ಟಾಸ್ಕ್‌ನಲ್ಲಿ ಬರೀ ಮೋಸ.. ಫಸ್ಟ್ ಟೈಮ್ ಸ್ಪಂದನಾ ಗೆದ್ರೂ ಬೆಲೆ ಇಲ್ಲ! – ಕಾವ್ಯಗಾಗಿ ಗಿಲ್ಲಿ ಚೀಪ್ ಗಿಮಿಕ್!

ಬಿಗ್‌ಬಾಸ್‌ಸೀಸನ್ 12ರ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ದೊಡ್ಮನೆಯಲ್ಲಿ ಎಲ್ಲರೂ ಟ್ರೋಫಿ ಗೆಲ್ಲೋದ್ರ ಕಡೆ ಗಮನ ಹರಿಸಿದ್ದಾರೆ. ಆದ್ರೆ ಗಿಲ್ಲಿ ಮಾತ್ರ ಇನ್ನೂ ಆಟವನ್ನ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣ್ತಿಲ್ಲ. ಕಾವ್ಯಳನ್ನ ಸೇವ್ ಮಾಡಲು ಗಿಲ್ಲಿನಟ ಚೀಪ್ ಗಿಮಿಕ್ ಮಾಡ್ತಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಒಂದೇ ಒಂದು ಮಗು ಇದ್ರೂ ಶಾಲೆ ಮುಚ್ಚಲ್ಲ! – ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬಿಗ್‌ಬಾಸ್ ಮನೆಯಲ್ಲಿ ಕಾವ್ಯಾಳನ್ನು ಉಳಿಸಿಕೊಳ್ಳೋದಕ್ಕೆ ಗಿಲ್ಲಿ ನಟ ಭಾರೀ ಹೈಡ್ರಾಮಾ ಮಾಡ್ತಿದ್ದಾರೆ. ಕಾವ್ಯಳನ್ನ ಫಿನಾಲೆಗೆ ಕರೆದುಕೊಂಡು ಹೋಗ್ಬೇಕು ಅಂತ ಗಿಲ್ಲಿನಟ ತನ್ನ ಆಟವನ್ನೇ ಮರೆತಿದ್ದಾರೆ. ಉಸ್ತುವಾರಿಯಲ್ಲಿ ಬರೀ ಮೋಸ ಮಾಡ್ತಾ ಬಂದಿದ್ದಾರೆ. ಗಿಲ್ಲಿ ಹೊಸ ವರಸೆ ನೋಡಿದ ವೀಕ್ಷಕರು, ಕಾವ್ಯಾಳಿಗೆ ಇಷ್ಟೊಂದು ಬಕೆಟ್ ಹಿಡಿಯುವುದು ಬೇಡವಾಗಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಒಂದನ್ನು ಆಟವಾಡಿಸಲಾಗುತ್ತಿದೆ. ಅದರಲ್ಲಿ ಶವರ್ ಮೂಲಕ ನೀರನ್ನು ಬಿಟ್ಟು, ಸ್ಪರ್ಧಿಗಳುಗೆ ತಲೆ ಮೇಲೆ ಒಂದು ಸ್ಪಂಜ್ ಅನ್ನು ನೀಡಿ ಆ ಮೃದುವಾದ ಸ್ಪಂಜ್‌ನಲ್ಲಿ ನೀರು ಶೇಖರಣೆ ಮಾಡಿ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ನೀರು ತುಂಬಿಸಬೇಕು. ಈ ಟಾಸ್ಕ್‌ನಲ್ಲಿ ಮೊದಲು ಮಹಿಳಾ ಸ್ಪರ್ಧಿಗಳನ್ನು ಕಣಕ್ಕಿಳಿಸಲಾಗುತ್ತದೆ. ಅದರಲ್ಲಿ ಅಶ್ವಿನಿ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಗಿಲ್ಲಿ ನಟ ವಿಶೇಷ ಅಧಿಕಾರ ಬಳಸಿ ಹೊರಗಿಟ್ಟಿದ್ದಾನೆ. ಹೀಗಾಗಿ, ಸ್ಪಂದನಾ, ರಾಶಿಕಾ ಮತ್ತು ಕಾವ್ಯಾ ಅವರ ನಡುವೆ ಈ ಟಾಸ್ಕ್ ಅನ್ನು ನಡೆಸಲಾಗಿದೆ. ಈ ಟಾಸ್ಕ್‌ಗೆ ಉಸ್ತುವಾರಿ ಮಾಡಲು ಕ್ಯಾಪ್ಟನ್ ಗಿಲ್ಲಿ ಮತ್ತು ಅಶ್ವಿನಿ ಅವರನ್ನು ನಿಯೋಜನೆ ಮಾಡಲಾಗಿರುತ್ತದೆ. ಟಾಸ್ಕ್‌ನಲ್ಲಿ ಮೂವರೂ ಸ್ಪರ್ಧಿಗಳು ನೀರು ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಅದಲ್ಲಿ ರಾಶಿಕಾ ಅವರು ತುಂಬಾ ಆಕ್ಟೀವ್ ಆಗಿ ಆಟವಾಡುತ್ತಾ ಅರ್ಧ ಬಕೆಟ್ ನೀರನ್ನು ಸಂಗ್ರಹ ಮಾಡಿದ್ದಾರೆ. ಉಳಿದಂತೆ ಕಾವ್ಯಾ ಮತ್ತು ಸ್ಪಂದನಾ ಇಬ್ಬರೂ ಕಾಲು ಭಾಗಕ್ಕಿಂತ ಹೆಚ್ಚು ನೀರನ್ನು ಸಂಗ್ರಹ ಮಾಡಿರುತ್ತಾರೆ.
ಇನ್ನು ಕಾವ್ಯಾ ಮತ್ತು ಸ್ಪಂದನಾ ಇಬ್ಬರ ಪೈಕಿ ಸ್ಪಂದನಾ ಕಾವ್ಯಾಳಿಗಿಂತ ಸ್ವಲ್ಪ ಹೆಚ್ಚಾಗಿ ನೀರನ್ನು ಸಂಗ್ರಹಿಸಿರುತ್ತಾರೆ. ಇನ್ನು ಯಾರೇ ಉಸ್ತುವಾರಿಗಳಾದರೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚಿನ ನೀರಿದೆ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ, ಗಿಲ್ಲಿ ನಟ ಮಾತ್ರ ಒಪ್ಪಿಕೊಂಡಿಲ್ಲ. ಕಾವ್ಯಾಳನ್ನು ಹೇಗಾದರೂ ಮಾಡಿ ಮುಂದಿನ ಟಾಸ್ಕ್‌ಗೆ ಕಳಿಸಬೇಕು ಎಂದು ಬಕೆಟ್‌ನ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆಂದು ಎರಡೂ ಬಕೆಟ್‌ಗಳನ್ನು ಅಕ್ಕಪಕ್ಕದಲ್ಲಿಟ್ಟು ತಾಳೆ ನೋಡುತ್ತಾರೆ. ಬಕೆಟ್ ಒಳಗಿನ ನೀರನ್ನು ನೊಡಲು ಕೆಳಗೆ ಮಲಗಿಕೊಂಡು ಫುಲ್ ಫೋಕಸ್ ಆಗಿ ನೋಡಿದ್ದಾರೆ. ಆಗ ಎಲ್ಲ ಸ್ಪರ್ಧಿಗಳೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚಿನ ನೀರಿದೆ ಎಂದು ಹೇಳುತ್ತಾರೆ. ಮುಂದುವರೆದು ರಾಶಿಕಾ ಅವರು ಮಾಳು ಅವರ ಚಿಕ್ಕ ಮಕ್ಕಳು ಬಂದಿದ್ರಲ್ಲಾ ಅವರನ್ನು ಕೇಳಿದ್ದರೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚು ನೀರಿ ಇರುವುದಾಗ ಹೇಳುತ್ತಿದ್ದರು ಎಂದು ಹೇಳುತ್ತಾರೆ. ಆದರೆ, ಮನೆಯ ಎಲ್ಲ ಸದಸ್ಯರ ಮಾತನ್ನೂ ಹಾಗೂ ಸಹ ಉಸ್ತುವಾರಿ ಅಶ್ವಿನಿ ಅವರು ಸ್ಪಂದನಾ ಬಕೆಟ್‌ನಲ್ಲಿ ನೀರು ಹೆಚ್ಚಿದೆ ಎಂದು ಹೇಳಿದರೂ ಅದಕ್ಕೊಪ್ಪದ ಗಿಲ್ಲಿ ನಟ, ಕಾವ್ಯಾಳ ಬಕೆಟ್‌ನಲ್ಲಿ ಹೆಚ್ಚು ನೀರಿದೆ ಎಂದು ವಾದ ಮಾಡುತ್ತಾರೆ. ಬಿಗ್ ಬಾಸ್‌ಗೂ ಕೂಡ ರಾಶಿಕಾ ಮತ್ತು ಕಾವ್ಯಾಳ ಬಕೆಟ್‌ನಲ್ಲಿ ಹೆಚ್ಚಿನ ನೀರು ಇದ್ದು, ಸ್ಪಂದನಾ ಟಾಸ್ಕ್ ಸೋತಿದ್ದಾಳೆ ಎಂಬುದನ್ನು ಹೇಳುತ್ತಾರೆ. ಇದೀಗ ಗಿಲ್ಲಿ ಉಸ್ತುವಾರಿ ನೀಡಿ ವೀಕ್ಷಕರು ಬೇಸರ ಹೊರ ಹಾಕಿದ್ದಾರೆ.
ಇವನು ಕಾವ್ಯಾಳಿಗೆ ತುಂಬಾ ದೊಡ್ಡ ಬಕೆಟ್ ಹಿಡಿಯುತ್ತಿದ್ದಾನೆ. ನಮಗೆ ಕಾಣ್ತಾ ಇದೆ, ಕಾವ್ಯ ಬಕೆಟ್‌ನಲ್ಲಿ ಕಮ್ಮಿ ಇದೆ ಅಂಥ, ಆದರೆ ಗಿಲ್ಲಿ ಜೊಲ್ಲು ಸುರಿಸಿ ಅದನ್ನ ಜಾಸ್ತಿ ಮಾಡೋಕೆ ನೋಡ್ತಾ ಇದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂತ ಚೀಪ್ ಗಿಮಿಕ್ ಬೇಕಿತ್ತಾ? ಗಿಲ್ಲಿಯನ್ನ ನಾವು ಗೆಲ್ಲಿಸೋಕೆ ವೋಟ್ ಹಾಕಿದ್ರೆ, ಗಿಲ್ಲಿ ಮಾತ್ರ ಕಾವ್ಯಳನ್ನ ಗೆಲ್ಲಿಸೋ ಪ್ರಯತ್ನ ಮಾಡ್ತಿದ್ದಾರೆ ಎಂದು ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

