ಸಿದ್ದು ಡೆಲ್ಲಿ ಟ್ರಿಪ್ ಹಣ್ಣೋ? ಕಾಯೋ? – ಜನವರಿ 19ಕ್ಕೆ ವಿಶೇಷ

ರಾಷ್ಟ್ರ ರಾಜಕಾರಣದ ಹೆಡ್ ಕ್ವಾಟ್ರಸ್ ದೆಹಲಿಗೆ ಸಿಎಂ ಸಿದ್ದರಾಮಯ್ಯ ಮೊನ್ನೆ ಹೋದಾಗ ಸಿಎಂ ಕುರ್ಚಿ ಬೆಳವಣಿಗೆ ಏನಾದ್ರು ಮೈಲೇಜ್ ಸಿಗುತ್ತಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಯಾಕಂದ್ರೆ ಸಿಎಂ ಸಿದ್ದರಾಮಯ್ಯ CWC ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ರಾಜ್ಯದ ಬಗ್ಗೆ ಏನಾದರೂ ಮಾತನಾಡುತ್ತಾರಾ? ಕುರ್ಚಿ ಪೈಟ್‌ಗೆ ಫನಲ್ ಟಚ್ ಕೊಡ್ತಾರಾ ಅನ್ನೋ ಕುತೂಹಲ ಹೆಚ್ಚಾಗಿತ್ತು. ಆದ್ರೆ ಇದ್ಯಾವುದು ಆಗದೇ ಸಿಎಂ ಭೇಟಿ ಬರೀ CWC ಸಭೆಗೆ ಸೀಮಿತವಾಗಿತ್ತು. ಆದ್ರೆ ಈ ಮೀಟಿಂಗ್ ಬಳಿಕ ಸಿಎಂ ಬದಲಾವಣೆಗೆ ಅಲ್ಲ, ಸಂಪುಟ ಪುನರ್‌ರಚನೆಗೆ ಮೈಲೇಜ್ ಸಿಕ್ಕಿದೆ.
ಇದನ್ನೂ ಓದಿ: ರಾಜ್ಯದ ಗೃಹಲಕ್ಷ್ಮಿಯರಿಗೆ ಗುಡ್‌ನ್ಯೂಸ್! – ಮಹಿಳೆಯರಿಗಾಗಿ ಹೊಸ ಸೇವೆ ಆರಂಭ!
ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಹಿಂದೆ ಡೆಲ್ಲಿಗೆ ಹೋಗಿದ್ರು. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಆಗಿ, ಸಿಎ ಕುರ್ಚಿ ಕಿತ್ತಾಟಕ್ಕೆ ತೆರೆ ಎಳೆಯುತ್ತಾರೆ ಅಂತ ಎಲ್ಲರು ಅಂದ್ಕೊಂಡಿದ್ರು. ಆದ್ರೆ ಅಲ್ಲಿ ಏನೂ ಆಗಿಲ್ಲ. ಆದ್ರೆ ಸಿದ್ದರಾಮಯ್ಯ ಭೇಟಿ ಬಳಿಕ ಸಂಕ್ರಾಂತಿ ಬಳಿಕ ವಿಶೇಷ ಇರುವುದು ಪಕ್ಕಾ ಆಗಿದೆ. CWC ಸಭೆಯ ಸಿಎಂ ಸಿದ್ದರಾಮಯ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿದ್ರು, ಈ ವೇಳೆ ವೇಣುಗೋಪಾಲ್ ಜನವರಿಯಲ್ಲಿ ಬಂದು ಭೇಟಿ ಆಗುವಂತೆ ಸೂಚಿಸಿದ್ದಾರೆ. ಆದ್ರೆ ರಾಹುಲ್ ಗಾಂಧಿಯನ್ನ ಭೇಟಿ ಆಗೋಕೆ ಸಿಎಂಗೆ ಆಗಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯರ ದೆಹಲಿ ಭೇಟಿ ಕೇವಲ CWC ಸಭೆಗಷ್ಟೇ ಸೀಮಿತವಾಗಿದೆ.
ಸಂಕ್ರಾಂತಿ ನಂತ್ರ ಸಂಪುಟ ಪುನರ್‌ರಚನೆ ಫಿಕ್ಸ್ ಆಗುತ್ತಾ?
ಅಂದಹಾಗೇ ಜನವರಿ 19ಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ವಿಶೇಷ ಇರಲಿದೆ ಅಂತ ಹೇಳಲಾಗ್ತಿದೆ. ಅಂದ್ರೆ ಜನವರಿ19 ರಿಂದ 26ರೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಪುನರ್ ರಚನೆ ಆಗಲಿದೆ ಎನ್ನಲಾಗ್ತಿದೆ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ಆದ್ರೆ 16 ರಿಂದ 18 ಸಚಿವರನ್ನ ಸಂಪುಟದಿಂದ ಕೈ ಬಿಟ್ಟು ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಿಯಿದೆ. ಇದ್ರಲ್ಲಿ ಮುಖ್ಯವಾಗಿ ಸಿದ್ದರಾಮಯ್ಯ ಆಪ್ತರನ್ನ ಕೈ ಬಿಟ್ಟು ಡಿಕೆಶಿ ಆಪ್ತರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಹಾಗೇ ಡಿಕೆಶಿವಕುಮಾರ್ ಅವರ ಕೆಲ ಆಪ್ತರಿಗೂ ಸಂಪುಟದಿಂದ ಕೊಕ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಂಪುಟ ಪುನರ್‌ರಚನೆಯಲ್ಲಿ ಚೆಲುವರಾಯ ಸ್ವಾಮಿ, ಕೆ ಹೆಚ್ ಮುನಿಯಪ್ಪ, ಕೆ. ವೆಂಕಟೇಶ್, ಬೀದರ್‌ನ ರಹೀಂ ಖಾನ್ , ಜಮೀರ್ ಅಹ್ಮದ್ ಖಾನ್‌ರನ್ನೂ ಕೂಡ ಸಂಪುಟದಿಂದ ಬಿಡೋ ಸಾಧ್ಯತೆ ಇದೆ. ಒಂದು ವೇಳೆ ಜಮೀರ್ ಅಹ್ಮದ್ ಖಾನ್‌ರನ್ನ ಕೈ ಬಿಟ್ರೆ ಯುಟಿ ಖಾದರ್ ಮತ್ತು ತನ್ವೀರ್ ಸೇಠ್‌ರನ್ನ ಮಂತ್ರಿ ಮಾಡಬಹುದು ಎನ್ನಲಾಗ್ತಿದೆ. ಹಾಗೇ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನ ಕೂಡ ಕೈ ಬಿಟ್ಟು , ಅಲ್ಲಿಗೆ ರೂಪ ಶಶಿಧರ್‌ರನ್ನ ಮಂತ್ರಿ ಮಾಡೋ ಸಾಧ್ಯತೆಯಿದೆ. ಬಿಕೆ ಹರಿಪ್ರಸಾದ್ ಈ ಸಲ ಮಂತ್ರಿ ಆಗೋದು ಪಕ್ಕಾ.. ಇವರಿಗೆ ಇಡೀಗ ಕೊಟದಲ್ಲಿ ಶಿಕ್ಷಣ ಸಚಿವರಾಗಿರೋ ಮಧು ಬಂಗಾರಪ್ಪರನ್ನ ಕೈ ಬಿಡಲು ತೀರ್ಮಾನಿಸಲಾಗಿದೆ. ಈ ತರದಲ್ಲಿ ಕ್ಯಾಬಿನೆಟ್ ಪುನರ್ ರಚನೆ ಲೆಕ್ಕಾಚಾರಗಳು ನಡೆಯುತ್ತಿದೆ.
ಈಗ ಆಗ್ತಿರೋ ಬೆಳವಣಿಗೆ ನೋಡಿದ್ರೆ ಸದ್ಯಕ್ಕೆ ಯಾವ ಸಿಎಂ ಬದಲಾವಣೆ ಕೂಡ ಆಗಲ್ಲ, ಯಾಕಂದ್ರೆ ಸಂಪುಟ ಪುನರ್ ರಚನೆ ಆಗುವುದು ಪಕ್ಕಾ ಆಗ್ತಿದೆ. ಸಂಕ್ರಾಂತಿ ಮುಗಿಯುತ್ತಿದ್ದಂತೆ ಸಂಪುಟ ಪುನರ್ ರಚನೆ ಬಿಸಿಬಿಸಿ ಚರ್ಚೆ ಶುರುವಾಗುತ್ತೆ.. ಮೊನ್ನೆ ಕಾಂಗ್ರೆಸ್ ಹೈಕಮಾಂಡ್ CWC ಮೀಟಿಂಗ್‌ನಲ್ಲಿ ಸಿಎಂಗಳ ಸಭೆ ಮಾತ್ರ ಕರೆದಿದ್ದು, ಇದ್ದಕ್ಕೆ ಯಾವ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನ ಕರೆದಿಲ್ಲ. ಇದ್ರಿಂದ ಡಿಕೆಶಿ ಕೂಡ ಈ ಸಭೆಗೆ ಹೋಗಿಲ್ಲ. ಡಿಕೆಶಿಗೆ ಈ ಸಭೆಗೆ ಹೋಗಬಹುದು ಅನ್ನೋ ನೀರಿಕ್ಷೆ ಇತ್ತು. ಒಂದು ವೇಳೆ ಹೋಗಿದ್ರೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗುತಿತ್ತು. ನನ್ನ ಯಾವಾಗ ಸಿಎಂ ಮಾಡ್ತೀರಾ ಅಂತ ಕೇಳುವ ಅವಕಾಶ ಡಿಕೆಶಿಗೆ ಸಿಗುತಿತ್ತು.. ಆಗ ರಾಹುಲ್ ಗಾಂಧಿನೇ ಏನೋ ಭರವಸೆ ಕೊಟ್ಟಿದ್ದಾರೆ ಅನ್ನೋ ಸಮಾಧನ ಡಿಕೆಶಿಗೆ ಇರುತಿತ್ತು. ಆದ್ರೆ ಡಿಕೆಶಿ ಅಂದುಕೊಂಡಂತೆ ಆಗುತ್ತಿಲ್ಲ. ಡಿಕೆಶಿ ಕಾಣುತ್ತಿರುವ ಕನಸುಗಳು ನನಸಾಗುತ್ತಿಲ್ಲ ಅನ್ನೋ ಬೇಸರ ಕಾಡುತ್ತಿದೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಮನ್ಸೂಚನೆ ಸಿಗುತ್ತಿಲ್ಲ, ಹೀಗಾಗಿ ಹೈಕಮಾಂಡ್ ಕೂಡ ಸಂಪುಟ ಪುನರ್ ರಚನೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಕೂಡ ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ ಅಂತ ಹೇಳಿದೆ. ಅಂದ್ರೆ ಇಲ್ಲೇ ಗೊತ್ತಾಗುತ್ತೆ ಒಂದು ವೇಳೆ ಎರಡೂವರೆ ವರ್ಷಕ್ಕೆ ಅಧಿಕಾರ ಬಿಟ್ಟು ಕೊಡಬೇಕೆಂದು ಒಪ್ಪಂದ ಆಗಿದ್ರೆ, ಗೊಂದಲ ಅಂತ ಹೇಳುತ್ತಿದ್ದರು. ಆದ್ರೆ ಅವರು ಹಾಗೇ ಹೇಳಿಲ್ಲ. ಹೈಕಮಾಂಡ್ ಗೊಂದಲ ಸೃಷ್ಟಿ ಮಾಡಿಲ್ಲ, ಇದೆಲ್ಲಾ ಸ್ಥಳೀಯ ನಾಯಕರು ಮಾಡಿದ್ದು ಅಂತ ಹೇಳಿದ್ದಾರೆ. ಅಂದ್ರೆ ಒಪ್ಪಂದ ಆಗಿದ್ರೂ ಅದ್ದಕ್ಕೆ ಹೆಚ್ಚು ಮಹತ್ವ ಇಲ್ಲ ಎನ್ನುವಂತೆ ಕಾಣುತ್ತಿದೆ. ಹೀಗಾಗಿ ಬಹುತೇಕ ಕ್ಯಾಬಿನೆಟ್ ಪುನರ್‌ರಚನೆ ಆಗುವುದು ಫಿಕ್ಸ್..
ಇನ್ನೂ ಸಂಪುಟ ಪುನರ್ ರಚನೆ ಆದ್ರೆ ಸಿಎಂ ಆಗಿಯೇ ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷ ಕಂಟಿನ್ಯೂ ಮಾಡ್ತಾರೆ ಅಂತ ಹೇಳುವುದ್ದಕ್ಕೆ ಆಗಲ್ಲ. ಒಂದು ವೇಳೆ ಬದಲಾವಣೆ ಆದ್ರೂ ಮೇ ನಂತ್ರ ಅಂತನಾನೇ ಹೇಳಬಹುದು.. ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತೆ.. ಇದೇ ವೇಳೆ ಕೇರಳ ಮತ್ತು ತಮಿಳುನಾಡಿನ ವಿಧಾನಸಭಾ ಎಲೆಕ್ಷನ್ ಡೇಟ್ ಅನೌನ್ಸ್ ಆಗಬಹುದು.. ಹಾಗೇ ಇದೆ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಹಿಂದೂಳಿದ ವರ್ಗಗಳ ಆಯೋಗದ ಮೂಲಕ ನಡೆಸಿರುವ ಜಾತಿ ಸಮೀಕ್ಷೆ ರಿಪೋರ್ಟ್ ಸರ್ಕಾರದ ಕೈ ಸೇರಲಿದೆ. ಇದು ಸರ್ಕಾರದ ಕೈ ಸೇರಿದ ಮೇಲೆ ರಾಜ್ಯದಲ್ಲಿರೋ ಜಾತಿ ಸಮೀಕರಣದ ಬಗ್ಗೆ ಅಧಿಕೃತವಾಗಿ ಏರುಪೇರು ಆಗುತ್ತೆ. ಅಂದ್ರೆ ಅಹಿಂದ ವರ್ಗಗಳ ಶಕ್ತಿ ಸ್ಪಷ್ಟ ರೂಪ ಪಡೆದುಕೊಳ್ಳುತ್ತೆ. ಆಗ ಅದು ಸಿಎಂ ಕುರ್ಚಿಯನ್ನ ಗಟ್ಟಿ ಮಾಡುತ್ತೆ, ಡಿಕೆಶಿ ಸಿಎಂ ಕನಸು ಮತ್ತೆ ಮುಂದ್ದಕ್ಕೆ ಹೋಗುತ್ತೆ.. ಹೀಗಾಗಿ ಜನವರಿ ತಿಂಗಳು ಎಲ್ಲಾ ಉಹಾಪೋಹಾಗಳಿಗೆ ಬ್ರೇಕ್ ಹಾಕಿ ಒಂದು ಸ್ಪಷ್ಟ ಸಂದೇಶ ನೀಡಲಿದೆ. ಒಂದು ವೇಳೆ ಸಿಎಂ ಬದಲಾವಣೆ ಆದರೂ ಆಗದಿದ್ದರೂ ರಾಜಕೀಯ ಆಟ ಶುರುವಾಗುವುದಂತೂ ಪಕ್ಕಾ.

ನೋಡಿರಿ

