ಮಾಳು ಅಣ್ಣ ಹೊರಗೆ ಹೋಗೋದಕ್ಕೆ ನೀನೇ ಕಾರಣ – ರಕ್ಷಿತಾ ಮೇಲೆ ಸ್ಪಂದನಾ ಗರಂ!

ಮಾಳು ಅಣ್ಣ ಹೊರಗೆ ಹೋಗೋದಕ್ಕೆ ನೀನೇ ಕಾರಣ – ರಕ್ಷಿತಾ ಮೇಲೆ ಸ್ಪಂದನಾ ಗರಂ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪಂದನಾ ಸೋಮಣ್ಣ ಸೇವ್‌ ಆಗುತ್ತಲ್ಲೇ ಬಂದಿದ್ದಾರೆ. ಇದೀಗ ಸ್ಪಂದನಾ ಮಾಳು ವಿಚಾರವನ್ನ ಇಟ್ಟುಕೊಂಡು ರಕ್ಷಿತಾ ಜೊತೆ ಜಗಳವಾಡಿದ್ದಾರೆ. ಇದೀಗ ಈ ಜಗಳ ಇನ್ನೊಂದು ಹಂತಕ್ಕೆ ತಲುಪಿದೆ.

ಇದನ್ನೂ ಓದಿ: ಕನ್ನಡ ಕಿರುತೆರೆ ನಟಿ ದುರಂತ ಅಂತ್ಯ! – ನಂದಿನಿ ಸಾವಿಗೆ ಇದೇ ಕಾರಣವಾಯ್ತಾ?

ಬಿಗ್‌ಬಾಸ್ ಮನೆಯಲ್ಲಿ ಸ್ಪಂದನಾ ರಕ್ಷಿತಾಳ ಕೆಣಕಿದ್ದಾರೆ. ಮಾಳು ಎಲಿಮಿನೇಟ್‌ ಆಗಲು ರಕ್ಷಿತಾ ಕಾರಣ ಎಂದು ಹೇಳಿದ್ದಾರೆ. ಇದೀಗ ಇದ್ರ ಪ್ರೋಮೋ ರಿಲೀಸ್‌ ಆಗಿದ್ದು,  ಸ್ಪಂದನಾಗೆ ರಕ್ಷಿತಾ ಟಾಂಗ್‌ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಸ್ಪಂದನಾ ಕೂಡ ಕೌಂಟರ್‌ ಕೊಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾವ್ಯ ಮತ್ತು ಸ್ಪಂದನಾ ಇಬ್ಬರನ್ನೂ ರಕ್ಷಿತಾ ಹೆಚ್ಚಾಗಿ ಟಾರ್ಗೆಟ್‌ ಮಾಡ್ತಿದ್ದಾರೆ. ಸೋಮವಾರದ ನಾಮಿನೇಟ್‌ಗೆ ಇವರಿಬ್ಬರ ಹೆಸರನ್ನೇ ತೆಗೆದುಕೊಂಡಿದ್ದರು. ಈಗಲೂ ಅದೇ ಆಟವನ್ನು ಮುಂದುವರಿಸಿದ್ದಾರೆ. ವ್ಯಕ್ತಿತ್ವದಲ್ಲಿ ಸ್ಪಂದನಾಗಿಂತ ಮಾಳು ಅಣ್ಣ ಬೆಟರ್‌ ಇದ್ರು ಅಂತ ರಕ್ಷಿತಾ ಹೇಳ್ತಾರೆ. ಅದಕ್ಕೆ ಸ್ಪಂದನಾ ರಿಯಾಕ್ಟ್‌ ಮಾಡಿ, ‘ಬೇರೆಯವರನ್ನು ಪೋರ್ಟ್ರೇ ಮಾಡೋದು.. ಆಟ ಆಡೋದು’ ಅಂತ ಹೇಳ್ತಾರೆ.

ಮತ್ತೆ ರಕ್ಷಿತಾ ಮಾತನಾಡಿ, ‘ಮನೆಯಲ್ಲಿ ನನ್ನ ಅಭಿಪ್ರಾಯ ಪ್ರಶ್ನೆ ಮಾಡೋದಕ್ಕೆ ಯಾರಿಗೂ ಅಧಿಕಾರ ಕೊಟ್ಟಿಲ್ಲ ಅಂತ ಹೇಳ್ತಾರೆ. ರೇಜಿಗೆ ಹೋದ ಸ್ಪಂದನಾ, ಮನೆಯಲ್ಲಿ ನಿನ್ನ ಅಭಿಪ್ರಾಯವನ್ನ ನೀನು ಹೆಂಗೆ ಕೊಡ್ತೀಯೋ.. ನನ್ನ ಅಭಿಪ್ರಾಯವನ್ನೂ ನಾನು ಕೊಡ್ಬೋದು.. ಮಾಳು ಅಣ್ಣ ಹೊರಗೆ ಹೋಗೋದಕ್ಕೆ ನೀನೇ ಕಾರಣ.. ಮಾಳು ಅಣ್ಣ ಮಾತಾಡ್ಬೇಕಾದ ಜಾಗದಲ್ಲಿ ನೀನೇ ಮಾತಾಡಿ, ಅವರನ್ನ ಮನೆಗೆ ಕಳಿಸಿದ್ದೀಯಾ  ಅಂತ ಟಾಂಗ್‌ ಕೊಟ್ಟಿದ್ದಾರೆ.

ಒಟ್ನಲ್ಲಿ ರಕ್ಷಿತಾ ವರ್ಸಸ್‌ ಸ್ಪಂದನಾ-ಕಾವ್ಯ ಜಗಳ ಮನೆಯಲ್ಲಿ ಮುಗಿಯದಂತೆ ಕಾಣ್ತಿದೆ. ಒಂದಲ್ಲ ಒಂದು ವಿಚಾರಕ್ಕೆ ಪರಸ್ಪರರು ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದಾರೆ. ಟಾರ್ಗೆಟ್‌ ಮಾಡ್ತಿದ್ದಾರೆ. ಈ ಜಿದ್ದಿನಲ್ಲಿ ಗೆಲ್ಲೋದ್ಯಾರು, ಸೋಲೋದ್ಯಾರು ಕಾದುನೋಡಬೇಕಿದೆ.

Shwetha M