ನಾನ್ ಕೊಟ್ಟ ಕಂಪ್ಲೇಟ್ಗೆ ಬೆಲೆ ಇಲ್ವಾ? – ಪೊಲೀಸರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕ್ಲಾಸ್

ದರ್ಶನ್ ಪತ್ನಿ ವಿಜಯಲಕ್ಷ್ಮೀ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು. ಇಷ್ಟು ದಿನಗಳಾದರೂ ಪ್ರಕರಣದಲ್ಲಿ ಯಾರ ಬಂಧನವೂ ಆಗಿಲ್ಲದೇ ಇರುವುದರ ಹಿನ್ನೆಲೆಯಲ್ಲಿ ಕಮಿಷನರ್ ಕಚೇರಿಗೆ ವಿಜಯಲಕ್ಷ್ಮಿ ಆಗಮಿಸಿ, ನಾನು ಕೊಟ್ಟ ಕಂಪ್ಲೇಟ್ ಕಥೆ ಏನಾಯ್ತು ಅಂತ ವಿಚಾರಿಸಿದ್ದಾರೆ.
ಇದನ್ನೂ ಓದಿ: ಆನೆಗಳ ಕಾಟದಿಂದ ಮುಕ್ತಿ ಕೊಡಿಸಿ – ಸುಳ್ಳ, ಪುತ್ತೂರು ಭಾಗದ ರೈತರಿಂದ ಸರ್ಕಾರಕ್ಕೆ ಮನವಿ
ಕಮೀಷನರ್ ಭೇಟಿ ನಂತ್ರ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಆಕ್ರೇೋಶ ಹೊರ ಹಾಕಿದ್ದಾರೆ. “ನಮ್ಮ ದೇಶದ ಕಾನೂನು ಮತ್ತು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗಿನ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಆಶ್ಚರ್ಯವೆಂದರೆ, ನಾನು ನೀಡಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ನೀಡಿದ ದೂರಿಗೆ ಕೇವಲ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ನನ್ನ ದೂರು ಅಷ್ಟು ಮುಖ್ಯವಾದುದಲ್ಲವೇ ಅಥವಾ ಅದಕ್ಕೆ ಮಾನ್ಯತೆ ಇಲ್ಲವೇ ಎಂದು ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತಿದೆ” “ನನ್ನ ವಕೀಲರು ನಿರಂತರವಾಗಿ ಈ ಬಗ್ಗೆ ಫಾಲೋಅಪ್ ಮಾಡುತ್ತಲೇ ಇದ್ರೂ ಸಹ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ದೂರನ್ನು ಕನಿಷ್ಠ ಪಕ್ಷ ಗಮನಿಸಿ ಎಂದು ನೆನಪಿಸಲು ಇಂದು ನಾನೇ ಖುದ್ದಾಗಿ ಅಲ್ಲಿಗೆ ಹೋಗಬೇಕಾಯಿತು. ಈ ವಿಳಂಬದ ಹಿಂದೆ ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಇಲ್ಲ ಎಂದು ನಾನು ನಂಬಿದ್ದೇನೆ. ನ್ಯಾಯವು ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು” ಎಂದು ವಿಜಯಲಕ್ಷ್ಮೀ ಆಕ್ರೋಶ ಹೊರ ಹಾಕಿದ್ದಾರೆ.

ನೋಡಿರಿ

