ಗಂಭೀರ್ ಕಳಪೆ ನಂ.2 – ಇನ್ನೂ ಅಧಃಪತನಕ್ಕೆ ಇಳಿಯುತ್ತಾ?
3 ಚಾಲೆಂಜ್ ಗೆಲ್ಲದಿದ್ರೆ ಗೇಟ್ ಪಾಸ್!

ಗಂಭೀರ್ ಕಳಪೆ ನಂ.2 – ಇನ್ನೂ ಅಧಃಪತನಕ್ಕೆ ಇಳಿಯುತ್ತಾ?3 ಚಾಲೆಂಜ್ ಗೆಲ್ಲದಿದ್ರೆ ಗೇಟ್ ಪಾಸ್!

ಇನ್ನೇನು 2025ನೇ ವರ್ಷದ ಎಂಡ್​ನಲ್ಲಿದ್ದೇವೆ. 2026ರ ವೆಲ್ಕಮ್​ಗೆ ಇಡೀ ಜಗತ್ತೇ ಸಿದ್ಧವಾಗ್ತಿದೆ. ನ್ಯೂಇಯರ್​ನೊಂದಿಗೆ ಹೊಸ ಸವಾಲುಗಳೂ ಶುರುವಾಗುತ್ವೆ. ಇದು ಕ್ರಿಕೆಟ್​ಗೂ ಹೊರತಲ್ಲ. ಗೌತಮ್ ಗಂಭೀರ್ ಅವ್ರ ಕೋಚಿಂಗ್​ನಲ್ಲಿ ಈ ವರ್ಷ ಸಿಹಿಕಹಿ ಎಲ್ಲವೂ ಇದೆ. ಪಾಸಿಟಿವ್​ಗಿಂತ ನೆಗೆಟಿವಿಟಿಯೇ ಜಾಸ್ತಿ ಕಾಣ್ಸಿದೆ. ಗೌತಮ್ ಗಂಭೀರ್ ಅಂಡರ್​ನಲ್ಲಿ 2025ನೇ ವರ್ಷ ಭಾರತ ತಂಡಕ್ಕೆ ಚಾಲೆಂಜಿಂಗ್ ಆಗಿತ್ತು ಅಂತಾನೇ ಹೇಳ್ಬೋದು. ಯಾಕಂದ್ರೆ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಸಿಕ್ಕ ಸಕ್ಸಸ್​​ ಟೆಸ್ಟ್ ಫಾರ್ಮೆಟ್​ನಲ್ಲಿ ಸಿಗ್ಲಿಲ್ಲ. ವರ್ಷದ ಆರಂಭದಲ್ಲೇ ಆಸೀಸ್ ವಿರುದ್ಧ ಕೊನೇ ಟೆಸ್ಟ್ ಮ್ಯಾಚ್ ಸೋತು ಡಬ್ಲ್ಯೂಟಿಸಿ ಫೈನಲ್​ ರೇಸ್​​ನಿಂದ ಹೊರ ಬಿದ್ದಿದ್ರು. ಅಲ್ಲಿಂದ ಶುರುವಾದ ಡೌನ್ ಫಾಲ್ ಹಾಗೇ ಕಂಟಿನ್ಯೂ ಆಗಿದೆ. ತವರಿನಲ್ಲೇ ಹೀನಾಯ ಸೋಲುಗಳನ್ನ ಕಂಡಿದೆ.

ಇದನ್ನೂ ಓದಿ : 2026ರಲ್ಲಿ ಕಡಿಮೆ ಬಜೆಟ್‌ನಲ್ಲಿ ಪ್ರವಾಸದ ಪ್ಲ್ಯಾನ್ ಮಾಡ್ತಾ ಇದ್ದೀರಾ? – ಈ 5 ಸ್ಥಳಗಳು ಬೆಸ್ಟ್

ಟೆಸ್ಟ್ ಮಾದರಿಯಲ್ಲಿ ಭಾರತಕ್ಕೆ ಅತ್ಯಂತ ಕಳಪೆ ವರ್ಷ!

2025ರಲ್ಲಿ ಭಾರತ ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದೆ. ರೆಡ್ ಬಾಲ್ ಫಾರ್ಮೆಟ್​ನಲ್ಲಿ ಭಾರತ ಯಾವತ್ತೂ ಟಾಪ್​ನಲ್ಲೇ ಇರ್ತಿತ್ತು. ಬಟ್ ಈ ವರ್ಷ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. 2025ರಲ್ಲಿ ಭಾರತ  ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನೊಂದಿಗೆ ಆರಂಭವಾಯ್ತು. 6 ವಿಕೆಟ್​ಗಳಿಂದ ಸೋಲೋ ಮೂಲಕ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ರೇಸ್​ನಿಂದಲೂ ಹೊರ ಬಿದ್ದಿತ್ತು. ಌಂಡ್ ನೆಕ್ಸ್​ಟ್ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ 5 ಪಂದ್ಯಗಳ ಇಂಗ್ಲೆಂಡ್ ಪ್ರವಾಸ ಮಾಡಿದ್ರು. 2-2 ಡ್ರಾದಲ್ಲಿ ಸರಣಿ ಕೊನೆಗೊಂಡಿತು. ಆ ನಂತ್ರ ಅಕ್ಟೋಬರ್​ನಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳನ್ನ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಆದ್ರೆ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಎರಡೂ ಪಂದ್ಯಗಳನ್ನ ಸೋತು ವೈಟ್ ವಾಶ್ ಮುಖಂಭಂಗ ಅನುಭವಿಸಿದ್ರು. ಅದ್ರಲ್ಲೂ ಫಸ್ಟ್ ಟೆಸ್ಟ್​ನಲ್ಲಿ 124 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿ ಕೇವಲ 93 ರನ್‌ಗಳಿಗೆ ಆಲೌಟ್ ಆಗಿದ್ರು. ಈ ವರ್ಷ ಭಾರತ ಟೋಟಲ್ಲಾಗಿ 10 ಪಂದ್ಯಗಳನ್ನ ಆಡಿದೆ.

ಟೆಸ್ಟ್ ನಲ್ಲಿ ಕಂಪ್ಲೀಟ್ ಫೇಲ್!

ಒಟ್ಟು ಪಂದ್ಯ        ಗೆಲುವು             ಸೋಲು             ಡ್ರಾ

10                         4                   5                 1

ಏಕದಿನ ಮಾದರಿಯಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ!

ಇನ್ನು ಏಕದಿನ ಫಾರ್ಮೆಟ್​ನಲ್ಲಿ ಭಾರತದ ಜರ್ನಿ ಚೆನ್ನಾಗೇ ಇದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. 3-0 ಅಂತರದಲ್ಲಿ ಸ್ವದೇಶಿ ಸರಣಿ ಗೆಲುವಿನೊಂದಿಗೆ ಜರ್ನಿ ಆರಂಭವಾಗಿತ್ತು. ಹಾಗೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ಗೆದ್ದು ಚಾಂಪಿಯನ್ಸ್ ಆಗಿದ್ರು. ಆದ್ರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 2-1 ಅಂತರದಲ್ಲಿ ಸೋತಿದ್ದು ಕಹಿಯಾಗಿ ಉಳಿದಿದೆ. ಅದಾದ ಮೇಲೆ ಇತ್ತೀಚೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದು ಗೆಲುವಿನೊಂದಿಗೆ ವರ್ಷವನ್ನ ಕಂಪ್ಲೀಟ್ ಮಾಡಿದ್ರು.

ಏಕದಿನದಲ್ಲಿ ಒಂದೇ ಸೋಲಿನ ಕಹಿ!

ಒಟ್ಟು ಪಂದ್ಯ         ಗೆಲುವು             ಸೋಲು             ಫಲಿತಾಂಶವಿಲ್ಲ

14                             11                     03                  00

ಟಿ-20 ಮಾದರಿಯಲ್ಲಿ ಸೋಲನ್ನೇ ಕಾಣದ ಭಾರತ!

ಇನ್ನು ಟಿ-20ಐ ಫಾರ್ಮೆಟ್ ಅಂತಾ ಬಂದ್ರೆ ಈ ವರ್ಷ ಭಾರತಕ್ಕೆ ಚರಿತ್ರೆಯಲ್ಲಿ ಬರೆದಿಡೋ ವರ್ಷವಾಗಿದೆ. ಘಟಾನುಘಟಿಗಳಿಂದಲೂ ಭಾರತವನ್ನ ಒಂದೇ ಒಂದು ಸರಣಿಯಲ್ಲೂ ಸೋಲಿಸೋಕೆ ಸಾಧ್ಯವಾಗಿಲ್ಲ. ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 4-1 ಅಂತರದ ಸರಣಿ ಗೆಲುವಿನೊಂದಿಗೆ ಜರ್ನಿ ಸ್ಟಾರ್ಟ್ ಆಯ್ತು.  ನಂತ್ರ ಏಷ್ಯಾಕಪ್​ನಲ್ಲಿ ಅಜೇಯವಾಗಿ ಚಾಂಪಿಯನ್ಸ್ ಆಗಿದ್ರು. ಫೈನಲ್ ಸೇರಿದಂತೆ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿದ್ದು ಟೂರ್ನಿಯ ಹೈಲೆಟ್ ಆಗಿತ್ತು. ಆ ಬಳಿ ಆಸ್ಟ್ರೇಲಿಯಾ ಹಾಗೇ ಸೌತ್ ಆಫ್ರಿಕಾ ವಿರುದ್ಧವೂ ಸರಣಿ ಗೆದ್ದು ಅಜೇಯವಾಗಿ ಮುನ್ನಡೆ ಸಾಧಿಸಿದೆ.

ಚುಟುಕು ಮಾದರಿಯಲ್ಲಿ ಭಾರತವೇ ಬಾಸ್!

ಪಂದ್ಯಗಳು        ಗೆಲುವು             ಸೋಲು             ಫಲಿತಾಂಶವಿಲ್ಲ

21                         16                    3                        2

ಒಟ್ಟಾರೆ ಈ ವರ್ಷ ಭಾರತ ಮೂರೂ ಮಾದರಿಯಲ್ಲೂ ಸೇರಿ ಒಟ್ಟು 45 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 31ರಲ್ಲಿ ಗೆದ್ದು 11 ರಲ್ಲಿ ಸೋತಿದೆ. ಮೂರು ಪಂದ್ಯಗಳಲ್ಲಿ ಫಲಿತಾಂಶ ಕಂಡಿಲ್ಲ. ಌಂಡ್ ಇಲ್ಲಿ ಗಂಭೀರ್ ಬಗ್ಗೆ ಇನ್ನೊಂದು ವಿಚಾರ ಹೇಳಲೇಬೇಕು. ಭಾರತದ ಎಲ್ಲಾ ಹೆಡ್​ಕೋಚ್​ಗಳ ಹಿಸ್ಟರಿ ತೆಗೆದಾಗ ಗ್ರೆಗ್ ಚಾಪೆಲ್ ಕಾಲದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಆಟಗಾರರು ಮತ್ತು ಕೋಚ್ ನಡುವೆ ಎಲ್ಲವೂ ಸರಿ ಇರ್ಲಿಲ್ಲ. ಆದ್ರೆ ಗಂಭೀರ್ ಟೆಸ್ಟ್ ಫಾರ್ಮೆಟ್​ನಲ್ಲಿ ಗ್ರೆಗ್ ಚಾಪೆಲ್​ಗಿಂತ ಕಳಪೆ ರೆಕಾರ್ಡ್ ಹೊಂದಿದ್ದಾರೆ. ಭಾರತದ ಟೆಸ್ಟ್ ಫಾರ್ಮೆಟ್​ ಇತಿಹಾಸದಲ್ಲೇ 2ನೇ ಅತ್ಯಂತ ಕಳಪೆ ಕೋಚ್ ಎನ್ನಿಸಿಕೊಂಡಿದ್ದಾರೆ. ಅಂದ್ರೆ ಗಂಭಿರ್ ಅಡಿಯಲ್ಲಿ ಭಾರತ ಆಡುವಂಥ ಮೂರು ಮ್ಯಾಚ್​ಗಳಲ್ಲಿ 2ರಲ್ಲಿ ಸೋಲು ಕಂಡಿದೆ. ಌಂಡ್ ಕಳೆದ 25 ವರ್ಷಗಳಲ್ಲಿ ಅತ್ಯಂತ ಕಳಪೆ ಕೋಚ್ ಎನಿಸಿಕೊಂಡಿದ್ದಾರೆ. ಸೋ ಲಾಸ್ಟ್ 25 ವರ್ಷಗಳ ಸ್ಟ್ಯಾಟ್ಸ್​​ಅನ್ನು ನೋಡೋದಾದ್ರೆ..

25 ವರ್ಷಗಳ ರೆಕಾರ್ಡ್ಸ್!

ಕೋಚ್                              ಅವಧಿ             ಸೋಲಿನ ಪರ್ಸೆಂಟೇಜ್

ಅನಿಲ್ ಕುಂಬ್ಳೆ               2016-17                5.9%

ಗ್ಯಾರಿ ಕ್ರಿಸ್ಟನ್                2008-11                18.2%

ಗ್ರೆಗ್ ಚಾಪೆಲ್               2005-07               22.2%

ಜಾನ್ ರೈಟ್                 2000-05               29.4%

ರಾಹುಲ್ ದ್ರಾವಿಡ್          2021-24               29.2%

ರವಿ ಶಾಸ್ತ್ರಿ                   2017-21                30.2%

ಡಂಕನ್ ಫ್ಲೆಚರ್             2011-15                43.6%

ಗೌತಮ್ ಗಂಭೀರ್          2024                    52.6%

ಸೋ ಈ ಮೇಲಿನ ಅಷ್ಟೂ ಅಂಕಿ ಅಂಶಗಳನ್ನ ನೋಡಿದಾಗ ದಿ ಬೆಸ್ಟ್ ಅನ್ಸಿರೋದು ಅನಿಲ್ ಕುಂಬ್ಳೆ. 5.9 ಪರ್ಸೆಂಟ್ ಅಷ್ಟೇ ಸೋಲು ಇದೆ. ಬಟ್ ಇವ್ರು ಒಂದೇ ವರ್ಷ ಕೋಚ್ ಆಗಿದ್ದು. ಈ ವೇಳೆ 17 ಟೆಸ್ಟ್‌ಗಳಲ್ಲಿ 12 ಗೆಲುವುಗಳು, 1 ಸೋಲು ಮತ್ತು 4 ಡ್ರಾ ಸಾಧಿಸಿದ್ರು. ಇನ್ನು ನಮ್ಮ ರಾಹುಲ್ ದ್ರಾವಿಡ್ ಅವ್ರ ಪಿರಿಯಡ್​ನಲ್ಲಿ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 14 ಗೆಲುವು, 7 ಸೋಲು ಮತ್ತು 3 ಡ್ರಾ ಇತ್ತು. ರವಿಶಾಸ್ತ್ರಿ ಕೂಡ ಒನ್ ಆಫ್ ದಿ ಬೆಸ್ಟ್ ಕೋಚ್ ಆಗಿದ್ರು. ಇವ್ರ ಅವಧಿಯಲ್ಲಿ 46 ಟೆಸ್ಟ್ ಪಂದ್ಯಗಳಲ್ಲಿ 28ರಲ್ಲಿ ಗೆಲುವು ಕಂಡಿದ್ರು. 60 ಪ್ಲಸ್ ವಿನ್ನಿಂಗ್ ಪರ್ಸೆಂಟೇಜ್ ಇದೆ. ಹೀಗೆ ಕಳೆದ 25 ವರ್ಷಗಳಲ್ಲಿ ಗಂಭೀರ್ ಮಾತ್ರನೇ ಎಲ್ರಿಗಿಂತ ಕಳಪೆ ಇದ್ದಾರೆ. ಬಟ್ ಇತಿಹಾಸವನ್ನ ಕೆದಕಿದ್ರೆ ಕಪಿಲ್​ದೇವ್ ನಂಬರ್ 1 ಪ್ಲೇಸ್​ನಲ್ಲಿದ್ದಾರೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ 8 ಟೆಸ್ಟ್ ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿತು. ಹೀಗಾಗಿ ಕಪಿಲ್ ಬಿಟ್ರೆ ನೆಕ್ಸ್​ಟ್ ಈಗ ಗಂಭೀರ್ ಇದ್ದಾರೆ. ಸೋ ಮುಂದಿನ ವರ್ಷ ಕಂ ಬ್ಯಾಕ್ ಮಾಡ್ಲೇಬೇಕಾಗುತ್ತೆ. ಌಂಡ್ ಸಾಲು ಸಾಲು ಸವಾಲುಗಳೂ ಇವೆ. ಅದ್ರಲ್ಲೂ ಈ ಮೂರು ಚಾಲೆಂಜ್​ಗಳನ್ನ ಗೆಲ್ಲಲೇಬೇಕಿದೆ.

ಗಂಭೀರ್ ಗೆ 3 ಅಗ್ನಿಪರೀಕ್ಷೆ!

  1. ಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ ಉಳಿಸಿಕೊಳ್ಳಬೇಕು
  2. ಏಕದಿನ ವಿಶ್ವಕಪ್ ಗೆ ತಂಡವನ್ನ ರೆಡಿ ಮಾಡಬೇಕು
  3. ಟೆಸ್ಟ್ ಕ್ರಿಕೆಟ್ ನಲ್ಲಿ ಡಬ್ಲ್ಯೂಟಿಸಿ ಫೈನಲ್ ಗೇರುವ ಸವಾಲು

Shantha Kumari