ಕಾವ್ಯಳನ್ನ ಉಳಿಸಲು ಹೋಗಿ ತಾನು ಗೆಲ್ಲೋದನ್ನ ಮರೆತ ಗಿಲ್ಲಿ! – ಹೀಗೆ ಆದ್ರೆ ಟ್ರೋಫಿ ಗೆಲ್ಲಲ್ಲ ಎಂದ ಫ್ಯಾನ್ಸ್!

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕ್ಯಾಪ್ಟನ್ ಆದ್ರೆ ಹೇಗಿರ್ತಾರೆ? ಮನೆಯ ಜವಾಬ್ದಾರಿಯನ್ನ ಹೇಗೆ ನಿಭಾಯಿಸುತ್ತಾರೆ ಅಂತ ನೋಡಲು ವೀಕ್ಷಕರು ಕಾಯ್ತಾ ಇದ್ರು. ಸಹ ಸ್ಪರ್ಧಿಗಳ ಮನೆಯವರು ಕೂಡ ಇದನ್ನೇ ಹೇಳಿದ್ರು. ಇದೀಗ ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಆದ್ರೆ ಕ್ಯಾಪ್ಟನ್ ಆದ ಮೊದಲನೇ ದಿನಕ್ಕೆ ನಿರಾಸೆ ಮಾಡಿದ್ದಾರೆ ಗಿಲ್ಲಿ.
ಇದನ್ನೂ ಓದಿ: ನನ್ನ ಹಿಂದೆ ಬಿದ್ದು, ಪದೇ ಪದೆ ಮೆಸೆಜ್ ಮಾಡ್ತಿದ್ರು! – ಸೂರ್ಯಕುಮಾರ್ ಯಾದವ್ ಮೇಲೆ ಖ್ಯಾತ ನಟಿ ಆರೋಪ!
ಹೌದು, ಕ್ಯಾಪ್ಟನ್ ಗಿಲ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಮನೆ ಜವಾಬ್ದಾರಿಯನ್ನ ಚೆನ್ನಾಗಿ ನಿಭಾಯಿಸ್ತಾರೆ ಎಂದು ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಮೇಲ್ನೊಟಕ್ಕೆ ಗಿಲ್ಲಿ ಕಾವ್ಯಗೆ ಬಕೆಟ್ ಹಿಡಿದಂತೆ ಕಾಣಿಸ್ತಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಗಿಲ್ಲಿ ಕಾವ್ಯಳನ್ನ ಸೇವ್ ಮಾಡಲು ಹೋಗಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮನೆಯ ಕ್ಯಾಪ್ಟನ್ ಆಗಿರುವುದರಿಂದ ಮನೆಯ ಸದಸ್ಯರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ. ಮನೆಯ ಒಂದೊಂದು ಜೋಡಿಯ ವಾದ ಪ್ರತಿವಾದವನ್ನು ಆಲಿಸಿ, ಅದರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹೋಗುವಂತೆ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಗಿಲ್ಲಿಗೆ ನೀಡಲಾಗಿದೆ. ಈ ವೇಳೆ ಕಾವ್ಯ ಜೊತೆಗೆ ಒಂದಷ್ಟು ಮಂದಿಯ ಹೆಸರುಗಳು ಕೇಳಿಬಂದಿವೆ. ರಕ್ಷಿತಾ ಅವರು ಕಾವ್ಯ ಎದುರಾಳಿಯಾಗಿ, ನನಗೆ ಕಾವ್ಯ ಅವರಲ್ಲಿ ವ್ಯಕ್ತಿತ್ವ, ಮನುಷ್ಯತ್ವ ಕಾಣಿಸ್ತಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಈ ನಡುವೆ ಕಾವ್ಯ ಎದುರಾಳಿಯಾಗಿದ್ದ ರಾಶಿಕಾ ಮತ್ತು ಧ್ರುವಂತ್ ಅವರನ್ನು ಗಿಲ್ಲಿ ನಾಮಿನೇಟ್ ಮಾಡಿದ್ದಾರೆ. ಇದನ್ನು ಅಶ್ವಿನಿ ಗೌಡ ಖಂಡಿಸಿದ್ದಾರೆ. ಇಲ್ಲಿ ಎಲ್ಲಾ ಅಂದುಕೊಂಡಂತೆಯೇ ನಡೆಯುತ್ತಿದೆ ಎಂದಿದ್ದಾರೆ. ಅಲ್ಲದೆ, ಗಿಲ್ಲಿ ನಿರ್ಧಾರಕ್ಕೆ ಧ್ರುವಂತ್ ಮತ್ತು ರಾಶಿಕಾ ಕೂಡ ಅಸಹನೆ ವ್ಯಕ್ತಪಡಿಸಿದ್ದಾರೆ. ನಂತರ ಇದಕ್ಕೆ ಪ್ರತಿ ಹೇಳಿಕೆ ನೀಡಿರುವ ಗಿಲ್ಲಿ ನಟ, ಇಲ್ಲಿ ಯಾವುದೇ ಫೇವರಿಸಂ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಗಿಲ್ಲಿ ನಟ ಹೇಳಿದ್ದಾರೆ.
ಆದ್ರೆ ಗಿಲ್ಲಿ ಪ್ರತಿ ಸಲವೂ ಕಾವ್ಯಳನ್ನ ಸೇವ್ ಮಾಡ್ತಾ ಇದ್ದಿದ್ದು ವೀಕ್ಷಕರಿಗೆ ಇಷ್ಟ ಆಗಿಲ್ಲ. ಗಿಲ್ಲಿ ಯಾಕೋ ಆಟವನ್ನ ಮರೆತಂತೆ ಕಾಣ್ತಿದೆ. ಕಾವ್ಯಳನ್ನ ಉಳಿಸಲು ತನ್ನ ಆಟವನ್ನ ಮರಿತಾ ಇದ್ದಾರೆ. ಹೀಗೆ ಮಾಡಿದ್ರೆ ಗಿಲ್ಲಿ ಟ್ರೋಫಿ ಗೆಲ್ಲೋದು ಡೌಟ್ ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

