ಕನ್ನಡ ಕಿರುತೆರೆ ನಟಿ ದುರಂತ ಅಂತ್ಯ! – ನಂದಿನಿ ಸಾವಿಗೆ ಇದೇ ಕಾರಣವಾಯ್ತಾ?

ಕನ್ನಡ ಕಿರುತೆರೆ ನಟಿ ನಂದಿನಿ ಸಿ.ಎಂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಈ ಸಾವು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ನಂದಿನಿ ಬರೆದಿಟ್ಟಿರುವ ಡೈರಿಯೊಂದು ಪೊಲೀಸರಿಗೆ ಸಿಕ್ಕಿದೆ. ಸಾವಿಗೆ ಕಾರಣ ಏನು ಅನ್ನೋದು ಈ ಡೈರಿಯಲ್ಲಿ ಬರೆಯಲಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ತಿರುಪತಿಯಲ್ಲಿ ತೆರೆಯಿತು ವೈಕುಂಠ ದ್ವಾರ! – ವೆಂಕಟೇಶ್ವರನ ಕಣ್ತುಂಬಿಕೊಂಡ ಭಕ್ತ ಸಾಗರ!
ನಟಿ ನಂದಿನಿ ಸಿ.ಎಂ. ಅವರು ಕೆಂಗೇರಿಯ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದೀಗ ಅವರ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಪೊಲೀಸ್ ತನಿಖೆಯಿಂದ ಹೊರಬಂದಿದೆ. ನಂದಿನಿ ಬರೆದಿಟ್ಟಿರೋ ಒಂದು ಡೈರಿ ಪೊಲೀಸರಿಗೆ ಸಿಕ್ಕಿದೆ. ಆ ಡೈರಿಯಲ್ಲಿ ನಂದಿನಿ ತಮ್ಮ ನೋವನ್ನ ತೋಡ್ಕೊಂಡಿದ್ದಾರೆ. ನನಗೆ ಸರ್ಕಾರಿ ಕೆಲಸ ಅಂದ್ರೆ ಇಷ್ಟ ಇಲ್ಲ, ನನಗೆ ಆಕ್ಟಿಂಗ್ ಅಂದ್ರೆ ಪ್ರಾಣ. ಆದ್ರೆ ಮನೇಲಿ ಯಾರೂ ನನ್ನ ಮಾತು ಕೇಳ್ತಿಲ್ಲ ಅಂತ ಬರೆದಿದ್ದಾರೆ.
ಕಳೆದ ಭಾನುವಾರ ಸಂಜೆ ನಂದಿನಿ ತಮ್ಮ ಸ್ನೇಹಿತ ಪುನೀತ್ ಅನ್ನೋರ ಮನೆಗೆ ಹೋಗಿದ್ರಂತೆ. ಅಲ್ಲಿಂದ ರಾತ್ರಿ ಸುಮಾರು 11.23ರ ಹೊತ್ತಿಗೆ ಪಿಜಿಗೆ ವಾಪಸ್ ಬಂದಿದ್ದಾರೆ. ಬಂದವರೇ ರೂಮ್ ಲಾಕ್ ಮಾಡ್ಕೊಂಡಿದ್ದಾರೆ. ನಂದಿನಿ ರೂಮ್‌ಗೆ ಹೋದ ಮೇಲೆ ಪುನೀತ್ ಅವರಿಗೆ ಫೋನ್ ಮಾಡಿದ್ದಾರೆ. ಆದ್ರೆ ನಂದಿನಿ ಕರೆ ಸ್ವೀಕರಿಸಿಲ್ಲ. ಗಾಬರಿಯಾದ ಪುನೀತ್, ಪಿಜಿ ಮ್ಯಾನೇಜರ್‌ಗೆ ಫೋನ್ ಮಾಡಿ ವಿಷಯ ಹೇಳಿದ್ದಾರೆ. ಮ್ಯಾನೇಜರ್ ಹೋಗಿ ನೋಡಿದಾಗ ನಂದಿನಿ ಕಿಟಕಿಗೆ ವೇಲ್ ಬಿಗಿದುಕೊಂಡು ಪ್ರಾಣ ಕಳ್ಕೊಂಡಿರೋದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ತಕ್ಷಣ ಪಿಜಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಡೈರಿಯನ್ನ ವಶಕ್ಕೆ ಪಡೆದಿದ್ದಾರೆ. ನಟನೆ ಮತ್ತು ಕುಟುಂಬದ ನಡುವಿನ ಸಂಘರ್ಷವೇ ಈ ಸಾವಿಗೆ ಕಾರಣನಾ ಅಥವಾ ಬೇರೆ ಏನಾದ್ರೂ ಇದ್ಯಾ ಅಂತ ಪೊಲೀಸರು ತನಿಖೆ ಮಾಡ್ತಿದ್ದಾರೆ.
ನಂದಿನಿ ಸಾವಿಗೆ ಕಾರಣವೇನು?
ಅಂದ್ಹಾಗೆ ನಂದಿನಿ ಅವರ ತಂದೆ 3 ವರ್ಷಗಳ ಹಿಂದೆಯೇ ತೀರಿಕೊಂಡಿದ್ರು. 2023ರಲ್ಲಿ ಅನುಕಂಪದ ಆಧಾರದ ಮೇಲೆ ನಂದಿನಿಗೆ ಸರ್ಕಾರಿ ಕೆಲಸದ ಆಫರ್ ಕೂಡ ಬಂದಿತ್ತಂತೆ. ಎಷ್ಟೋ ಜನ ಸರ್ಕಾರಿ ಕೆಲ್ಸಕ್ಕಾಗಿ ಹಗಲು ರಾತ್ರಿ ಓದಿ ಕಾದು ಕುತ್ಕೋತಾರೆ, ಆದ್ರೆ ನಂದಿನಿ ನನಗೆ ಆಕ್ಟಿಂಗ್ ಇಷ್ಟ ಅಂತ ಹೇಳಿ ಆ ಸರ್ಕಾರಿ ಕೆಲಸವನ್ನೇ ಬೇಡ ಅಂದಿದ್ದರಂತೆ. ಆದ್ರೆ ನಂದಿನಿ ಮನೆಯವರು ಓದು, ಸರ್ಕಾರಿ ಕೆಲ್ಸ ಸೇರಿಕೊ ಅಂತ ಒತ್ತಾಯ ಮಾಡಿದ್ರೂ, ನಂದಿನಿ ಮಾತ್ರ ನಟಿನೇ ಆಗ್ತೀನಿ ಅಂತ ಹಠ ಹಿಡಿದಿದ್ರು. ಮನೆಯವರ ಮಾತು ಮೀರಿ, ಇದೇ ಆಗಸ್ಟ್ ತಿಂಗಳಲ್ಲಿ ಕೆಂಗೇರಿ ಹತ್ತಿರ ಇರೋ ಪಿಜಿಗೆ ಬಂದು ಸೇರಿಕೊಂಡಿದ್ರು.

ನೋಡಿರಿ

