ಮಾರ್ಕ್‌ಗೆ ರಾಜ್ಯಾದ್ಯಂತ ಫುಲ್ ಮಾರ್ಕ್ಸ್‌ – 4 ದಿನದಲ್ಲಿ 35 ಕೋಟಿ ಕಲೆಕ್ಷನ್

ಮಾರ್ಕ್‌ಗೆ ರಾಜ್ಯಾದ್ಯಂತ ಫುಲ್ ಮಾರ್ಕ್ಸ್‌ – 4 ದಿನದಲ್ಲಿ 35 ಕೋಟಿ ಕಲೆಕ್ಷನ್

ಕಿಚ್ಚ ಸುದೀಪ್‌ ಅಭಿನಯದ ʻಮಾರ್ಕ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ಈ ಚಿತ್ರವು ಡಿಸೆಂಬರ್‌ 25ರ ಕ್ರಿಸ್‌ಮಸ್ ಪ್ರಯುಕ್ತ ತೆರೆಕಂಡಿತ್ತು. ಇದೀಗ ಈ ಸಿನಿಮಾದ ಮೊದಲ ವಾರಾಂತ್ಯದ ಗಳಿಕೆ ಎಷ್ಟು ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಚಿತ್ರತಂಡದ ಮೂಲಗಳೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಮಾರ್ಕ್‌ ಸಿನಿಮಾವು ಸುಮಾರು 35 ಕೋಟಿ ರೂ.ಗಳನ್ನು ಮೊದಲ ವಾರಾಂತ್ಯದಲ್ಲಿ ಬಾಚಿಕೊಂಡಿದೆಯಂತೆ.

ಕೆಲ ಟ್ರೇಡ್‌ ಅನಾಲಿಸ್ಟ್‌ ಪ್ರಕಾರ, ಮಾರ್ಕ್‌ ಸಿನಿಮಾವು 21 ಕೋಟಿ ರೂ. ಗಳಿಗೂ ಅಧಿಕ ಕಮಾಯಿ ಮಾಡಿದೆ ಎಂಬ ಮಾಹಿತಿ ಸಿಕ್ಕರೆ, ಚಿತ್ರತಂಡದ ಕಡೆಯಿಂದಲೇ ಈ ಸಂಪೂರ್ಣ ಮಾಹಿತಿ ಸಿಕ್ಕಂತಾಗಿದೆ. ನಾಲ್ಕು ದಿನಗಳಿಗೆ 35 ಕೋಟಿ ರೂ. ಗಳಿಕೆ ಆಗಿರುವುದು ನಿರ್ಮಾಪಕರಿಗೆ ಖುಷಿ ನೀಡಿದೆ ಎನ್ನಲಾಗಿದೆ. ಮಾರ್ಕ್’ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಕೆಲವೇ ತಿಂಗಳಲ್ಲಿ ಸಿನಿಮಾದ ಕೆಲಸವನ್ನು ಸುದೀಪ್ ಮಾಡಿ ಮುಗಿಸಿದ್ದರು. ಈ ನಿರೀಕ್ಷೆಯನ್ನು ತಲುಪಲು ಸಿನಿಮಾ ಯಶಸ್ವಿಯಾಗಿದೆ. ಈ ಚಿತ್ರ ಎಲ್ಲ ಕಡೆಗಳಿಂದ ಅದ್ಭುತ ಕಲೆಕ್ಷನ್ ಮಾಡುತ್ತಾ ಇದೆ. ಈ ಸಿನಿಮಾ ತಂಡದವರು ‘ಕ್ರಿಸ್ಮಸ್ ಬ್ಲಾಕ್​ಬಸ್ಟರ್’ ಎಂದು ಘೋಷಣೆ ಮಾಡಿದ್ದಾರೆ. ಮೊದಲ ನಾಲ್ಕು ದಿನಕ್ಕೆ ಚಿತ್ರ ಇಷ್ಟು ದೊಡ್ಡ ಮೊತ್ತ ಹರಿದು ಬಂದಿರುವುದು ತಂಡದ ಖುಷಿ ಹೆಚ್ಚಿಸಿದೆ. ಈ ಮೂಲಕ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: ಕ್ಯಾಪ್ಟನ್‌ ಆಗ್ತಿದ್ದಂತೆ ಗಿಲ್ಲಿ ಫೇವರಿಸಂ ಆಟ! – ಕಾವ್ಯಳನ್ನ ಸೇವ್‌ ಮಾಡಲು ಹೋಗಿ ಗಿಲ್ಲಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ?

ಕ್ರಿಸ್​ಮಸ್ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಸಾಲು ಸಾಲು ರಜೆಗಳು ಸಿಗುತ್ತವೆ. ಅನೇಕ ಕಂಪನಿಗಳಿಗೆ ವಾರ ಪೂರ್ತಿ ರಜೆ ಇರುತ್ತದೆ. ಕೆಲ ಶಾಲಾ-ಕಾಲೇಜುಗಳು ಕ್ರಿಸ್​​ಮಸ್ ರಜೆ ಘೋಷಣೆ ಮಾಡುತ್ತವೆ. ಇದು ಸಿನಿಮಾಗೆ ಸಹಕಾರಿ ಆಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರವಲ್ಲದೆ, ಸೋಮವಾರವೂ ಸಿನಿಮಾಗೆ ಉತ್ತಮ ಬುಕಿಂಗ್ ಇದೆ. ಬೆಂಗಳೂರು ಮಾತ್ರವಲ್ಲದೆ, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ ಸೇರಿದಂತೆ ರಾಜ್ಯದ ಅನೇಕ ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಕಿಚ್ಚ ಸುದೀಪ್ ಅವರ ಸ್ಟೈಲ್, ಸಿನಿಮಾದಲ್ಲಿನ ಅವರ ಮ್ಯಾನರಿಸಂ ಫ್ಯಾನ್ಸ್​ಗೆ ಇಷ್ಟ ಆಗಿದೆ. ‘ಮ್ಯಾಕ್ಸ್’ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿಪರದೆ ಮೇಲೆ‌ ಮೋಡಿ‌ ಮಾಡಿದೆ.

Kishor KV