ನನ್ನ ಹಿಂದೆ ಬಿದ್ದು, ಪದೇ ಪದೆ ಮೆಸೆಜ್ ಮಾಡ್ತಿದ್ರು! – ಸೂರ್ಯಕುಮಾರ್ ಯಾದವ್ ಮೇಲೆ ಖ್ಯಾತ ನಟಿ ಆರೋಪ!

ಭಾರತ ಟಿ20 ತಂಡ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಯಾಕೋ ಸೌಂಡ್ ಮಾಡ್ತಿಲ್ಲ. ಕಳೆದ ಹಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಇದೀಗ ಸೂರ್ಯ ಬೇರೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ಸೂರ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಮಾಳು ಅಣ್ಣ ಹೊರಗೆ ಹೋಗೋದಕ್ಕೆ ನೀನೇ ಕಾರಣ – ರಕ್ಷಿತಾ ಮೇಲೆ ಸ್ಪಂದನಾ ಗರಂ!
ಸೂರ್ಯಕುಮಾರ್ ಯಾದವ್ ಈ ವರ್ಷ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ವರ್ಷ ಸೂರ್ಯ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಇತ್ತೀಚೆಗೆ ಸೂರ್ಯ ನಾನು ಫಾರ್ಮ್‌ನಲ್ಲಿ ಇದ್ದೇ, ಬ್ಯಾಟ್‌ನಿಂದ ರನ್ ಬರ್ತಿದೆ ಅಂತ ಹೇಳಿಕೆ ನೀಡಿ ಟ್ರೋಲ್‌ಗೆ ಒಳಗಾಗಿದ್ದರು. ಇದೀಗ ಖ್ಯಾತ ಬಾಲಿವುಡ್ ನಟಿ ಖುಷಿ ಮುಖರ್ಜಿ ಸೂರ್ಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ನಿರಂತರವಾಗಿ ನಮ್ಮ ಜತೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹಲವು ಕ್ರಿಕೆಟಿಗರು ನನ್ನ ಹಿಂದೆ ಬಿದ್ದಿದ್ದರು. ಈ ಪೈಕಿ ಸೂರ್ಯಕುಮಾರ್ ಯಾದವ್ ಸಾಕಷ್ಟು ಮೆಸೇಜ್ ಮಾಡುತ್ತಿದ್ದರು. ಆದರೆ ನಮ್ಮಿಬ್ಬರ ನಡುವೆ ಹೆಚ್ಚಿನ ಮಾತುಕತೆ ನಡೆದಿಲ್ಲ. ನಾನು ಅವರ ಜತೆ ಸಂಪರ್ಕ ಹೊಂದಲು ಬಯಸಲಿಲ್ಲ. ಯಾರೊಂದಿಗೂ ಲಿಂಕ್ ಆಗುವುದು ನನಗೆ ಇಷ್ಟವಿಲ್ಲ. ಹೀಗಾಗಿ ನಮ್ಮ ನಡುವೆ ಯಾವುದೇ ಸಂಪರ್ಕವಿಲ್ಲ ಎಂದು ಖುಷಿ ಮುಖರ್ಜಿ ಹೇಳಿದ್ದಾರೆ.
ಯಾರು ಈ ಖುಷಿ ಮುಖರ್ಜಿ?
ದಕ್ಷಿಣ ಭಾರತದ ಸಿನಿಮಾಗಳ ಜತೆ ರಿಯಾಲಿಟಿ ಶೋ ಹಾಗೂ ಬೋಲ್ಡ್ ವೆಬ್ ಸೀರಿಸ್‌ನಲ್ಲಿ ಖುಷಿ ಮುಖರ್ಜಿಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಹಾಗೂ ಗಮನ ಸೆಳೆಯುವಂತ ಹೇಳಿಕೆ ನೀಡುವುದು ಹೊಸತೇನಲ್ಲ. 24 ನವೆಂಬರ್ 1996ರಲ್ಲಿ ಕೋಲ್ಕತಾದಲ್ಲಿ ಜನಿಸಿದ ಖುಷಿ ಮುಖರ್ಜಿ, 2013ರಲ್ಲಿ ತಮಿಳಿನ ಅಂಜಲ್ ಥುರಾಯಿ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದಾದ ಬಳಿಕ ತೆಲುಗಿನ ಡೋಂಗ್ ಪ್ರೇಮಾ, ಹಾರ್ಟ್ ಅಟ್ಯಾಕ್ ಹಾಗೂ ಬಾಲಿವುಡ್‌ನಲ್ಲಿ ಶೃಂಗಾರ್ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಮನ ಸೆಳಯುವಲ್ಲಿ ಯಶಸ್ವಿಯಾಗಿದ್ದರು.
ಖುಷಿ MTV ಯ ಸ್ಪ್ಲಿಟ್ಸ್‌ವಿಲ್ಲಾ 10 ಮತ್ತು ಲವ್ ಸ್ಕೂಲ್ 3 ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಜನಪ್ರಿಯರಾದರು. ಅವರು ಬಾಲ್ವೀರ್ ರಿಟರ್ನ್ಸ್‌ನಲ್ಲಿ ಜ್ವಾಲಾ ಪರಿ ಮತ್ತು ಪೌರಾಣಿಕ ನಾಟಕ ಕಹತ್ ಹನುಮಾನ್ ಜೈ ಶ್ರೀ ರಾಮ್‌ನಂತಹ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.ಇದರ ಜತೆಗೆ ಅವರು ಅಡಲ್ಟ್ ಥೀಮ್ ಇರುವ ಭಾರತೀಯ ವೆಬ್ ಸರಣಿಯ ಪ್ರಸಿದ್ಧ ಮುಖವಾಗಿಯೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ನೋಡಿರಿ

