ಕನ್ನಡ ಚಿತ್ರದ ಕೈ ಹಿಡಿದಿಲ್ವಾ ಡಿಸೆಂಬರ್? – ಮಾರ್ಕ್ Vs 45 ರೇಸ್ ಗೆದ್ದಿದ್ಯಾರು?
ಕಲೆಕ್ಷನ್ನಲ್ಲಿ ಯಾರ ಕೈ ಮೇಲೆ?

ಡಿಸೆಂಬರ್ ಅಂದ್ರೆ ಸ್ಯಾಂಡಲ್ವುಡ್ಗೆ ಲಕ್ಕಿ. ಯಾಕಂದ್ರೆ ಡಿಸೆಂಬರ್ನಲ್ಲಿ ತೆರೆಗೆ ಬರುವ ಸಿನಿಮ ಸೂಪರ್ ಹಿಟ್ ಆಗುತ್ತೆ. ಈ ಹಿಂದೆ ಡಿಸೆಂಬರ್ ತೆರೆಕಂಡ ಮುಂಗಾರು ಮಳೆ, ಕಿರಿಕ್ ಪಾರ್ಟಿ, ಕಾಟೇರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದಿದೆ. ಡಿಸೆಂಬರ್ನಲ್ಲಿ ಸಿನಿಮಾ ತರೆ ಕಾಣುವುದ್ದಕ್ಕೆ ಕ್ರಿಸ್ಮಸ್ ರಜೆ ಕಾರಣ.. ಅದ್ದಕ್ಕಾಗಿಯೇ ಈ ಸಲ 3 ಚಿತ್ರಕ್ಕೆ ನೂಕು ನುಗ್ಗಲಿನ ವಾತಾವರಣ ಸೃಷ್ಟಿಯಾಗಿತ್ತು. ಮಾರ್ಕ್, 45 ಹಾಗೂ ಈ ಎರಡು ಸಿನಿಮಾಕ್ಕೂ ಮುಂಚೆ ರಿಲೀಸ್ ಆಗಿರೋ ಡೆವಿಲ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಗೋಲ್ಮಾಲ್, ವಲಸಿಗರಿಗೆ ಮನೆ – ಕಾಂಗ್ರೆಸ್ ವಿರುದ್ಧ ಬೀದಿಗಿಳಿಯಲು ರೆಡಿಯಾದ ಬಿಜೆಪಿ
ಪ್ರತಿ ವರ್ಷದಂತೆ ಈ ವರ್ಷ ಕೂಡ ಡಿಸೆಂಬರ್ಗೆ ಭಾರೀ ಡಿಮ್ಯಾಂಡ್ ಇದೆ ಅನ್ನೋದು ಗೊತ್ತಾಗಿದೆ. ಯಾಕಂದ್ರೆ ಈ ಡಿಸೆಂಬರ್ನಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳ ಚಿತ್ರ ಈ ಡಿಸೆಂಬರ್ನಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ಕೇವಲ ಎರಡೇ ವಾರದಲ್ಲಿ ಮೂರು ದೊಡ್ಡ ಚಿತ್ರಗಳು ಈ ವರ್ಷದ ಡಿಸೆಂಬರ್ನಲ್ಲಿ ಬಿಡುಗಡೆಯಾಗಿವೆ. ಆ ಪೈಕಿ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಕೂಡ ಒಂದು. ಸದ್ಯ ಮಾರ್ಕ್’ ಬೆಳ್ಳಿತೆರೆಯಲ್ಲಿ ಅಬ್ಬರಿಸುತ್ತಿದ್ದು ವಾರದ ದಿನದಲ್ಲಿ ಕೂಡ ಕೋಟಿ ಕಲೆಕ್ಷನ್ ಮಾಡ್ತಿದೆ. ಸಾಮಾನ್ಯವಾಗಿ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಯಾವುದೇ ಇರಲಿ.. ಸೋಮವಾರದ ಗಳಿಕೆಯಲ್ಲಿ ಕುಸಿತ ಕಾಣುತ್ತೆ. ಯಾಕೆಂದರೆ ವೀಕೆಂಡ್ ಮುಗಿಸಿ ಎಲ್ಲಾ ಕೆಲಸದತ್ತ ಮುಖ ಮಾಡಿರುತ್ತಾರೆ. ಆದರೆ ಮಾರ್ಕ್ ವಿಚಾರದಲ್ಲಿ ಪ್ರೇಕ್ಷಕರಲ್ಲಿ ವಾರದ ದಿನಗಳಲ್ಲಿ ಚಿತ್ರ ನೋಡುವ ಆಸಕ್ತಿ ಕಂಡು ಬಂದಿದೆ. ಬಾಕ್ಸಾಫೀಸ್ನಲ್ಲಿ ಕಳೆದ ಸೋಮವಾರ ಮಾರ್ಕ್” ₹ 1.15 ಕೋಟಿ ಕೊಳ್ಳೆ ಹೊಡೆದಿದೆ. ಮಂಗಳವಾರ ಕೂಡ ಒಂದು ಕೋಟಿಗೆ ಹೆಚ್ಚು ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ ವರದಿ ಪ್ರಕಾರ ಮಾರ್ಕ್ ಒಟ್ಟು ಗಳಿಕೆ 20 ಕೋಟಿಯಾಗಿದೆ. ಆದ್ರೆ ಸಿನಿಮಾ ತಂಡದ ಮೂಲಗಳ ಪ್ರಕಾರ ಮಾರ್ಕ್ ₹37 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಇನ್ನೂ ಈ ವರ್ಷ ಕ್ರಿಸ್ಮಸ್ಗೆ ತೆರೆಕಂಡಿರುವ ಕನ್ನಡ ಸಿನಿಮಾಗಳಲ್ಲಿ ’45’ ಕೂಡ ಒಂದು. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ’45 ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡುತ್ತೆ ಎಂದು ಟ್ರೇಡ್ ಎಕ್ಸ್ಪರ್ಟ್ಗಳು ಲೆಕ್ಕಾಚಾರ ಹಾಕಿದ್ದರು. ಸದ್ಯಕ್ಕೀಗ ’45’ ಸಿನಿಮಾ ಮೊದಲ ವೀಕೆಂಡ್ ಮುಗಿಸಿ ಮುನ್ನುಗ್ಗುತ್ತಿದೆ. ವೀಕೆಂಡ್ ನಂತ್ರ ಕಲೆಕ್ಷನ್ ಡಲ್ ಆಗಿದೆ. 45 ಸಿನಿಮಾ 5 ದಿನಕ್ಕೆ ಒಟ್ಟು 12 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನಕ್ಕೆ ಹೊಲಿಸಿದ್ರೆ, ನಂತರದ ದಿನಗಳಲ್ಲಿ ಸಿನಿಮಾ ಸಿನಿಮಾದ ಕಲೆಕ್ಷನ್ ಕಂಪ್ಲೀಟ್ ಡಲ್ ಆಗಿದೆ. ಸಿನಿಮಾದ ಬಗ್ಗೆ ರಿವ್ಯೋ ಮತ್ತು ರೇಟಿಂಗ್ ನೀಡದಂತೆ 45 ಸಿನಿಮಾ ಕೂಡ ಕೋರ್ಟ್ ಆರ್ಡರ್ ತಂದಿದ್ದು, ಈ ಸಿನಿಮಾವನ್ನ ಸೈಲೆಂಟ್ ಮಾಡಿಸಿದೆ ಅನ್ನೋ ಮಾತು ಮಾತು ಕೇಳಿ ಬರ್ತಿದೆ.
ಇನ್ನೂ ಮಾರ್ಕ್ ಮತ್ತು 45 ಸಿನಿಮಾಕ್ಕೂ ಮುಂಚೆ ತೆರೆಕಂಡ ಡೆವಿಲ್ ಆರ್ಭಟ ಕೂಡ ಕಮ್ಮಿಯಾಗಿದೆ. ಈ ಸಿನಿಮಾ 18 ದಿನಗಳಲ್ಲಿ 35 ಕೋಟಿ ಕಲೆಕ್ಷನ್ ಮಾಡಿದೆ. ಈ 3 ಸಿನಿಮಾದ ಮುಂದೆ ಬರಬಾಷೆಯ ಧುರಂಧರ್ ಅಬ್ಬರ ಮಾಡುತ್ತಿದೆ. ವೀಕೆಂಡ್ ಹಾಗೂ ನ್ಯೂ ಇಯರ್ ಸಂಭ್ರಮದಲ್ಲಿ ಧುರಂಧರ್ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಿದೆ. ವಿಶ್ವಾದ್ಯಂತ 1050 ಕೋಟಿ ರೂಪಾಯಿ ಗಳಿಸಿ ಈ ಚಿತ್ರ ಮುನ್ನುತ್ತಿದೆ. ಟೋಟಲ್ ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. 26ನೇ ದಿನವೂ ಭರ್ಜರಿ ಕಲೆಕ್ಷನ್ ಹಾಕುತ್ತಿದ್ದು, ಪ್ರತಿ ವೀಕೆಂಡ್ ಕೂಡ ಧುರಂಧರ್ ಸಿನಿಮಾಗೆ ಹಣದ ಹೊಳೆ ಹರಿಯುತ್ತಿದೆ.

ನೋಡಿರಿ

