ಕ್ಯಾಪ್ಟನ್‌ ಆಗ್ತಿದ್ದಂತೆ ಗಿಲ್ಲಿ ಫೇವರಿಸಂ ಆಟ! – ಕಾವ್ಯಳನ್ನ ಸೇವ್‌ ಮಾಡಲು ಹೋಗಿ ಗಿಲ್ಲಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ?

ಕ್ಯಾಪ್ಟನ್‌ ಆಗ್ತಿದ್ದಂತೆ ಗಿಲ್ಲಿ ಫೇವರಿಸಂ ಆಟ! – ಕಾವ್ಯಳನ್ನ ಸೇವ್‌ ಮಾಡಲು ಹೋಗಿ ಗಿಲ್ಲಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ?

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಗಿಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ದೊಡ್ಮನೆಯಲ್ಲಿ ಗಿಲ್ಲಿ ದರ್ಬಾರ್‌ ನಡೆಯುತ್ತಿದೆ. ಆದ್ರೀಗ ಕ್ಯಾಪ್ಟನ್‌ ಆಗುತ್ತಿದ್ದಂತೆ ಗಿಲ್ಲಿ ಫೇವರಿಸಂ ಆಟ ಶುರುಮಾಡಿದ್ರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಕಿಚ್ಚನಿಗೆ ಮತ್ತೆ ಟಾಂಗ್‌ ಕೊಟ್ಟ ದರ್ಶನ್‌ ಪತ್ನಿ! – ಸುದೀಪ್‌ ಮುಂದಿನ ನಡೆ ಏನು?

ಈ ವಾರ ಬಿಗ್‌ಬಾಸ್‌ ಗಿಲ್ಲಿ ನಟನಿಗೆ ಸ್ಪೆಷಲ್‌ ಪವರ್‌ ಕೊಟ್ಟಿದ್ದಾರೆ. ಗಿಲ್ಲಿಗೆ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಪವರ್ ಸಿಕ್ಕಿದೆ. ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಗಿಲ್ಲಿ ನಟ ಪಕ್ಷಪಾತ ಮಾಡಿರುವ ಕೇಳಿ ಬಂದಿದ್ದು, ಕ್ಯಾಪ್ಟನ್ ನಿರ್ಧಾರಕ್ಕೆ ಮನೆಮಂದಿ ಶಾಕ್‌ ಆಗಿದ್ದಾರೆ. ಅಶ್ವಿನಿ ಗೌಡ, ಗಿಲ್ಲಿ ನಿರ್ಧಾರಕ್ಕೆ ಚಪ್ಪಾಳೆ ತಟ್ಟಿ ವ್ಯಂಗ್ಯವಾಡಿದ್ದಾರೆ.

14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಇಬ್ಬರು ಸ್ಪರ್ಧಿಗಳು ನಾನೇಕೆ ಮನೆಯಲ್ಲಿ ಉಳಿಯಬೇಕು ಮತ್ತು ಎದುರಾಳಿಗೆ ಯಾಕೆ ಅರ್ಹತೆ ಇಲ್ಲ ಎಂಬುದರ ಬಗ್ಗೆ ಮಾತನಾಡಬೇಕು. ಇವರಿಬ್ಬರ ಮಾತುಗಳನ್ನು ಆಲಿಸಿ ಕ್ಯಾಪ್ಟನ್ ಗಿಲ್ಲಿ ನಟ ತಮ್ಮ ನಿರ್ಧಾರ ಪ್ರಕಟಿಸಬೇಕು. ಇಬ್ಬರಲ್ಲಿ ಒಬ್ಬರು ನಾಮಿನೇಟ್ ಆದ್ರೆ, ಮತ್ತೊಬ್ಬರು ಸೇವ್ ಆಗ್ತಾರೆ. ಇದೀಗ ಇದ್ರ ಪ್ರೋಮೋ ರಿಲೀಸ್‌ ಆಗಿದೆ. ಧ್ರುವಂತ್, ರಾಶಿಕಾ, ಸ್ಪಂದನಾ ಸೋಮಣ್ಣ ಮತ್ತು ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ನಾಮಿನೇಟ್ ಮಾಡಿದ್ದಾರೆ. ರಕ್ಷಿತಾ ತಮ್ಮ ವಾದದಲ್ಲಿ ನಿಮ್ಮಲ್ಲಿ ಮನುಷ್ಯತ್ವ ಮತ್ತು ಮಾನವೀಯತೆ ಕಾಣಿಸಲ್ಲ ಎಂದು ಹೇಳಿದ್ದಾರೆ. ಆದ್ರೆ ಈ ಮಾತು ಯಾರನ್ನ ಉದ್ದೇಶಿಸಿ ಹೇಳಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಧ್ವಜ ಪಡೆದುಕೊಳ್ಳುವ ವ್ಯಕ್ತಿ ತನ್ನ ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಬಹುತೇಕರು ಕಾವ್ಯಾ ಮತ್ತು ಧ್ರುವಂತ್ ಅವರನ್ನು ಆಯ್ಕೆ ಮಾಡಿಕೊಂಡು ತಾವು ಸೇವ್ ಆಗಲು ಪ್ರಯತ್ನಿಸಿದ್ದಾರೆ. ಆದ್ರೆ ಗಿಲ್ಲಿ ನಟ ತೆಗೆದುಕೊಂಡ ನಿರ್ಧಾರಕ್ಕೆ ನಾಮಿನೇಟ್ ಆಗಿರುವ ಸ್ಪರ್ಧಿಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ನಾನು ಫೇವರಿಸಂ ಮಾಡಿಲ್ಲ ಎಂದು ಗಿಲ್ಲಿ ನಟ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ನಾಮಿನೇಷನ್ ಪ್ರಕ್ರಿಯೆಯ ಪ್ರೋಮೋ ನೋಡಿದ ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯ ಹಿಂದೆ ಹೋಗುತ್ತಿರುವ ಗಿಲ್ಲಿ ನಟ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಗಿಲ್ಲಿ ಕಾವ್ಯ ಒಬ್ಬಳೇ ಚೆನ್ನಾಗಿ ಆಡುತ್ತಾ ಇರುವುದು ಅಂತ ಅಂದುಕೊಂಡಿದ್ದಾನೆ ಕಾವ್ಯ ಜಂಬದ ಕೋಳಿ ಎಂದು ಕಮೆಂಟ್ ಮಾಡಿದ್ದಾರೆ.

Shwetha M