ಯುವಕರಿಗೆ ರನ್ ವೇ ರೆಡಿಯಾಗಿದೆ – ರಾಷ್ಟ್ರೀಯ ಯುವಜನೋತ್ಸವದಲ್ಲಿ ಮೋದಿ ಕರೆ

ಯುವಕರಿಗೆ ರನ್ ವೇ ರೆಡಿಯಾಗಿದೆ –  ರಾಷ್ಟ್ರೀಯ ಯುವಜನೋತ್ಸವದಲ್ಲಿ ಮೋದಿ ಕರೆ

ಹುಬ್ಬಳ್ಳಿ:  ಸ್ವಾಮಿ ವಿವೇಕಾನಂದರ ಜನ್ಮದಿನ ಭಾಗವಾಗಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಧಾರವಾಡ ಭಾಗದ ಪ್ರಮುಖ ಮಠಗಳಿಗೆ ನಮನ ಸಲ್ಲಿಸಿ, ಕರ್ನಾಟಕದ ಮಹಾಪುರುಷರನ್ನು ನೆನಪು ಮಾಡಿಕೊಂಡರು. ಇದೇ ವೇಳೆ ಇತ್ತೀಚೆಗೆ ನಿಧನರಾದ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ. ನಂತರ ಯುವಕರನ್ನು ಹುರಿದುಂಬಿಸುವ ಮಾತಾಡಿದರು.  ಸದ್ಯ ಜಗತ್ತಿನ ಐದನೇ ಅರ್ಥವ್ಯವಸ್ಥೆಯಲ್ಲಿ ನಮ್ಮ ಭಾರತವಿದೆ. ಈಗ ನಮ್ಮ ಗುರಿ ಟಾಪ್ 3ಗೆ ಕೊಂಡೊಯ್ಯುವುದು ಎಂದರು.. ಇದಕ್ಕಾಗಿ ದೇಶದಲ್ಲಿ ರನ್ ವೇ ರೆಡಿಯಿದೆ. ನೀವು ಟೇಕಾಫ್ ಆಗಲು ಮಾತ್ರ ಬಾಕಿ ಎಂದು ಯುವಕರಿಗೆ ಕರೆ ನೀಡಿದರು.

ಇದನ್ನೂ ಓದಿ:  ಹುಬ್ಬಳ್ಳಿಯಲ್ಲಿ ಯುವಜನೋತ್ಸವ – ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದ ಕಾಂಗ್ರೆಸ್

ಅಲ್ಲದೆ ಕಳೆದ  8 ವರ್ಷಗಳಲ್ಲಿ ಪ್ರಬಲ ಅಡಿಪಾಯ ಹಾಕಿದ್ದೇವೆ.  ತಾವು ಅಧಿಕಾರಕ್ಕೆ ಬಂದ ಮೇಲೆ ಭಾರತ ಸರ್ಕಾರ ಯುವಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ ಈಗ ದೊಡ್ಡ ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ ಎಂದು ಕರೆ ನೀಡಿದ್ರು.

ಇದಕ್ಕೂ ಮೊದಲು ಪ್ರಧಾನಿ ಮೋದಿ ಏರ್‌ಪೋರ್ಟ್‌ನಿಂದ ರೈಲ್ವೆ ಮೈದಾನಕ್ಕೆ ತಲುಪುವವರೆಗೆ 9 ಕಿಲೋ ಮೀಟರ್‌ ರೋಡ್‌ ಶೋ ನಡೆಯಿತು. ಮೋದಿ ಕಾರಿನ ಮೇಲೆ ಹೂಮಳೆಗೈಯ್ಯಲಾಗಿತ್ತು. ಇದರ ಮಧ್ಯೆ ಬಾಲಕನೊಬ್ಬ ಬಿಗಿ ಭದ್ರತೆಯನ್ನೂ ಲೆಕ್ಕಿಸದೆ ಮೋದಿಗೆ ಹೂವಿನ ಮಾಲೆ ಹಾಕಲು ಬಂದಿದ್ದ. ಭದ್ರಾತಾ ಸಿಬ್ಬಂದಿ ಬಾಲಕನನ್ನು ತಡೆದರು.

suddiyaana