ಹುಚ್ಚು ನಾಯಿ ಕಚ್ಚಿದ್ದ ಎಮ್ಮೆಯ ಹಾಲು, ಮೊಸರು ಕುಡಿದ 200 ಮಂದಿ! – ಆ ಮೇಲೆ ಏನಾಯ್ತು ಗೊತ್ತಾ?

ಭಾರತದಲ್ಲಿ ನಾಯಿ ಕಡಿತದ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಮಕ್ಕಳು, ವೃದ್ಧರು, ವಯಸ್ಕರು ಎನ್ನದೇ ನಾಯಿಗಳ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದಲ್ಲಿ ವಿಲಕ್ಷಣಕಾರಿ ಘಟನೆ ನಡೆದಿದೆ. ತಿಥಿ ಕಾರ್ಯಕ್ಕೆ ಹೋದವರು ಆಸ್ಪತ್ರೆಗೆ ಹೋಗುವಂತೆ ಆಗಿದೆ. ಹುಚ್ಚು ನಾಯಿ ಕಡಿತದಿಂದ ಎಮ್ಮೆ ಸಾವನ್ನಪ್ಪಿದ್ದು, ಅದರ ಹಾಲಿನಿಂದ ತಯಾರಿಸಿದ ಮೊಸರು, ಮಜ್ಜಿಗೆಯನ್ನ ಸೇವಿಸಿದ್ದಾರೆ. ಇದೀಗ ಗ್ರಾಮಸ್ಥರಲ್ಲಿ ಆತಂಕ ಶುರುವಾಗೊದೆ.
ಇದನ್ನೂ ಓದಿ: ದೊಡ್ಮನೆಯಲ್ಲಿ ಕ್ಯಾಪ್ಟನ್ ಗಿಲ್ಲಿ ದರ್ಬಾರ್! – ಮನೆ ಕೆಲಸ ಮಾಡಲ್ಲ ಎಂದ ಅಶ್ವಿನಿಗೆ ಟಾರ್ಚರ್ ಕೊಟ್ಟ ಗಿಲ್ಲಿ!
ಅಷ್ಟಕ್ಕೂ ಆಗಿದ್ದೇನು?
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಉಜ್ನಿ ಪ್ರದೇಶದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಡಿಸೆಂಬರ್ 23 ರಂದು ಉಜಾನಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಪಿಪ್ರೌಲ್ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ತಿಥಿ ಕಾರ್ಯ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಇಡೀ ಗ್ರಾಮಸ್ಥರನ್ನು ಆಹ್ವಾನ ಮಾಡಲಾಗಿತ್ತು. ಊಟದ ವೇಳೆ ಮೊಸರು ಮತ್ತು ಮಜ್ಜಿಗೆಯನ್ನ ನೀಡಲಾಗಿತ್ತು. ಅಲ್ಲಿ ಬಳಸಿದ್ದ ಮಜ್ಜಿಗೆ ಮತ್ತು ಮೊಸರನ್ನು ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು. ಆ ಎಮ್ಮೆಗೆ ಕೆಲವು ದಿನಗಳ ಹಿಂದೆ ಹುಚ್ಚು ನಾಯಿಯೊಂದು ಕಚ್ಚಿತ್ತು ಎನ್ನಲಾಗಿದೆ. ನಾಯಿ ಕಡಿತದಿಂದಾಗಿ ಎಮ್ಮೆ ಸಾವನ್ನಪ್ಪಿದೆ. ಇದೀಗ ಅದೇ ಎಮ್ಮೆ ಹಾಲಿನಿಂದ ತಯಾರಿಸಿದ ಮೊಸರು, ಮಜ್ಜಿಗೆಯನ್ನ ಸೇವಿಸಿರುವ ಗ್ರಾಮಸ್ಥರಲ್ಲಿ ಭಯ ಶುರುವಾಗಿದೆ.
ಡಿಸೆಂಬರ್ 26 ರಂದು ನಾಯಿ ಕಡಿತದಿಂದ ಎಮ್ಮೆ ಸಾವನ್ನಪ್ಪಿದೆ ಎಂದು ಹೇಳಲಾಗ್ತಿದೆ. ಇದು ಸೋಂಕು ಹರಡುವ ಸಾಧ್ಯತೆಯ ಬಗ್ಗೆ ಗ್ರಾಮದಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಇದೇ ಕಾರಣಕ್ಕೆ ಉಜ್ಜೈನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ದೌಡಾಯಿಸಿದ್ದಾರೆ. ಸುಮಾರು 200 ಮಂದಿ ರೇಬಿಸ್ ಔಷಧಿಯಲ್ಲಿ ಹಾಕಿಸಿಕೊಂಡಿದ್ದಾರೆ.
ಈ ಬಗ್ಗೆ ಅದೇ ಗ್ರಾಮದ ಮಹಿಳೆ ಜಶೋದಾ ದೇವಿ ಈ ಬಗ್ಗೆ ಮಾತನಾಡಿದ್ದಾರೆ. ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಹದಿಮೂರನೇ ದಿನದ ಕಾರ್ಯವಿತ್ತು. ಗ್ರಾಮದ 200ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಸೇರಿದ್ದು, ಎಲ್ಲರೂ ಊಟ ಮಾಡಿದ್ದರು. ಕಾರ್ಯಕ್ರಮ ಮುಗಿದ ನಂತರ, ಎಮ್ಮೆ ಸಾವನ್ನಪ್ಪಿದೆ. ಇದಾದ ಬಳಿಕ ನಾಯಿ ಕಚ್ಚಿರುವ ವಿಷಯ ಬೆಳಕಿಗೆ ಬಂದಿದೆ. ಇದ್ರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಅಲ್ಲಿನ ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಮಾತನಾಡಿದ್ದಾರೆ. ಗ್ರಾಮದಲ್ಲಿರುವ ಎಮ್ಮೆಯೊಂದಕ್ಕೆ ನಾಯಿ ಕಚ್ಚಿತ್ತು ಎನ್ನಲಾಗಿದೆ. ಕೊನೆಗೆ ಆ ಎಮ್ಮೆ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿದೆ. ಆ ಎಮ್ಮೆಯ ಹಾಲಿನಿಂದ ತಯಾರಿಸಿದ ಮೊಸರನ್ನ ರೈತರು ಸೇವಿಸಿದ್ದಾರೆ ಎಂದು ಗ್ರಾಮಸ್ಥರು ವರದಿ ಮಾಡಿದ್ದಾರೆ. ಮುನ್ನೆಚ್ಚರಿಕೆಯಾಗಿ, ಎಲ್ಲರಿಗೂ ರೇಬೀಸ್ ಲಸಿಕೆ ಹಾಕಿಸಿಕೊಳ್ಳಲು ಸೂಚಿಸಲಾಗಿದೆ. ಹಾಲನ್ನು ಕುದಿಸಿದ ನಂತರ ರೇಬೀಸ್ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಲಸಿಕೆ ಹಾಕಲಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ, ಗ್ರಾಮದಲ್ಲಿ ಪ್ರಸ್ತುತ ಯಾವುದೇ ರೋಗ ಹರಡಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ನೋಡಿರಿ

