂಬಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಈಗ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಇದೀಗ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳ ಜೊತೆ ಖಾಸಗಿ ಯಾಚ್ನಲ್ಲಿ ಗೋವಾ ಸಮುದ್ರ ವಿಹಾರ ಮಾಡಿದ್ದಾರೆ. ಈ ವೇಳೆ ಖುಷಿ ಖುಷಿಯಿಂದ ಫ್ಯಾಮಿಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ಗೋವಾಗೆ ತೆರಳಲು ಇಷ್ಟಪಡುತ್ತಾರೆ. ಅಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸುತ್ತಾರೆ. ಸೆಲೆಬ್ರಿಟಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ರಿಷಬ್ ಅವರು ವರ್ಷಾಂತ್ಯದ ಸಂದರ್ಭದಲ್ಲಿ ಗೋವಾದಲ್ಲೇ ಇದ್ದರು.

ನೋಡಿರಿ

